ಬ್ರೇಕಿಂಗ್ ನ್ಯೂಸ್
15-12-23 11:58 am Mangalore Correspondent ಕರಾವಳಿ
ಮಂಗಳೂರು, ಡಿ.15: ಬಂದರು ನಗರಿ ಮಂಗಳೂರಿನಿಂದ ಹೊರಟಿದ್ದ ಹಡಗಿನ ಮೇಲೆ ಯೆಮೆನ್ ದೇಶದ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ವೈಮಾನಿಕ ಇಂಧನವನ್ನು ಹೊತ್ತು ನೆದರ್ಲೆಂಡ್ ಅಥವಾ ಸ್ವೀಡನ್ ಕಡೆಗೆ ತೆರಳುತ್ತಿದ್ದ ತೈಲ ಟ್ಯಾಂಕರುಗಳಿದ್ದ ಹಡಗಿನ ಮೇಲೆ ಯೆಮೆನ್ ಸಮೀಪ ಕ್ಷಿಪಣಿ ದಾಳಿ ನಡೆಸಲಾಗಿದೆ.
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಉತ್ಪಾದನೆಯಾದ ವೈಮಾನಿಕ ಇಂಧನವನ್ನು ಖರೀದಿಸಿ ನೆದರ್ಲೆಂಡ್‌ಗೆ ಸಾಗಾಟ ಮಾಡುತ್ತಿದ್ದಾಗ ಡಿ.11ರಂದು ಘಟನೆ ಸಂಭವಿಸಿದೆ. ಹಡಗಿಗೆ ಡಿ. 6ರಂದು ಮಂಗಳೂರಿನಲ್ಲಿ ತೈಲ ಸಂಗ್ರಹ ಮಾಡಲಾಗಿತ್ತು. ಹೌತಿ ಬಂಡುಕೋರರ ಗುರಿ ತಪ್ಪಿದ ಪರಿಣಾಮ ಹಡಗಿಗೆ ಯಾವುದೇ ಅಪಾಯವಾಗಿಲ್ಲ. ಹಡಗಿನಲ್ಲಿ ಶಸ್ತ್ರ ಸಜ್ಜಿತ ಸಿಬಂದಿಯಿದ್ದು ಮರು ದಾಳಿ ನಡೆಸಿದ್ದಾರೆ ಎಂದು ಹಡಗು ಕಂಪನಿ ತಿಳಿಸಿದೆ.
ಯೆಮೆನ್ ದೇಶದ ಹೌತಿ ಬಂಡುಕೋರರ ಅಧೀನದಲ್ಲಿರುವ ಬಾಬ್ ಎಲ್-ಮಂಡೆಬ್ ಕರಾವಳಿ ಭಾಗದಿಂದ ಕ್ಷಿಪಣಿ ದಾಳಿ ನಡೆದಿದೆ. ಸುಯೆಜ್ ಕಾಲುವೆ ಮೂಲಕ ಐರೋಪ್ಯ ದೇಶಗಳತ್ತ ಸಾಗುವ ತೈಲ ಟ್ಯಾಂಕರ್ ಹೊಂದಿರುವ ಹಡಗಿನ ಮೇಲೆ ಮೊದಲ ಬಾರಿಗೆ ಇಂತಹ ದಾಳಿ ನಡೆದಿದೆ. ಹೌತಿ ಬಂಡುಕೋರರಿಗೆ ಸೇರಿದ ಡ್ರೋಣ್ ಅನ್ನು ಅಮೆರಿಕದ ಮಿಲಿಟರಿ ಪಡೆ ಹೊಡೆದುರುಳಿಸಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಹಡಗು ಆರ್ಡ್ ಮೋರ್ ಶಿಪ್ಪಿಂಗ್ ಕಾರ್ಪೊರೇಶನ್ ಎಂಬ ಕಂಪನಿಗೆ ಸೇರಿದ್ದಾಗಿದೆ. ಜೆಟ್ ಇಂಧನವು ಶೆಲ್ ಮತ್ತು ಭಾರತದ ಒಎನ್ ಜಿಸಿ ಜಂಟಿ ಸಹಭಾಗಿತ್ವದ ಕಂಪನಿಗೆ ಸೇರಿದ್ದು ಐರೋಪ್ಯ ದೇಶಗಳಿಗೆ ಪೂರೈಸುವ ದೃಷ್ಟಿಯಿಂದ ಸಾಗಿಸುತ್ತಿದ್ದರು. ಒಂದೆಡೆ ಇಸ್ರೇಲ್ ವಿರುದ್ಧ ಹೌತಿ ಬಂಡುಕೋರರು ದಾಳಿ ಬೆದರಿಕೆ ಹಾಕಿರುವಾಗಲೇ ಕ್ಷಿಪಣಿ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.
ಮಂಗಳೂರಿನ ಎಂಆರ್‌ಪಿಎಲ್‌ನಿಂದ ಶೆಲ್ ಸಹಿತ ವಿವಿಧ ಕಂಪೆನಿಯವರು ಜೆಟ್ ತೈಲವನ್ನು ಖರೀದಿಸಿ ಹಡಗಿನಲ್ಲಿ ಸಾಗಾಟ ಮಾಡುತ್ತಾರೆ. ಬೇರೆ ಬೇರೆ ದೇಶಗಳಿಗೆ ಮಾರುಕಟ್ಟೆ ಆಧಾರಿತವಾಗಿ ಸಾಗಿಸಿ ಮಾರಾಟ ಮಾಡುತ್ತಾರೆ ಎಂದು ಎಂಆರ್‌ಪಿಎಲ್ ಮೂಲಗಳು ತಿಳಿಸಿವೆ.
In a dramatic incident near the key Bab el-Mandeb Strait, an oil tanker hailing from Mangalore, India, managed to evade two missiles fired by Yemen's Houthi rebels. The Marshall Islands-flagged tanker, Ardmore Encounter, was carrying a shipment of Indian-manufactured jet fuel destined for either Rotterdam in the Netherlands or Gavle, Sweden, reported The Associated Press.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 07:01 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm