ಬ್ರೇಕಿಂಗ್ ನ್ಯೂಸ್
02-12-23 03:32 pm Mangalore Correspondent ಕರಾವಳಿ
ಮಂಗಳೂರು, ಡಿ.2: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ರೌಂಡ್ಸ್ ಹಾಕಿದ್ದಾರೆ. ಬಂದರು ದಕ್ಕೆಯಲ್ಲಿ ನಡೆದು ಸಾಗಿದ ಸಚಿವರು ಸುಡು ಬಿಸಿಲಿನಲ್ಲೇ ಮೀನುಗಾರರ ಸಮಸ್ಯೆ ಆಲಿಸಿದ್ದಾರೆ.
ಮೀನುಗಾರಿಕಾ ಬಂದರಿನಲ್ಲಿ ಒಂದು ಗಂಟೆ ಕಾಲ ಸುತ್ತಾಡಿದ ಸಚಿವರು ಮೀನುಗಾರ ಮುಖಂಡರು, ಬೋಟ್ ಮಾಲೀಕರು, ಬಂದರು ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು. ಈ ವೇಳೆ, ಮೀನುಗಾರಿಕಾ ಬಂದರಿನ ಅವ್ಯವಸ್ಥೆಗಳ ಬಗ್ಗೆ ಮೀನುಗಾರರು ಸಚಿವರ ಗಮನಕ್ಕೆ ತಂದರು. ಸಮುದ್ರದ ಅಳಿವೆ ಬಾಗಿಲಿನಲ್ಲಿ ಹೂಳೆತ್ತದೇ ಇರುವುದರಿಂದ ಬೋಟ್ ಗಳ ಬಂದರು ಪ್ರವೇಶಕ್ಕೆ ಸಮಸ್ಯೆಯಾಗಿದೆ. ಬಂದರು ವ್ಯಾಪ್ತಿಯ ನೀರಿನಲ್ಲಿ ಕಸ ಮತ್ತು ಕೆಸರು ತುಂಬಿ ದುರ್ನಾತ ಬೀರುತ್ತಿದೆ ಎಂದು ಮೀನುಗಾರರು ಸಮಸ್ಯೆ ಹೇಳಿಕೊಂಡರು.


ಮೀನಿನ ಬಾಕ್ಸ್ ಇಡಲು ಹಾಗೂ ಮೀನು ಹರಾಜಿಗೆ ಪ್ರತ್ಯೇಕ ಜಾಗ ಇಲ್ಲದಿರುವ ಬಗ್ಗೆಯೂ ಅಳಲು ಹೇಳಿಕೊಂಡರು. ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುವ ಮೀನುಗಾರಿಕಾ ಬಂದರಿಗೆ ಭದ್ರತೆ ಇಲ್ಲ, ಮೀನುಗಾರಿಕೆ ಹಡಗಿಗೂ ಭದ್ರತೆ ಇಲ್ಲ, ಒಂದು ಸಿಸಿ ಕ್ಯಾಮಾರಾನೂ ಇಲ್ಲ ಎಂದು ಆತಂಕ ಹೇಳಿಕೊಂಡರು. ಅಲ್ಲದೆ, ಮೀನು ರಫ್ತಿಗೆ ಉದ್ಯಮಿಗಳು ಬಂದರೂ ಸ್ವಚ್ಛತೆ ಇಲ್ಲದಿರುವುದರಿಂದ ವಾಪಸ್ ಹೋಗ್ತಾರೆ ಅಂತ ಮೀನುಗಾರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ನಾಯಕರು ಜೊತೆಗಿದ್ದರು.

ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಿರೋದು ಆತಂಕದ ವಿಷಯ
ಇದೇ ವೇಳೆ, ಮಾಧ್ಯಮಕ್ಕೆ ಹೇಳಿಕೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಮೀನುಗಾರರು ಮತ್ತು ಇಲ್ಲಿನ ಮುಖಂಡರು ಸಮಸ್ಯೆ ಹೇಳಿಕೊಂಡಿದ್ದಾರೆ. ಇಲ್ಲಿನ ಮುಖ್ಯ ಸಮಸ್ಯೆ ಬಗ್ಗೆ ಅವಲೋಕನ ಮಾಡಿದ್ದೇನೆ. ಮುಂದೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ತೇನೆ. ಮೀನುಗಾರಿಕಾ ಬಂದರಿನಲ್ಲಿ ಹಲವಾರು ಸೆಕ್ಯೂರಿಟಿ ಲ್ಯಾಪ್ಸ್ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಸಮುದ್ರದ ಪಕ್ಕದಲ್ಲಿರುವ ಕಾರಣ ಭದ್ರತೆ ಮತ್ತು ಸುರಕ್ಷಣೆ ಮುಖ್ಯ. ರಾಷ್ಟ್ರ ಮತ್ತು ರಾಜ್ಯದ ಹಿತ ಇದರಲ್ಲಿ ಅಡಕವಾಗಿದೆ. ಇಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಿರೋದು ಬಹಳ ಚಿಂತಾಜನಕ ವಿಷಯ. ಈ ಬಗ್ಗೆ ಖಂಡಿತವಾಗಿಯೂ ಗಮನ ಹರಿಸುತ್ತೇನೆ. ಬಹಳಷ್ಟು ಸಮಸ್ಯೆಗಳಿವೆ, ಈ ಬಗ್ಗೆ ಸಭೆ ಮಾಡಿ ಚರ್ಚೆ ಮಾಡ್ತೇವೆ ಎಂದು ಹೇಳಿದರು.


ಅಂಜಲ್ ಮೀನು ಹರಾಜು ಕೂಗಿದ ಗುಂಡೂರಾವ್
ಬಂದರು ದಕ್ಕೆಯಲ್ಲಿ ಸುತ್ತಾಟದ ವೇಳೆ ಮೀನು ಹರಾಜು ಆಗುತ್ತಿದ್ದ ಜಾಗಕ್ಕೆ ತೆರಳಿದ ಸಚಿವ ದಿನೇಶ್ ಗುಂಡೂರಾವ್, ಸ್ವತಃ ಅಂಜಲ್ ಮೀನನ್ನು ಕೈಯ್ಯಲ್ಲಿ ಎತ್ತಿಕೊಂಡು ಹರಾಜು ಕೂಗಿದ್ದಾರೆ. ಜೊತೆಗಿದ್ದ ಕಾಂಗ್ರೆಸ್ ಮುಖಂಡರು ಅಂಜಲ್ ಮೀನು ಹಿಡಿದು ಪೋಸು ಕೊಟ್ಟಿದ್ದಾರೆ. 150 ರೂ.ನಿಂದ ಹರಾಜು ಆರಂಭಿಸಿದ ಸಚಿವರ ಬಗ್ಗೆ ಮೀನುಗಾರರು ಖುಷ್ ಆಗಿದ್ದಾರೆ. ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳೂರಿನ ಬಂದರು ದಕ್ಕೆಯ ಹರಾಜು ಏರಿಯಾದಲ್ಲಿ ಗುಂಡೂರಾವ್ ಸುತ್ತಾಟ ನಡೆಸಿದ್ದು ಮೀನುಗಾರರ ಜೊತೆ ಬೆರೆತು ಅವರ ಸಮಸ್ಯೆ ಆಲಿಸಿದ್ದಾರೆ.
Minister Dinesh Gundu Rao visits Mangalore fishing harbour, listens to fishermen issues.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm