ಬ್ರೇಕಿಂಗ್ ನ್ಯೂಸ್
30-12-23 11:00 pm Mangalore Correspondent ಕರಾವಳಿ
ಮಂಗಳೂರು, ಡಿ.30: ಯುವಕರ ದೇಹ ಕಬ್ಬಿಣದ ಮಾಂಸದ ತುಂಡುಗಳಂತಿರಬೇಕು ಎಂದಿದ್ದರು ವಿವೇಕಾನಂದರು. ಅವರ ಮಾತುಗಳನ್ನು ಗ್ರಾಮೀಣ ಭಾಗದಲ್ಲಿ ಸಾಕಾರಗೊಳಿಸುತ್ತಿರುವುದು ಜನಪದ ಕ್ರೀಡೆ ಕಂಬಳ. ಇದರಲ್ಲಿ ತೊಡಗಿಸಿಕೊಂಡವರು, ಕಂಬಳದ ಓಟಗಾರರು ಜೀಮ್ ನಲ್ಲಿ ಹುರಿಗೊಳ್ಳುವ ಕ್ರೀಡಾಪಟುಗಳಿಗಿಂತ ಹೆಚ್ಚು ಕಠಿಣವಾಗಿದ್ದಾರೆ. ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ದೇಹದಾರ್ಢ್ಯವುಳ್ಳವರಿದ್ದಾರೆ. ವಿವೇಕಾನಂದರ ಮಾತು ಸಾಕಾರವಾಗುವಲ್ಲಿ ಕರಾವಳಿಯ ಕಂಬಳ, ತಮಿಳುನಾಡಿನ ಜಲ್ಲಿಕಟ್ಟಿನಂತಹ ಸ್ಪರ್ಧೆಗಳು ಸಾಕ್ಷಿಯಂತಿವೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕುಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುತ್ತಿರುವ ಮಂಗಳೂರು ಕಂಬಳ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಪಾಲ್ಗೊಂಡು ಮಾತನಾಡಿದರು. ಈ ರೀತಿಯ ಆಚರಣೆಯನ್ನು ನಿಲ್ಲಿಸಿ, ಗ್ರಾಮೀಣ ಭಾಗದ ಯುವಶಕ್ತಿಯನ್ನು ನಿಸ್ತೇಜಗೊಳಿಸುವುದಕ್ಕಾಗಿಯೇ ಕಂಬಳ, ಜಲ್ಲಿಕಟ್ಟು ನಿಷೇಧಕ್ಕಾಗಿ ಷಡ್ಯಂತ್ರ ನಡೆಸಲಾಗಿತ್ತು. ಆದರೆ ನಮ್ಮ ಬೃಜೇಶ್ ಚೌಟರಂತವರು ಸೇರಿಕೊಂಡು ಕಂಬಳವನ್ನು ಮಂಗಳೂರಿನಂತಹ ನಗರದಲ್ಲೇ ನಡೆಸಿ ಸೆಡ್ಡು ಹೊಡೆದಿದ್ದಾರೆ. ಅಲ್ಲದೆ, ಕಂಬಳ ಪರವಾಗಿ ಹೋರಾಟ ನಡೆಸಿ ಜಯ ಕೊಡಿಸಿದ್ದಾರೆ. ಕಂಬಳ ಗ್ರಾಮೀಣ ಭಾಗದ ಜನರಲ್ಲಿ ಯೌವನತ್ವ ಹೆಚ್ಚಿಸುವ, ಯುವಶಕ್ತಿಯನ್ನು ಉತ್ತೇಜಿಸುವ ಅತ್ಯುತ್ತಮ ಜನಪದ ಕ್ರೀಡೆಯಾಗಿದೆ. ಇದರ ಉಳಿವಿಗಾಗಿ ಹೋರಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.



ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅನಿರೀಕ್ಷಿತ ಅತಿಥಿಯಾಗಿ ಆಗಮಿಸಿ ಕಂಬಳಕ್ಕೆ ಶುಭ ಕೋರಿದರು. ಸಮಾಜದ ಎಲ್ಲರನ್ನೂ ಮತ ಭೇದ ಮರೆತು ಒಂದುಗೂಡಿಸುವ ಕಾರ್ಯಕ್ರಮ ಕಂಬಳ. ಜನರಲ್ಲಿ ಸಾಮರಸ್ಯ ಬಿತ್ತುವ ಜನಪದ ಉತ್ಸವ. ನಿಂತು ಹೋದ ಕಲೆಯನ್ನು ಮೇಳೈಸುವಂತೆ ಮಾಡಿದ್ದು ತಂಬು ಸಂತಸ ನೀಡಿದೆ. ಇದಕ್ಕಾಗಿ ದುಡಿದ ಎಲ್ಲರಿಗೂ ರಾಯರು ಆಶೀರ್ವದಿಸಲಿ ಎಂದು ಸ್ವಾಮೀಜಿ ಹಾರೈಸಿದರು.





ಗೋಲ್ಡ್ ಫಿಂಚ್ ಸಿಟಿ ಮಾಲೀಕ ಪ್ರಕಾಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಜನರನ್ನೂ ಒಳಗೊಳಿಸುವ, ಮತ ಭೇದ ಇಲ್ಲದೆ ಬೆರೆಯುವಂತೆ ಮಾಡುವ ಅಪರೂಪದ ಉತ್ಸವಗಳಲ್ಲಿ ಕಂಬಳ ಒಂದು. ತುಳುನಾಡಿಗೆ ಸೀಮಿತವಾಗಿದ್ದ ಕಂಬಳ ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಭಾರೀ ಜನಮನ್ನಣೆಯನ್ನೂ ಗಳಿಸಿತ್ತು. ನಮ್ಮ ಜನಪದ ಕ್ರೀಡೆ ಹೊರಗಿನವರಿಗೂ ತಿಳಿಯುವಂತಾಗಿತ್ತು. ಕಂಬಳ ಈಗ ಕೇವಲ ನಮ್ಮ ಗ್ರಾಮೀಣ ಕ್ರೀಡೆಯಾಗಿ ಉಳಿದಿಲ್ಲ. ಎಲ್ಲರ ಕ್ರೀಡೆಯಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಸೇರಿದಂತೆ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Mangalore kambala crowded, MP Tejasvi Surya guest. The seventh edition of Mangaluru Kambala was held at Gold Finch City in Bangra Kulur on December 30.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm