ಬ್ರೇಕಿಂಗ್ ನ್ಯೂಸ್
13-12-23 10:00 pm Mangalore Correspondent ಕರಾವಳಿ
ಮಂಗಳೂರು, ಡಿ.13: ನಗರದ ಮಂಗಳಾದೇವಿ ದೇವಸ್ಥಾನವನ್ನು ಗೂಗಲ್ ಮ್ಯಾಪ್ ನಲ್ಲಿ ಮುಸ್ಲಿಂ ವ್ಯಕ್ತಿಯ ಕಂಪೌಂಡ್ ಎನ್ನುವ ರೀತಿ ಕಿಡಿಗೇಡಿಗಳು ತೋರಿಸಿದ್ದು, ಈ ಬಗ್ಗೆ ಭಕ್ತರ ಮೂಲಕ ತಿಳಿದ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.
ಬೆಂಗಳೂರು ಕಡೆಯಿಂದ ಬಂದಿದ್ದ ಭಕ್ತರು ಗೂಗಲ್ ಮ್ಯಾಪ್ ನಲ್ಲಿ ಮಂಗಳಾದೇವಿ ದೇವಸ್ಥಾನವನ್ನು ಹುಡುಕಿ ಬಂದಿದ್ದರು. ಆದರೆ ಮ್ಯಾಪ್ ನಲ್ಲಿ ಮಂಗಳಾದೇವಿ ದೇವಸ್ಥಾನ ಇರುವ ಜಾಗವನ್ನು ಬೋಳಾರ್ ಉಮ್ಮರ್ ಶೇಖ್ ಕಂಪೌಂಡ್ ಎಂದು ತೋರಿಸಲಾಗಿತ್ತು. ದೇವಸ್ಥಾನ ರಸ್ತೆ ಎದುರಲ್ಲೇ ಇದ್ದರೂ, ಅದನ್ನು ಮುಸ್ಲಿಂ ವ್ಯಕ್ತಿಯ ಪ್ರಾಪರ್ಟಿ ಅನ್ನುವ ರೀತಿ ತೋರಿಸಿದ್ದರಿಂದ ದಿಗಿಲುಗೊಂಡ ಭಕ್ತರು ದೇವಸ್ಥಾನ ಸಿಬಂದಿಗೆ ತಿಳಿಸಿದ್ದರು.

ಗೂಗಲ್ ಮ್ಯಾಪ್ ಪರಿಶೀಲಿಸಿದಾಗ, ಉಮರ್ ಶೇಖ್ ಕಂಪೌಂಡ್ ಎಂದು ತೋರಿಸುತ್ತಿತ್ತು. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ರೀತಿಯಾಗಿ ಗೂಗಲ್ ಮ್ಯಾಪ್ ನಲ್ಲಿ ಬಿಂಬಿಸಿದ್ದರು. ಈ ಬಗ್ಗೆ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮಂಗಳಾದೇವಿ ದೇವಸ್ಥಾನದ ಮ್ಯಾನೇಜರ್ ರಂಜಿತ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ರೀತಿ ಬಿಂಬಿಸಿ ಮಂಗಳಾದೇವಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಅಲ್ಲದೆ, ಮಂಗಳಾದೇವಿ ಮಹತೋಭಾರ ದೇವಸ್ಥಾನ ಎಂದೇ ಗೂಗಲ್ ಮ್ಯಾಪ್ ನಲ್ಲಿ ಸರಿಪಡಿಸಬೇಕು ಎಂದು ಮನವಿಯಲ್ಲಿ ಭಕ್ತರು ಒತ್ತಾಯಿಸಿದ್ದಾರೆ.
Misnaming of Mangaladevi temple on Google Maps rectified after complaint in Mangalore. Unknown miscreants recently altered the name of the location housing the Mangaladevi temple on Google Maps, renaming it as ‘Bolar Shaikh Ummar Saheb Compound’. The compound, located just 200 meters away from the revered temple, raised concerns among the temple management committee and devotees.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am