ಬ್ರೇಕಿಂಗ್ ನ್ಯೂಸ್
29-12-23 09:20 pm Mangalore Correspondent ಕರಾವಳಿ
ಮಂಗಳೂರು, ಡಿ.29: ರಾಮ ಭಾರತೀಯರಿಗೆ ಎಲ್ಲರಿಗೂ ಸೇರಿದವನು. ರಾಮನ ಮಂದಿರಕ್ಕೆ ಯಾರಿಗೆ ಬರಬೇಕು ಅಂತ ಅಪೇಕ್ಷೆ ಇದೆಯೋ ಅವರೆಲ್ಲ ಬರಬಹುದು. ಆಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು. ಆಹ್ವಾನ ತಿರಸ್ಕಾರ ಮಾಡೋದು ಅವರವರಿಗೆ ಬಿಟ್ಟದ್ದು, ವ್ಯಕ್ತಿಗತವಾದ್ದು ಎಂದು ಎಡ ಪಕ್ಷಗಳ ಟೀಕೆಯ ಬಗ್ಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರನ್ನು ಕರೆದಿಲ್ಲ ಅಂತಾದ್ರೆ ಕರೆದಿಲ್ಲ ಎನ್ನೋದೇ ದೊಡ್ಡ ಆಕ್ಷೇಪ. ಕರೆದ ಮೇಲೆ ನಾವು ತಿರಸ್ಕರಿಸುತ್ತೇವೆ ಎನ್ನೋದೇ ದೊಡ್ಡ ಹೆಗ್ಗಳಿಕೆ ಅನ್ಕೊಂಡಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ. ರಾಜಕೀಯ ಟೀಕೆಗಳಿಗೆ ಉತ್ತರ ಕೊಡೋದಿಲ್ಲ.
ಆಹ್ವಾನ ನೀಡುವಲ್ಲಿ ತಾರತಮ್ಯ ಎಂಬ ಟೀಕೆಗೆ ಉತ್ತರಿಸಿದ ಸ್ವಾಮೀಜಿ, ಅಲ್ಲಿರುವ ಸ್ಥಳಾವಕಾಶ ಅಲ್ಪವಾದದ್ದು. ಅಬ್ಬಬ್ಬಾ ಅಂದ್ರೆ ಏಳೆಂಟು ಸಾವಿರ ಜನ ಸೇರಬಹುದು. ಲೋಕದಲ್ಲಿ ಮಹಾತ್ಮರು, ಗೌರವಾನಿತ್ವರು ತುಂಬಾ ಮಂದಿ ಇದ್ದಾರೆ. ಯಾರನ್ನು ಕರೆದರೂ ಆಕ್ಷೇಪ ಇರುವಂತಹದ್ದೇ. ಅಲ್ಲಿನ ಪರಿಸ್ಥಿತಿ, ಅವಕಾಶವನ್ನು ಗಮನಿಸಿಕೊಂಡು ಸಮಾಧಾನಪಡಬೇಕು.
ಪ್ರಾತಿನಿಧ್ಯ ಆಧರಿಸಿ ಆಹ್ವಾನವನ್ನು ನೀಡಿದ್ದೇವೆ. ಆಹ್ವಾನ ನೀಡದಿರುವ ಬಗ್ಗೆ ಮಂದಿರ, ಟ್ರಸ್ಟ್, ವ್ಯಕ್ತಿಗೆ ಸ್ವಾರ್ಥ, ಲಾಭ ಯಾವುದೂ ಇಲ್ಲ. ಇದು ಮನುಷ್ಯ ಸಹಜವಾದ ಪ್ರಕ್ರಿಯೆ. ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಎಲ್ಲರೂ ಈ ವಿಚಾರವನ್ನು ಗಮನದಲ್ಲಿಟ್ಟು ಶಾಂತರಾಗಬೇಕು ಎಂದರು.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾದ ಪ್ರಶ್ನೆಗೆ, ಒಬ್ಬರ ಕಡೆಯಿಂದ ಏನೂ ತಪ್ಪು ಆಗದಿದ್ದರೂ ತಪ್ಪು ಎಂದು ಭಾರೀ ಪ್ರತಿಭಟನೆ. ಇನ್ನೊಂದು ಕಡೆಯಿಂದ ಏನು ತಪ್ಪು ಆದರೂ ಕಣ್ಮುಚ್ಚಿ, ಬಾಯಿಮಚ್ಚಿ ಇರೋದು. ಇಂತಹ ನಡೆ ಸರಿಯಲ್ಲ. ಅವರ ಹೇಳಿಕೆ ವ್ಯಕ್ತಿಗತವಾಗಿರೋದು. ನಾನು ಆ ಬಗ್ಗೆ ಯಾವುದೇ ಅಭಿಪ್ರಾಯ ಕೊಡೋದು ಸರಿಯಲ್ಲ ಎಂದು ಹೇಳಿದರು. ಖಾಸಗಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ಆಗಮಿಸಿದ್ದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
Lord Ram belongs to all Indians. Those who want to come to the Ram temple can come. You can come to ram temple even without an invitation. Pejawar Vishwaprasanna Theertha Swamiji reacted to the left's criticism that it was up to him to reject the invitation and it was personal.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm