ಬ್ರೇಕಿಂಗ್ ನ್ಯೂಸ್
06-12-23 10:32 pm Mangalore Correspondent ಕರಾವಳಿ
ಮಂಗಳೂರು, ಡಿ.6: ತುಳುನಾಡಿನ ಜನರು ಭಯ-ಭಕ್ತಿಯಿಂದ ನಂಬುವ ದೈವಾರಾಧನೆಯನ್ನೇ ಅಣಕಿಸುವ ರೀತಿಯಲ್ಲಿ ದೈವದ ಕೋಲ ನಡೆಸುವುದು, ದೈವದ ಪಾತ್ರಧಾರಿಯ ಮುಂಭಾಗದಲ್ಲಿ ಯುವತಿಯೊಬ್ಬಳು ಅಶ್ಲೀಲವಾಗಿ ಕುಣಿಯುವ ವಿಡಿಯೋ ವೈರಲ್ ಆಗಿದ್ದು, ಜಾಲತಾಣದಲ್ಲಿ ದೈವ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೈವದ ಕಾರಣಿಕ ತೋರಿಸುವ ಕಾಂತಾರ ಸಿನಿಮಾ ಹಿಟ್ ಆದ ಬಳಿಕ ತುಳುನಾಡಿನ ದೈವಾರಾಧನೆ ಬಗ್ಗೆ ಹೊರಗಿನ ಜನರಿಗೂ ಆಸಕ್ತಿ ಹುಟ್ಟಿತ್ತು. ಮೈಸೂರಿನಲ್ಲಿ ಕೊರಗಜ್ಜನ ಕಟ್ಟೆ ಸ್ಥಾಪನೆ ಮಾಡಿ ಕೋಲ ನಡೆಸಿದ್ದು, ಬೆಂಗಳೂರು ಭಾಗದಲ್ಲಿ ಕರಾವಳಿಯ ದೈವ ನರ್ತಕರನ್ನು ಕರೆದು ಕೋಲ ನೆರವೇರಿಸಿದ್ದು ಒಂದು ವರ್ಷದ ಹಿಂದೆಯೇ ನಡೆದಿತ್ತು. ಆದರೆ ಈ ರೀತಿ ಬೆಂಗಳೂರು, ಮೈಸೂರು, ಮಂಡ್ಯಕ್ಕೆ ಹೋಗಿ ಕೋಲ ನಡೆಸುವ ಕ್ರಮಕ್ಕೆ ಕರಾವಳಿಯಲ್ಲಿ ವಿರೋಧವೂ ಕೇಳಿಬಂದಿತ್ತು. ಇದೀಗ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊರಗಜ್ಜನ ಕೋಲದ ಸಂದರ್ಭದಲ್ಲಿ ಯುವಕರು ವಿಚಿತ್ರವಾಗಿ ಆವೇಶ ಬಂದವರ ರೀತಿ ವರ್ತಿಸುವುದು, ಯುವತಿಯೊಬ್ಬಳು ತನ್ನ ಎದೆಯ ಮೈಮಾಟವನ್ನು ತೋರಿಸಿ ಕುಣಿಯುವುದು, ಮತ್ತೊಬ್ಬ ಯುವತಿ ಹುಲಿ ವೇಷದ ಕುಣಿತದ ರೀತಿ ಹಾರಾಟ ನಡೆಸುವುದು ವಿಡಿಯೋದಲ್ಲಿದೆ.


ಕೊರಗಜ್ಜನ ಕೋಲದ ಪಾತ್ರಧಾರಿ ನೀರನ್ನು ಚಿಮುಕಿಸುತ್ತ ಹೋಗುತ್ತಿದ್ದರೆ, ಉದ್ದಕ್ಕೆ ನಿಂತ ಯುವಕರು ಒಬ್ಬರ ನಂತರ ಇನ್ನೊಬ್ಬರಂತೆ ಆವೇಶ ಬಂದು ವಿಚಿತ್ರವಾಗಿ ವರ್ತಿಸುತ್ತಾರೆ. ಬೆಂಗಳೂರು ಅಥವಾ ಮಂಡ್ಯ ಭಾಗದಲ್ಲಿ ನಡೆದಿರುವ ಕೋಲದ ಚಿತ್ರಣ ಇದಾಗಿದ್ದು, ವಿಡಿಯೋ ನೋಡಿದರೆ ಕರಾವಳಿಯ ದೈವ ನರ್ತಕರೇ ಇದನ್ನು ಮಾಡಿರುವಂತಿದೆ. ದೊಡ್ಡ ಮೊತ್ತಕ್ಕೆ ಕಂಟ್ರಾಕ್ಟು ಪಡೆದು ಈ ರೀತಿಯ ಕೋಲಗಳನ್ನು ತುಳುನಾಡಿನ ದೈವ ನರ್ತಕರೇ ಬೆಂಗಳೂರು ಭಾಗದಲ್ಲಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳಿದ್ದವು. ಈಗ ಹೊರಬಂದಿರುವ ವಿಡಿಯೋ ಅದಕ್ಕೆ ಸಾಕ್ಷಿಯಾಗಿ ಕಂಡುಬರುತ್ತಿದ್ದು, ದೈವಗಳಿಗೆ ಇಂತಹ ಸ್ಥಿತಿಯಾದರೆ ಹೇಗೆ ಎನ್ನುವ ಪ್ರಶ್ನೆಗಳನ್ನು ಜನರು ಮುಂದಿಡುತ್ತಿದ್ದಾರೆ.

ಕಾಂತಾರದ ಪಂಜುರ್ಲಿ ಮಾದರಿಯ ಚಿತ್ರಣದ ಮುಂದೆ ಯುವತಿಯೊಬ್ಬಳು ವಿಕೃತ ಮತ್ತು ಅಶ್ಲೀಲವಾಗಿ ಕುಣಿದಿದ್ದು, ಅದನ್ನು ಒಬ್ಬಾತ ಹತ್ತಿರದಿಂದಲೇ ಶೂಟ್ ಮಾಡಿದ್ದಾನೆ. ಕಾಲೇಜಿನ ವೇದಿಕೆಯಲ್ಲಿ ನಡೆದಿರುವ ಚಿತ್ರಣವೋ ಗೊತ್ತಿಲ್ಲ. ದೈವಗಳನ್ನು ಅಣಕಿಸುವ ರೀತಿ ಆಕೆಯ ವರ್ತನೆ ಇದೆ. ಈ ಬಗ್ಗೆ ತುಳುನಾಡಿನ ದೈವ ನರ್ತಕರು ದೂರು ಕೊಡಲು ಮುಂದಾಗಿದ್ದಾರೆ. ದೈವದ ಕೋಲ ನೆಪದಲ್ಲಿ ವಿಕೃತವಾಗಿ ವರ್ತಿಸುವುದು, ಅಶ್ಲೀಲವಾಗಿ ಕುಣಿಯುವುದು ದೈವಾರಾಧನೆ ಮತ್ತು ಭಕ್ತರ ನಂಬಿಕೆಗೆ ಮಾಡಿದ ಅವಮಾನವಾಗಿದ್ದು, ದೂರು ದಾಖಲಾದರೆ ಪೊಲೀಸರು ಕ್ರಮ ಕೈಗೊಳ್ಳಬಹುದಾಗಿದೆ.
Insult to Mangalore daiva kola video goes viral on social media. Viral videos have been critised by people over social media
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am