ಬ್ರೇಕಿಂಗ್ ನ್ಯೂಸ್
30-01-24 08:17 pm Mangalore Correspondent ಕರಾವಳಿ
ಮಂಗಳೂರು, ಜ.30: ಕಾಶ್ಮೀರದಲ್ಲಿ ಲಾಲ್ ಚೌಕದಲ್ಲಿ ಧೈರ್ಯ ಇದ್ದವರು ರಾಷ್ಟ್ರ ಧ್ವಜ ಹಾರಿಸಿ ಎಂದಿದ್ದರು. ಆಗ ನಾವು ಬಿಜೆಪಿಯವರು ರಾಷ್ಟ್ರ ಧ್ವಜ ಹಾರಿಸಿದ್ದು, ಕಾಂಗ್ರೆಸಿನವರು ಎಲ್ಲಿದ್ದರು ? ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದು ಯಾರು? ಅಲ್ಲಿ ನಾವು ರಾಷ್ಟ್ರ ಧ್ವಜ ಹಾರಿಸಿದಾಗ ಲಾಠಿಚಾರ್ಜ್ ಮಾಡಿದ್ರಲ್ಲಾ ಕಾಂಗ್ರೆಸಿಗರು. ಇವರ ರಾಷ್ಟ್ರ ಧ್ವಜದ ಮೇಲಿನ ಪ್ರೇಮ ಆಗ ಎಲ್ಲಿತ್ತು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮಸ್ಥರೇ 50 ರೂ.ನಂತೆ ಸಂಗ್ರಹಿಸಿ ಆರು ಲಕ್ಷ ವೆಚ್ಚದಲ್ಲಿ ಧ್ವಜಸ್ತಂಭ ಏರಿಸಿದ್ದರು. ತಿಂಗಳ ಕಾಲ ಧ್ವಜಸ್ತಂಭದ ಕೆಲಸ ಮಾಡಿದ್ದರು. ಆದರೆ ಅಲ್ಲಿ ರಾಮನ ಮಂದಿರದ ನೆನಪಲ್ಲಿ ಕೇಸರಿ ಬಣ್ಣದ ಹನುಮ ಧ್ವಜ ಏರಿಸಿದ್ದನ್ನು ಸಿದ್ದರಾಮಯ್ಯರಿಗೆ ಸಹಿಸಕ್ಕಾಗಿಲ್ಲ.
ಇವರಿಗೆ ಈಗ ರಾಷ್ಟ್ರ ಧ್ವಜದ ಮೇಲೆ ಅಭಿಮಾನ ಉಕ್ಕಿ ಹರಿದಿದೆ. ರಾಷ್ಟ್ರ ಧ್ವಜದ ಅಭಿಯಾನ ಮಾಡುತ್ತಾರಂತೆ. ಆದರೆ ರಾಷ್ಟ್ರ ಧ್ವಜದ ಪ್ರಶ್ನೆ ಬಂದಾಗ, ಇವರೆಲ್ಲ ಸುಮ್ಮನಿದ್ದರು ಎನ್ನೋದನ್ನು ನಾವು ಪ್ರಶ್ನೆ ಮಾಡಲೇಬೇಕು.
ಸಿದ್ದರಾಮಯ್ಯ ತನ್ನ ಹೆಸರಲ್ಲಿ ರಾಮ ಇದೆ ಅಂತಾರೆ. ಹೆಸರಲ್ಲಿ ರಾಮ ಇದ್ದರೇನು, ಹೃದಯದಲ್ಲಿ ಟಿಪ್ಪು ಟಿಪ್ಪು ಅಂತಿದ್ದೀರಲ್ಲಾ ನೀವು. ವೀರಪ್ಪನ್ ಹೆಸರಿನಲ್ಲಿ ವೀರ ಮತ್ತು ಅಪ್ಪ ಎಂಬ ಹೆಸರು ಇದ್ದಂತೆ. ವೀರಪ್ಪನ್ ಅಂದ್ರೆ ಡಕಾಯಿತರು, ಕಳ್ಳರಿಗೆಲ್ಲ ಲೀಡರ್ ಆಗಿದ್ದವ ಎಂದು ಅಶೋಕ್ ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆ ಗೆಲುವೇ ನಮ್ಮ ಗುರಿ. ಲೋಕಸಭೆಯಲ್ಲಿ 28ಕ್ಕೆ 28 ಸ್ಥಾನ ಗೆದ್ದರೆ ಈ ಸರ್ಕಾರ ಒಂದು ತಿಂಗಳು ಇರಲ್ಲ. ಅಲ್ಲಿದ್ದವರೇ ಈ ಸರ್ಕಾರ ಇರಬಾರದು ಅಂತ ಬಿಟ್ಟು ಬರ್ತಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕೊಡುವ ಉತ್ತರವೇ ಇವರಿಗೆ ಕೊನೆ ಮೊಳೆಯಾಗಲಿದೆ. ಅದಕ್ಕಾಗಿ ನಾವು ಸಜ್ಜಾಗಬೇಕಿದೆ ಎಂದು ಅಶೋಕ್ ಹೇಳಿದರು.
Mangalore R Ashok slams congress during Bjp Satish Kumpala being district president. He questioned which government was there during national flag being placed at Idgah maiden.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm