ಬ್ರೇಕಿಂಗ್ ನ್ಯೂಸ್
11-12-23 11:05 pm Mangalore Correspondent ಕರಾವಳಿ
ಮಂಗಳೂರು, ಡಿ.11: ನಟೋರಿಯಸ್ ರೌಡಿ, ಟಾರ್ಗೆಟ್ ಇಲ್ಯಾಸ್ ಗ್ಯಾಂಗ್ ಮುನ್ನಡೆಸುತ್ತಿದ್ದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಐವರನ್ನು ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿಂದ ಆರೋಪದಿಂದ ಖುಲಾಸೆಗೊಳಿಸಿದೆ.
ದಾವೂದ್, ಶಮೀರ್, ನಮೀರ್, ರಿಯಾಜ್ ಮತ್ತು ಅಬ್ದುಲ್ ಖಾದರ್ ಆರೋಪದಿಂದ ಖುಲಾಸೆಯಾದವರು. 2018ರ ಡಿಸೆಂಬರಿನಲ್ಲಿ ಟಾರ್ಗೆಟ್ ಇಲ್ಯಾಸ್ ನನ್ನು ಕಂಕನಾಡಿಯ ಜೆಪ್ಪು ಬಪ್ಪಾಲ್ ನಲ್ಲಿ ಹೆಂಡ್ತಿ ಮನೆಯಲ್ಲಿದ್ದಾಗಲೇ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ಕಡಿದು ಭೀಕರ ಹತ್ಯೆ ಮಾಡಿದ್ದರು. ಕೃತ್ಯದ ಬಗ್ಗೆ ಪಾಂಡೇಶ್ವರ ಇನ್ಸ್ ಪೆಕ್ಟರ್ ಆಗಿದ್ದ ಕೆಯು ಬೆಳ್ಳಿಯಪ್ಪ ತನಿಖೆ ನಡೆಸಿದ್ದರು.
ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ಗುರುತಿಸಲಾಗಿತ್ತು. ದಾವೂದ್ ಮತ್ತು ಮಹಮ್ಮದ್ ಶಮೀರ್ ಪ್ರಮುಖ ಆರೋಪಿಗಳೆಂದು ಹೇಳಲಾಗಿತ್ತು. 54 ಮಂದಿಯ ಸಾಕ್ಷ್ಯವನ್ನು ಒಳಗೊಂಡು ಸಮಗ್ರ ಚಾರ್ಜ್ ಶೀಟನ್ನು ಕೋರ್ಟಿಗೆ ಸಲ್ಲಿಕೆ ಮಾಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಘಟನೆಗೆ ಪ್ರತ್ಯಕ್ಷ ದರ್ಶಿಗಳಾಗಿದ್ದ ಮೃತ ಇಲ್ಯಾಸ್ ಭಾವ ಮತ್ತು ಅತ್ತೆಯನ್ನು ಒಳಗೊಂಡಂತೆ 25 ಮಂದಿ ಸಾಕ್ಷಿಗಳನ್ನು ಕರೆಸಿತ್ತು. ಟಾರ್ಗೆಟ್ ಗ್ಯಾಂಗಿನಲ್ಲೇ ಇದ್ದ ದಾವೂದ್ ಮತ್ತು ಸಮೀರ್ ಹಳೆ ವೈರತ್ವದಿಂದ ಇಲ್ಯಾಸನ್ನು ಕೊಲೆ ಮಾಡಿದ್ದಾಗಿ ಚಾರ್ಜ್ ಶೀಟಿನಲ್ಲಿ ತಿಳಿಸಲಾಗಿತ್ತು.
ಜಿನೇಂದ್ರ ಕುಮಾರ್ ನೇತೃತ್ವದ ವಕೀಲರ ತಂಡವು ಆರೋಪಿಗಳ ಪರ ವಾದಿಸಿ, ಪೊಲೀಸರು ಸಲ್ಲಿಸಿದ್ದ ಸಾಕ್ಷ್ಯಾಧಾರಗಳನ್ನು ಸವಾಲು ಮಾಡಿ ವಕಾಲತ್ತಿನಲ್ಲಿ ಸೋಲಿಸಿದೆ. ಇದನ್ನು ಪರಿಗಣಿಸಿದ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬಂಧಿಸಲ್ಪಟ್ಟಿದ್ದ ಐವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಉಮರ್ ನವಾಫ್, ಮೊಹಮ್ಮದ್ ನಝೀರ್, ಅಸ್ಗರ್ ಆಲಿ, ನೌಶಾದ್ ಎಂಬವರು ಈವರೆಗೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.
The Third Additional District and Sessions judge acquitted five accused on Monday, December 11, in target Ilyas murder case at Jeppu in 2018. The judgement was announced by district and sessions judge Sandhya S.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am