ಬ್ರೇಕಿಂಗ್ ನ್ಯೂಸ್
18-12-23 05:20 pm Mangalore Correspondent ಕರಾವಳಿ
ಉಳ್ಳಾಲ, ಡಿ.18: ವಿಶ್ವ ಅವಳಿ ದಿನಾಚರಣೆಯಂದು ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಶಾರದಾ-ಗಣಪತಿ ಅವಳಿ ಹೆಸರಿನ ಹೈಸ್ಕೂಲ್ ನೆನಪಾಗಲೇ ಬೇಕು. ಏಕೆಂದರೆ ಈ ಶಾಲೆಯಲ್ಲಿ ಬರೋಬ್ಬರಿ 17 ಜೋಡಿ ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಶಾಲೆಯ ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ ಒಂದು ಅವಳಿಯನ್ನಾದರೂ ಸೈನ್ಯಕ್ಕೆ ಸೇರಿಸೋ ಮಹದಾಸೆ ಶಾಲಾ ಸಂಚಾಲಕರದ್ದಾಗಿದೆ.
ಸಂಸ್ಕಾರಯುತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಸಂಸ್ಥೆ ಮುಂಚೂಣಿಯಲ್ಲಿದ್ದು ಇದೀಗ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಲು ಕಾರಣವಾಗಿದ್ದು ಈ ಸಂಸ್ಥೆಯಲ್ಲಿ ಪ್ರಸ್ತುತ ಬರೋಬ್ಬರಿ 17 ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು. ಪ್ರಸ್ತುತ ಕಾಲಘಟ್ಟದಲ್ಲಿ ಅವಳಿ ಮಕ್ಕಳನ್ನು ಪ್ರಸವಿಸುವ ತಾಯಂದಿರ ಸಂಖ್ಯೆಯೇ ಕಡಿಮೆ ಆಗಿದ್ದು ಒಂದು ಜೋಡಿ ಅವಳಿ ಮಕ್ಕಳನ್ನು ಕಾಣುವುದೇ ಖುಷಿಯ ವಿಚಾರ, ಇಲ್ಲಿ ಹದಿನೇಳು ಅವಳಿ ಮಕ್ಕಳಿದ್ದಾರೆ, ಚಕಿತವಾದರೂ ಇದು ಸತ್ಯ.
ಶಾಲೆಯಲ್ಲಿರುವ ಅವಳಿಗಳ ಪೈಕಿ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಒಂದು ಜೋಡಿಯಿದ್ದರೆ, ಒಂಬತ್ತರಲ್ಲಿ ಮೂರು ಜೋಡಿ, ಎಂಟರಲ್ಲಿ ಒಂದು ಜೋಡಿ, ಏಳರಲ್ಲಿ ಎರಡು ಜೋಡಿ, ಆರರಲ್ಲಿ ಮೂರು ಜೋಡಿ, ಪ್ರಥಮ ತರಗತಿಯಲ್ಲಿ ಒಂದು ಜೋಡಿ, ಯುಕೆಜಿಯಲ್ಲಿ ಮೂರು ಜೋಡಿ, ಎಲ್ ಕೆ ಜಿ ಯಲ್ಲಿ ಒಂದು ಜೋಡಿ, ಎರಡನೇ ತರಗತಿಯಲ್ಲಿ ಎರಡು ಜೋಡಿ ಅವಳಿ ಮಕ್ಕಳಿದ್ದಾರೆ. ಅದರಲ್ಲಿ ಆರು ಜೋಡಿ ಹೆಣ್ಣು ಮತ್ತು ಆರು ಜೋಡಿ ಗಂಡು ಮಕ್ಕಳಾಗಿದ್ದಾರೆ. ಐದು ಜೋಡಿ ಹೆಣ್ಣು-ಗಂಡು ಅವಳಿ ಇದ್ದಾರೆ.
ನಮ್ಮ ಶಾಲೆಯ ಹೆಸರೇ ಶಾರದಾ-ಗಣಪತಿ ಎಂದು ಅವಳಿಯಾಗಿದೆ. ತುಳುನಾಡ ಅವಳಿ ವೀರರಾದ ಕೋಟಿ -ಚೆನ್ನಯರ ಆದರ್ಶದಲ್ಲಿ ನಡೆಯೋ ಶಾಲೆಯಿದು. ಲವ-ಕುಶರ ಆದರ್ಶದ ಆಧಾರದಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕ್ರತಿಯ ಶಿಕ್ಷಣವನ್ನ ಭೋದಿಸುತ್ತಿದ್ದೇವೆ. ಒಂದು ಅವಳಿ ಮಕ್ಕಳಾದರೂ ದೇಶದ ಸೈನ್ಯಕ್ಕೆ ಸೇರಿ ಭಾರತಾಂಬೆಯ ಸೇವೆಗೈಯುವ ಮಹದಾಸೆ ಇಟ್ಟುಕೊಂಡಿದ್ದು ಅದನ್ನ ಖಂಡಿತ ಈಡೇರಿಸುವುದಾಗಿ ಶಾಲಾ ಸಂಚಾಲಕ ಟಿ.ಜಿ ರಾಜಾರಾಂ ಭಟ್ ಹೇಳಿದ್ದಾರೆ.
17 ಅವಳಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ 5 ಅವಳಿ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದು, ಇತರ ಅಶಕ್ತ ಕುಟುಂಬದ ಮಕ್ಕಳಿಗೂ ಉಚಿತ ಮತ್ತು ರಿಯಾಯಿತಿಯಲ್ಲಿ ಶಿಕ್ಷಣ ನೀಡುತ್ತಿರುವುದಾಗಿ ರಾಜಾರಾಂ ಭಟ್ ತಿಳಿಸಿದ್ದಾರೆ.
On World Twin Day, one must remember the high school named after Sharada and Ganapathi at Kairangala village in Ullal taluk. The main attraction of the school is that there are 17 pairs of twins studying in the school. The school convenor wants to enlist at least one of these twins in the army.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm