ಬ್ರೇಕಿಂಗ್ ನ್ಯೂಸ್
12-01-24 08:27 pm Mangalore Correspondent ಕರಾವಳಿ
ಮಂಗಳೂರು, ಜ.12: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕೆಡಿಪಿ ಸಭೆ ಆರಂಭಗೊಳ್ಳುತ್ತಿದ್ದಂತೆ ಅಪರೂಪಕ್ಕೆ ಬಂದಿದ್ದ ಎಂಎಲ್ಸಿ ಭೋಜೇಗೌಡ ಅಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು. ಮೂರು ತಿಂಗಳ ಹಿಂದಿನ ಅನುಪಾಲನಾ ವರದಿಯನ್ನು ಎರಡು ದಿನದ ಹಿಂದೆ ಕಳಿಸಿಕೊಟ್ಟರೆ ಅದನ್ನು ಓದಿಕೊಂಡು ಬರಲಾಗುತ್ತಾ ಎಂದು ನೇರವಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ತರಾಟೆಗೆತ್ತಿಕೊಂಡರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಅನುಪಾಲನಾ ವರದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿ ಪಡೆದು ಕಳಿಸಬೇಕಾಗುತ್ತದೆ. ಹಾಗಾಗಿ ವರದಿ ವಿಳಂಬವಾಗಿತ್ತು ಎಂದು ಹೇಳಿದರು. ಅದಕ್ಕೆ ವ್ಯಗ್ರರಾದ ಭೋಜೇಗೌಡ, ಕೆಡಿಪಿ ಅಂದ್ರೆ ಮೂರು ತಿಂಗಳಿಗೊಮ್ಮೆ ಎಲ್ಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ. ಎಲ್ಲ ಅಧಿಕಾರಿಗಳು ಇದಕ್ಕೆ ತಯಾರಿ ಮಾಡಿಕೊಂಡು ಬರಬೇಕು. ಶಾಸಕರಿಗೂ ಕನಿಷ್ಠ 15 ದಿನ ಇರುವಾಗ ಈ ವರದಿಯನ್ನು ತಲುಪಿಸಬೇಕು. ಒಂದು ದಿನ ಇರುವಾಗ ನೀವು ಮೈಲ್ ಹಾಕಿದ್ರೆ ನಾವೇನು ಮಾಡಕ್ಕಾಗುತ್ತೆ.. ನಿಮ್ಗೆಲ್ಲ ಅಧಿಕಾರಿಗಳಿಗೆ ಜವಾಬ್ದಾರಿ ಇರಬೇಕು. ತಪ್ಪು ಆಗುತ್ತದೆ, ಅದನ್ನು ಒಪ್ಪಿಕೊಳ್ಳಿ ಯಾಕೆ ಆಗಲ್ಲ. ಮುಂದೆ ಆಗದಂತೆ ನೋಡಿಕೊಳ್ಳಬೇಕು ಎಂದು ನಡುವೆ ಬಾಯಿ ಹಾಕಿದ ಜಿಪಂ ಸಿಇಓ ಅವರನ್ನೂ ತರಾಟೆಗೆತ್ತಿಕೊಂಡರು.
ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ, ಹಳ್ಳಿ ಕಡೆ ಮನೆ ಕಟ್ಟುವುದಕ್ಕೆ ತಹಸೀಲ್ದಾರ್ ಅರಣ್ಯ ಇಲಾಖೆಯ ಎನ್ಓಸಿ ಕೇಳುವ ವಿಚಾರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ವಿಚಾರದಲ್ಲೂ ಅರಣ್ಯ ಇಲಾಖೆಯ ಅನುಮತಿ ಯಾಕೆ ಬೇಕು. ಅದು ಫಾರೆಸ್ಟ್ ಹತ್ತಿರ ಇದ್ದರೆ ಓಕೆ. ಒಬ್ಬ ತನ್ನದೇ ಜಾಗದಲ್ಲಿ ಮನೆ ಕಟ್ಟಲು ಫಾರೆಸ್ಟ್ ಎನ್ಓಸಿ ಎಂದು ಅರ್ಜಿ ಬದಿಗಿಡುವ ಸಂಪ್ರದಾಯ ಯಾಕೆ ಎಂದು ಶಾಸಕ ಪ್ರಶ್ನೆ ಮಾಡಿದರು. ಅರಣ್ಯ ಇಲಾಖೆಯಿಂದ ಉತ್ತರಿಸಲು ಜಿಲ್ಲಾ ಮಟ್ಟದ ಅಧಿಕಾರಿ ಡಿಎಫ್ಓ ಇರಲಿಲ್ಲ. ಸಭೆಗೆ ಗೈರು ಹಾಜರಾಗಿದ್ದರಿಂದ ಎಸಿಎಫ್ ಶ್ರೀಧರ್ ಅವರಲ್ಲಿ ಹರೀಶ್ ಪೂಂಜ ಪ್ರಶ್ನೆ ಮಾಡಿದ್ದು, 94ಸಿ ಅಥವಾ ವರ್ಗದ ಜಾಗದಲ್ಲಿ ಮನೆ ಕಟ್ಟುವುದಿದ್ದರೂ ಅರಣ್ಯ ಇಲಾಖೆಯ ಅನುಮತಿ ಯಾಕೆ, ತಿಳಿಸುವಂತೆ ಕೇಳಿದರು. ಜಾಗದಲ್ಲಿ 22ಕ್ಕಿಂತ ಹೆಚ್ಚು ಮರಗಳಿದ್ದರೆ ಎನ್ಓಸಿ ಬೇಕಾಗುತ್ತದೆ ಎಂದು ಅಧಿಕಾರಿ ಹೇಳಿದಾಗ, ನೀವು ಒಂದೊಂದು ಕಡೆ ಒಂದೊಂದು ಮಾತು ಹೇಳಬಾರದು ಎಂದು ಗರಂ ಆದರು. ಜಿಲ್ಲಾ ಮಟ್ಟದ ಅಧಿಕಾರಿ ಗೈರಾಗಿದ್ದಕ್ಕೆ ಎಂಎಲ್ಸಿ ಭೋಜೇಗೌಡ ತರಾಟೆಗೆತ್ತಿಕೊಂಡು ಅವರು ಯಾಕೆ ಬಂದಿಲ್ಲ ಡೀಸಿಯವರೇ, ಗೈರಾಗಿದ್ದಕ್ಕೆ ನಿಮ್ಮಲ್ಲಿ ಪರ್ಮಿಶನ್ ತಗೊಂಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಶ್ರೀಧರ್ ಅವರನ್ನು ಸರಿಯಾಗಿ ಮಾಹಿತಿ ಇಟ್ಟುಕೊಳ್ಳದೆ ಯಾಕೆ ಸಭೆಗೆ ಬರುತ್ತೀರಿ ಎಂದು ರೈಟ್ ಲೆಫ್ಟ್ ಮಾಡಿದರು.
ನೀರಾವರಿ ಇಲಾಖೆಯ ಕುರಿತು ಮಾಹಿತಿ ಕೇಳಿದಾಗ, ಅಲ್ಲಿನ ಅಧಿಕಾರಿ ನಿದ್ದೆಯಲ್ಲಿದ್ದ ರೀತಿ ಬೇಕಾ, ಬೇಡವೋ ಎನ್ನುವಂತೆ ಉತ್ತರಿಸಿದ್ದು ಕಂಡುಬಂತು. ಸಚಿವರ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಇದ್ದಾಗ, ಯಾಕ್ರೀ ನೀವು ಹೀಗೆ ಮಾಡ್ತೀರಾ ಎಂದು ಭೋಜೇಗೌಡ ಮತ್ತೆ ಗರಂ ಆದರು. ವೇದವ್ಯಾಸ ಕಾಮತ್ ಮಾತನಾಡಿ, ಸ್ಮಾರ್ಟ್ ಸಿಟಿಯಲ್ಲಿ ರಿವರ್ ಫ್ರಂಟ್ ಕೆಲಸಕ್ಕೆ ಅಧಿಕಾರಿಗಳೇ ತೊಡಕಾಗಿದ್ದಾರೆ. ಯಾರೋ ದೂರು ಕೊಟ್ಟರೆಂದು ಫಾರೆಸ್ಟ್ ಅಧಿಕಾರಿಗಳು ಬಂದು ತಡೆ ಒಡ್ಡುತ್ತಾರೆ. ಅಭಿವೃದ್ಧಿ ಕಾಮಗಾರಿಗೆ ಯಾಕೆ ತೊಡಕು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.
ಚತುಷ್ಪಥ ಕೆಲಸನೇ ಆಗ್ತಿಲ್ಲ ಎಂದ ಜಿಲ್ಲಾಧಿಕಾರಿ
ಹೈವೇ ಇಲಾಖೆಯವರು ಕೆಡಿಪಿ ಸಭೆಗೆ ಬರುವುದೇ ಇಲ್ಲ. ಅವರೆಲ್ಲ ತಾವು ಕೇಂದ್ರ ಸರಕಾರದವರು. ಜಿಲ್ಲಾ ಮಟ್ಟದ ಸಭೆಗೆ ಬರಬೇಕಿಲ್ಲ ಎಂದುಕೊಂಡಿದ್ದಾರೆ ಎಂಬುದಾಗಿ ಎಂಎಲ್ಸಿ ಮಂಜುನಾಥ ಭಂಡಾರಿ ಆಕ್ಷೇಪ ಎತ್ತಿದರು. ಜಿಲ್ಲಾಧಿಕಾರಿಯಲ್ಲಿ ಸಚಿವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಾಹಿತಿ ಕೇಳಿದರು. ಜಿಲ್ಲೆಯಲ್ಲಿ ಚತುಷ್ಪಥ ಹೆದ್ದಾರಿ ಕೆಲಸ ತುಂಬ ನಿಧಾನಗತಿಯಲ್ಲಿದೆ ಎಂದು ಡೀಸಿ ಹೇಳಿದಾಗ, ಯಾಕ್ರೀ ಕೆಲಸ ಆಗ್ತಾ ಇಲ್ಲ ಎಂದು ಹೈವೇ ಅಧಿಕಾರಿಗಳ ಪರವಾಗಿ ಬಂದಿದ್ದವರಲ್ಲಿ ಪ್ರಶ್ನೆ ಮಾಡಿದರು. ಈಗ ಕೆಲಸ ವೇಗ ಪಡೆದಿದೆ, ಬಿಸಿ ರೋಡ್- ಪೆರಿಯಶಾಂತಿ ರಸ್ತೆ ಕೆಲಸ 50 ಶೇಕಡಾ ಆಗಿದೆ ಎಂದು ಹೇಳಿದರು. ಉಳಿದವನ್ನೂ ತುರ್ತಾಗಿ ಮಾಡಬೇಕು. ಅದರಿಂದಾಗಿ ಜನರಿಗೆ ಸಮಸ್ಯೆ ಆಗಬಾರದು ಎಂದು ಸೂಚಿಸಿದರು.
Boje Gowda turns angry at KDP meeting in Mangalore over certain issue's in front on Dinesh Gundurao.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm