ಬ್ರೇಕಿಂಗ್ ನ್ಯೂಸ್
27-01-24 01:52 pm Mangalore Correspondent ಕರಾವಳಿ
ಉಳ್ಳಾಲ, ಜ.27: ಪರುಶುರಾಮ ಸೃಷ್ಟಿ, ನಾಗಕ್ಷೇತ್ರ, ಕಾರಣಿಕ ದೈವ, ದೇವರನ್ನೊಳಗೊಂಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಎಂದೆಂದಿಗೂ ನಾನು ತಲೆಬಾಗಿ ಸಾಷ್ಟಾಂಗ ನಮಸ್ಕರಿಸುವೆ ಎಂದು ಬೆಂಗಳೂರಿನ ಬ್ರಹ್ಮಶ್ರೀ ಆನಂದ ಸಿದ್ಧಿ ಪೀಠಂನ ಸಂಸ್ಥಾಪಕರಾದ ಮಹರ್ಷಿ ಡಾ. ಆನಂದ ಗುರೂಜಿ ಹೇಳಿದರು.
ಕುಂಪಲದ ವ್ಯಾಸನಗರದ ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನದ ಮಾತುಗಳನ್ನಾಡಿದರು. ಮಂಗಳೂರು, ಉಡುಪಿಯವರು ಆಮಂತ್ರಿಸಿದರೆ ಎಂತದ್ದೇ ಕಾರ್ಯಕ್ರಮಗಳು ನಿಗದಿಯಾಗಿದ್ದರೂ ಬದಿಗೊತ್ತಿ ಬರುತ್ತೇನೆ. ಪರಶುರಾಮ ಸೃಷ್ಟಿಯ ಇಲ್ಲಿನ ಮಣ್ಣಿನ ಶಕ್ತಿ ಅಂತಹದು. ಕುಂಪಲದಂತಹ ಸಣ್ಣ ಪ್ರಾಂತ್ಯವು ಸಂಪೂರ್ಣ ಕೇಸರೀಕರಣಗೊಂಡು ಇಲ್ಲಿ ಅದ್ಭುತವಾದ ಧರ್ಮ ಜಾಗೃತಿಗೊಳಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ. ಇಂತಹ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ನಿಮ್ಮೆಲ್ಲರ ಹೃದಯ ಗೆಲ್ಲುವ ಸುವರ್ಣಾವಕಾಶ ಕಲ್ಪಿಸಿದ ಕಾರ್ಯಕ್ರಮದ ಆಯೋಜಕರಿಗೆ ನಾನು ಆಭಾರಿ ಎಂದರು.


ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ ಕುಂಪಲದಲ್ಲಿ ಆದಿಶಕ್ತಿ ಚಾಮುಂಡಿ ಕ್ಷೇತ್ರ ನಿರ್ಮಾಣದ ಮೂಲಕ ಇಲ್ಲಿನ ಜನರ ಬಹಳಷ್ಟು ದಿನಗಳ ಕನಸು ಸಾಕಾರಗೊಂಡಿದೆ. ಭಾರತ ದೇಶವು ರಾಮಾಯಣ, ಮಹಾಭಾರತ ಸಂಸ್ಕೃತಿಯ ಆಧಾರದಲ್ಲಿ ನಿಂತಿದೆ. ಗಾಂಧೀಜಿಯ ರಾಮರಾಜ್ಯ, ಗ್ರಾಮರಾಜ್ಯ ಪರಿಕಲ್ಪನೆಯ ಅರ್ಥ ರಾಮಾಯಣದ ಪ್ರತೀ ಪಾತ್ರಗಳ ಆದರ್ಶಗಳನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದರು.



ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಕುಂಪಲ ಅವರನ್ನ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಹರ್ಷಿ ಆನಂದ ಗುರೂಜಿ ಮತ್ತು ಕಿರಿಯ ಗುರು ಶ್ರೀನಿವಾಸ ಆನಂದ ಗುರೂಜೀ ಅವರನ್ನು ಕುಂಪಲ ಬೈಪಾಸಿನಿಂದ ಆದಿಶಕ್ತಿ ಚಾಮುಂಡಿ ಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ವೇದಿಕೆಯಲ್ಲಿ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್, ಮೆಸ್ಕಾಂ ಜೂನಿಯರ್ ಇಂಜಿನಿಯರ್ ನಿತೇಶ್ ಹೊಸಗದ್ದೆ, ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಚರಣ್ ಬೇಬಿ ನಾರಾಯಣ ಪಂಡಿತರು, ದೇವಸ್ಥಾನ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕುಲಾಲ್ ಕುಂಪಲ, ಕಾರ್ಯಾಧ್ಯಕ್ಷರುಗಳಾದ ಪ್ರಕಾಶ್ ಕುಂಪಲ, ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಇದ್ದರು.
Kumpala Brahmakalashotsava 2024, Maharishi Ananda Guruji speks at Kumpala in Mangalore. Founder of Brahmashri Ananda Siddhi Peetham, Bangalore, said that he will bow down and prostrate forever to the creation of Parashurama. Speaker UT Khader said that the long-time dream of the people here has come true with the construction of Adishakti Chamundi constituency in Kumpala.
28-05-26 06:18 pm
HK News Staffer
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
CM Siddaramaiah resigns: ಸಿಎಂ ಸ್ಥಾನಕ್ಕೆ ಸಿದ್ದ...
28-05-26 03:24 pm
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 09:44 pm
HK News Desk
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm