ಬ್ರೇಕಿಂಗ್ ನ್ಯೂಸ್
13-01-24 04:10 pm Mangalore Correspondent ಕರಾವಳಿ
ಮಂಗಳೂರು, ಜ.13: ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಯಾರು ಕಾರಣ..? ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಕಾರಣ ಅಲ್ಲವೇ ? ಇವರಿಗೆ ಮಾನ ಮರ್ಯಾದೆ ಇದ್ದರೆ ರಾಜಿನಾಮೆ ಕೊಡಬೇಕಿತ್ತು. ಮತ್ತೆ ಸ್ಪರ್ಧೆ ಮಾಡಲಿ, ಏನು ಕೆಲಸ ಮಾಡಬೇಕೋ ಮಾಡುತ್ತೀವಿ ಎಂದು ಸಚಿವ ಮಧು ಬಂಗಾರಪ್ಪ ಅವರು ನಳಿನ್ ಕುಮಾರ್ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಳಿನ್ ಕಟೀಲ್ ಯಾವುದೋ ಕಾರಣಕ್ಕೆ ನನ್ನ ರಾಜಿನಾಮೆ ಕೇಳಿದ್ದರು. ಇವರಿಗೆ ಮಾನ ಮರ್ಯಾದೆ ಇರುತ್ತಿದ್ದರೆ ಪಕ್ಷದ ಸೋಲಿಗೆ ರಾಜಿನಾಮೆ ನೀಡಬೇಕಿತ್ತು. ಜನರಿಗೆ ಮಾಹಿತಿ ಹೋಗಬೇಕು ಅಂತ ಹೇಳುತ್ತಿದ್ದೇನೆ. ಇವರು ಏನಾದ್ರೂ ಅಭಿವೃದ್ಧಿ ಕೆಲಸ ಮಾಡಿ ಗೆದ್ದಿದ್ದಾರೆಯೇ..? ಮೋದಿ, ಹಿಂದುತ್ವ ಬಿಟ್ಟು ಇವರಿಗೆ ಚುನಾವಣೆ ಎದುರಿಸುವ ತಾಕತ್ ಇದೆಯಾ.. ಈ ಸಲ ಅವರೇ ಬರಲಿ, ನಾವು ನೋಡಿಕೊಳ್ತೀವಿ. ಬಂಗಾರಪ್ಪ ಕೊಟ್ಟ ಭಿಕ್ಷೆಯಲ್ಲಿ ನಳಿನ್ ಇಲ್ಲಿ ಉಳಿದುಕೊಂಡಿದ್ದಾರೆ..
ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಇವರ ಕಾರು ಪಂಚರ್ ಮಾಡಿದ್ದು ಯಾರ್ರೀ? ಇವರದೇ ಕಾರ್ಯಕರ್ತರಲ್ವೇ, ವಿಹಿಂಪ, ಬಜರಂಗದಳ ಕಾರ್ಯಕರ್ತರೇ ಇವರಿಗೆ ಧಿಕ್ಕಾರ ಕೂಗಿದ್ರಲ್ವೇ ?ಇವರಿಗೆ ಹೇಸಿಗೆ ಆಗಬೇಕು, ಅಂದು ಕಾಂಗ್ರೆಸ್ ನವರೇನು ಕಾರು ಪಂಚರ್ ಮಾಡಿರಲಿಲ್ಲ. ಇವರ ಮೇಲೆ ಸಿಟ್ಟುಗೊಂಡವರು ಕಾರು ಪಂಚರ್ ಮಾಡಿ ಧಿಕ್ಕಾರ ಹಾಕಿದ್ದರು. 2004ರಲ್ಲಿ ಬಂಗಾರಪ್ಪ ಸಾಹೇಬ್ರು ನೀಡಿದ್ದ ಭಿಕ್ಷೆಯಲ್ಲಿ ಬಿಜೆಪಿಯವರು ಅಧಿಕಾರ ನೋಡಿದ್ದರು. ಈ ಸಲ ಬಂಗಾರಪ್ಪರ ಮಗನೇ ಬಂದು ಇವರನ್ನೆಲ್ಲ ಸೋಲಿಸುತ್ತೇನೆ ಎಂದರು.
ಸ್ವಾಮಿ ವಿವೇಕಾನಂದರನ್ನು ಬಿಜೆಪಿ ತಮ್ಮ ಪಕ್ಷದ ಬ್ರಾಂಡ್ ಅನ್ಕೊಂಡಿದ್ದಾರೆ. ವಿವೇಕಾನಂದರನ್ನು ದುರ್ಬಳಕೆ ಮಾಡಿದ್ದಕ್ಕೆ ಜನ ಇವರಿಗೆ ಶಿಕ್ಷೆ ಕೊಟ್ಟಿದ್ದಾರೆ. ವಿವೇಕಾನಂದರ ಹೆಸರಲ್ಲಿ ನಾವು ಯುವನಿಧಿ ಯೋಜನೆ ನೀಡಿದ್ದೇವೆ. ದೇಶದಲ್ಲಿ ನಿರುದ್ಯೋಗ ಹತ್ತು ಪರ್ಸೆಂಟ್ ಆಗಿದೆ, ಇದು ಬಿಜೆಪಿಯ ಸಾಧನೆ. ಜನ ಬಡತನದಲ್ಲಿ ಓದಿರುತ್ತಾರೆ, ಎಷ್ಟೋ ಜನ ಡಿಗ್ರಿ ಮಾಡಿದವರು ಕೂಲಿ ಮಾಡುತ್ತಿದ್ದಾರೆ. ಇಂಥವರಿಗೆ ಕೈಹಿಡಿಯಬೇಕು ಅಂತ ಮೂರು ವರ್ಷ ಭತ್ಯೆ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಯನ್ನು ಬಿಜೆಪಿ ಬೋಗಸ್ ಕ್ರೆಡಿಟ್ ಕಾರ್ಡ್ ಅಂದಿದ್ದರು. ಆದರೆ ಇವರು ಈಗ ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಮಂದಿ ರಾಮನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಿಜವಾದ ರಾಮನ ಭಕ್ತರು ನಾವು. ನಾವೇ ಒರಿಜಿನಲ್ ಹಿಂದುಗಳು, ಎಲ್ಲ ಧರ್ಮಕ್ಕೂ ಗೌರವ ಕೊಡುವುದೇ ಒರಿಜಿನಲ್ ಹಿಂದುತ್ವ. ಅವರೆಲ್ಲ ಡೂಪ್ಲಿಕೇಟ್ ಹಿಂದುಗಳು. ನಾವು ಅಯೋಧ್ಯೆಗೂ ಹೋಗುತ್ತೇವೆ, ಮಸೀದಿ, ಚರ್ಚ್, ಬುದ್ಧನ ಗಯಾಗೂ ಹೋಗುತ್ತೇನೆ. ಅವಕಾಶ ಸಿಕ್ಕಾಗ ಎಲ್ಲಿ ಬೇಕಾದರೂ ಹೋಗುತ್ತೇವೆ. ಹಿಂದುತ್ವ ಹೆಸರಲ್ಲಿ ಕರಾವಳಿಯಲ್ಲಿ ಶಾಂತಿ ಕದಡಿದ್ದನ್ನು ಜನರು ನೋಡಿದ್ದಾರೆ. ಜನರ ಭಾವನೆಗಳ ಜೊತೆ ಚೆಲ್ಲಾಟ ಮಾಡಿ, ಮತ ಬ್ಯಾಂಕ್ ಕಾರಣಕ್ಕೆ ಹಿಂದುತ್ವ ಬಳಕೆ ಮಾಡುತ್ತಿದ್ದಾರೆ. ಯತ್ನಾಳ್ ಹೇಳಿದಂತೆ ಸಾವಿನಲ್ಲೂ ರಾಜಕೀಯ ಮಾಡೋರು ಇವರು. ಇದೇ ಕಾರಣಕ್ಕೆ ಇವರದೇ ಕಾರ್ಯಕರ್ತರು ಘೆರಾವ್ ಹಾಕಿದ್ದರು. ಆದರೆ ಬಂಗಾರಪ್ಪ ಮಗನಾಗಿ, ಕಾಂಗ್ರೆಸ್ ಕಾರ್ಯಕರ್ತನಾಗಿ ದೇವರ ಹೆಸರಲ್ಲಿ ನಾನು ರಾಜಕಾರಣ ಮಾಡಲ್ಲ. ಕಳೆದ ಚುನಾವಣೆಯಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಬಾರಿಯೂ ಪಾಠ ಕಲಿಸುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ಕಾಂಗ್ರೆಸ್ ಹಣೆಬರಹ ಬರೆಯೋದು ರಾಜ್ಯದ ಜನರು. ಯಡಿಯೂರಪ್ಪ, ನಳಿನ್ ಕಟೀಲ್ ಆಗಲೀ, ಬಿಜೆಪಿಯವರು ಮಾಡೋದಲ್ಲ. ನಮ್ಮ ಗ್ಯಾರಂಟಿ ಬಗ್ಗೆ ವಿಶ್ವಾಸ ಇರಿಸಿ ಜನರು ಕಾಂಗ್ರೆಸ್ ಭವಿಷ್ಯ ಬರೆಯುತ್ತಾರೆ. ಐದು ಗ್ಯಾರಂಟಿಯಿಂದ ತಿಂಗಳಿಗೆ ಒಂದು ಕುಟುಂಬಕ್ಕೆ ಐದು ಸಾವಿರದಷ್ಟು ಹೋಗುತ್ತೆ. ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಟೀಕೆ ಮಾಡಿದವರು ಅವರ ಹಣೆಬರಹಕ್ಕೆ ಒಂದು ಇಂಥ ಕಾರ್ಯಕ್ರಮ ಕೊಟ್ಟಿಲ್ಲ. ಬಿಜೆಪಿಯವರು ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡುತ್ತಾರೆ. ನಮಗೆ ಸಂತೋಷ ಇದೆ, ಸಾಮಾನ್ಯ ಜನರ ಜೀವನ ಉತ್ತಮ ಪಡಿಸಿದ್ದೇವೆ. ಜನರ ಕೈಗೆ ದುಡ್ಡು ಕೊಟ್ಟು ಜೀವನ ಸುಧಾರಣೆ ಮಾಡಿದ್ದೇವೆ.
ಮೋದಿ, ಹಿಂದುತ್ವ ಬಿಟ್ಟು ನಳಿನ್ ಕಟೀಲ್ ಬೇರೇನು ಕೆಲಸ ಮಾಡಿದ್ದಾರೆ. ಇವರು ಅಭಿವೃದ್ಧಿ ಕೆಲಸ ಮುಂದಿಟ್ಟು ಚುನಾವಣೆ ಹೋಗುತ್ತಾರೆಯೇ ? ಹಿಂದುಳಿದ ವರ್ಗದವರು ಇಲ್ಲಿ ಪ್ರಾಣ ಕಳಕೊಂಡಿದ್ದಾರೆ. ಹಾಗಾಗಿ ಇಲ್ಲಿಗೆ ನಾನೇ ಬರ್ತೀನಿ, ಇಲ್ಲಿ ಬಂಡವಾಳ ಹೂಡಿಕೆಯಾಗಿ ಅಭಿವೃದ್ಧಿ ಆಗಲು ಒತ್ತು ಕೊಡುತ್ತೇನೆ. ನಳಿನ್ ಕಟೀಲ್ ಸೋಲಬೇಕು, ನಾನು ಕೂಡ ಅದರ ಪಾತ್ರಧಾರಿ ಆಗ್ತೀನಿ.. ತಂದೆಯವರ ಭಿಕ್ಷೆಯಲ್ಲಿ ನಳಿನ್ ಇಲ್ಲಿ ಉಳಿದುಕೊಂಡಿದ್ದಾರೆ ಎನ್ನುವ ಮೂಲಕ ಬಂಗಾರಪ್ಪ ಅಂದು ಬಿಜೆಪಿ ಬಂದಿದ್ದರಿಂದ ಕರಾವಳಿಯ ಬಿಲ್ಲವರು ಆ ಪಕ್ಷಕ್ಕೆ ಮತ ಹಾಕಿದ್ದರು ಎಂಬುದನ್ನು ಪರೋಕ್ಷವಾಗಿ ಟಾಂಗ್ ಇಟ್ಟಿದ್ದಾರೆ.
ಸಾಮಾನ್ಯ ಜನರಿಗೆ ಕೈಮುಗಿದು ಕೇಳುತ್ತೇನೆ, ನಮ್ಮ ಕೆಲಸ ನೋಡಿ ಮತ ಕೊಡಿ. ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿ. ಲೋಕಸಭೆ ಅಭ್ಯರ್ಥಿ ವಿಚಾರದಲ್ಲಿ ನನಗೆ ಕೆಲಸ ಕೊಟ್ಟಿದ್ದಾರೆ. ಅಭ್ಯರ್ಥಿ ಯಾರಾಗಬೇಕು ಎನ್ನುವ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಕಳಿಸಿದ್ದೇನೆ, ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ. ಹೈಕಮಾಂಡ್ ಏನು ಹೇಳುತ್ತೋ ಅದನ್ನು ಪಾಲಿಸುತ್ತೇವೆ ಎಂದು ಹೇಳಿದರು.
Mangalore Madhu Bangarappa slams MP Nalin Kateel, says he’s the reason for BJP to loose Karnataka, should have resigned. That’s why his car was puncherd at sullia during praveen nettaru murder
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm