ಬ್ರೇಕಿಂಗ್ ನ್ಯೂಸ್
22-12-23 09:44 pm Mangalore Correspondent ಕರಾವಳಿ
ಮಂಗಳೂರು, ಡಿ.22: ಕೊರೊನಾ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಸಭೆ ಸಮಾರಂಭ ತಡೆಯುವ ಅಗತ್ಯ ಇಲ್ಲ. ಕ್ರಿಸ್ಮಸ್, ನ್ಯು ಇಯರ್ ವೇಳೆಯೂ ನಿರ್ಬಂಧ ವಿಧಿಸಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಇದಕ್ಕೂ ಮುನ್ನ ಅಧಿಕಾರಿಗಳ ಸಭೆಯಲ್ಲಿ ಕೋವಿಡ್ ಬಗ್ಗೆ ಇಲಾಖೆಯಲ್ಲಿ ಮಾಡಿಕೊಂಡ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ದಿನವೂ ಜಿಲ್ಲೆಯಲ್ಲಿ 330 ಟೆಸ್ಟಿಂಗ್ ಟಾರ್ಗೆಟ್ ಇದೆ, 220 ಆರ್ ಟಿಪಿಸಿಆರ್, 100 ವಿಟಿಎಂ ಟೆಸ್ಟ್ ಮಾಡುತ್ತಿದ್ದೇವೆ. ಈಗ ಒಂದು ಸಾವಿರ ಹೆಚ್ಚುವರಿ ವಿಟಿಎಂ ಜಿಲ್ಲೆಗೆ ಬಂದಿದೆ. ಗಡಿಭಾಗದಲ್ಲಿ ನಿಗಾ ಇಟ್ಟಿದ್ದೇವೆ ಎಂದು ಡಿಎಚ್ಓ ಡಾ.ಎಚ್.ಆರ್ ತಿಮ್ಮಯ್ಯ ಹೇಳಿದರು. ಇದೇ ವೇಳೆ, ಪ್ರತಿಕ್ರಿಯೆ ನೀಡಿದ ಸಚಿವರು, ಆರೋಗ್ಯ ಇಲಾಖೆಯಲ್ಲಿ ಎಲ್ಲ ಸಿಬಂದಿಯೂ ಮಾಸ್ಕ್ ಹಾಕುವಂತೆ ಸೂಚನೆ ನೀಡಿದರು. ಆರೋಗ್ಯ ಕಾರ್ಯಕರ್ತರು, ವೈದ್ಯರು ಕಡ್ಡಾಯ ಮಾಸ್ಕ್ ಹಾಕಲು ಇಲಾಖೆಯಿಂದ ಸುತ್ತೋಲೆ ಕಳಿಸುವಂತೆ ಡಿಎಚ್ ಓಗೆ ಸೂಚನೆ ನೀಡಿದರು.
ಸುಳ್ಯದಲ್ಲಿಯೇ ಟೆಸ್ಟಿಂಗ್ ವ್ಯವಸ್ಥೆ ಮಾಡಿದ್ದೇವೆ. ಒಂಬತ್ತರಲ್ಲಿ ಏಳು ತಾಲೂಕು ಕೇರಳಕ್ಕೆ ಗಡಿಯನ್ನು ಹೊಂದಿಕೊಂಡಿದ್ದು ಎಲ್ಲ ಕಡೆಯೂ ಜಾಗೃತಿ ಮೂಡಿಸುತ್ತಿದ್ದೇವೆ. ಆ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಚಿವರ ಗಮನಕ್ಕೆ ತಂದರು. ಸಭೆಯ ಬಳಿಕ ಸಚಿವರಲ್ಲಿ ಕೊರೊನಾ ಲಸಿಕೆ ನೀಡುವ ಪ್ರಸ್ತಾಪ ಇದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ, ಕೊರೊನಾ ವ್ಯಾಕ್ಸಿನ್ ಗಳನ್ನು ಅಗತ್ಯ ಬಿದ್ದರೆ ಕೊಡುತ್ತೇವೆ. ಆ ಬಗ್ಗೆ ನಮ್ಮ ಟೆಕ್ನಿಕಲ್ ಕಮಿಟಿ ಇದೆ, ಅವರು ಹೇಳಿದರೆ ಬಳಕೆ ಮಾಡುತ್ತೇವೆ. ಆದರೆ ಅಂತಹ ಸ್ಥಿತಿ ಬಂದಿಲ್ಲ, ಪರಿಸ್ಥಿತಿ ನೋಡಿಕೊಂಡು ನಿರ್ಧಾರಕ್ಕೆ ಬರುತ್ತೇವೆ ಎಂದು ಹೇಳಿದರು.
ತಜ್ಞರು ಈಗಾಗಲೆ ಇದರಿಂದ ಹೈ ರಿಸ್ಕ್ ಇಲ್ಲ ಎಂದಿದ್ದಾರೆ. ಪ್ರತಿ ದಿನ ರಾಜ್ಯದಲ್ಲಿ 5 ಸಾವಿರ ಟೆಸ್ಟಿಂಗ್ ಮಾಡುತ್ತಿದ್ದೇವೆ. ರಿಸಲ್ಟ್ ನೋಡಿ ಟೆಸ್ಟಿಂಗ್ ಹೆಚ್ಚಿಸುವ ಬಗ್ಗೆ ಸೂಚನೆ ನೀಡುತ್ತೇವೆ. ಹೆಚ್ಚು ಜನ ಸೇರುವಲ್ಲಿ ಮಾಸ್ಕ್ ಹಾಕಿದರೆ ಒಳ್ಳೆಯದು, ಕಡ್ಡಾಯ ಅಂತ ಇಲ್ಲ. ವಯಸ್ಸಾದವರು, ಆರೋಗ್ಯ ತೊಂದರೆ ಇದ್ದವರು ಮಾಸ್ಕ್ ಹಾಕಬೇಕು ಎಂದರು.
ಜೆಎನ್ 1 ಗೋವಾದಲ್ಲಿ 18 ಕೇಸ್ ಇದೆ, ಕೇರಳದಲ್ಲಿ ಒಂದೆರಡು ಇದೆ. ಬ್ರೆಜಿಲ್, ಸಿಂಗಾಪುದರಲ್ಲಿ ಕೊರೊನಾ ಅತಿ ಹೆಚ್ಚು ಇದೆ, ಹಾಗಂತ ಅಲ್ಲಿ ಯಾವುದೇ ತೊಂದರೆ ಆಗಿಲ್ಲ. ಹಿಂದೆ ಓಮಿಕ್ರಾನ್ ಬಂದಾಗಲೂ ವ್ಯಾಪಕ ಹರಡಿತ್ತು, ಅದರದ್ದೇ ಉಪತಳಿಯಿದು. ಇದರ ಬಗ್ಗೆ ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳಿದರು.
There is no need to worry about corona, there is no need to stop the gathering. Health Minister Dinesh Gundu Rao said that there will be no restrictions on Christmas and New Year.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm