ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮೌಲ್ಯದ ಬೋಟ್, ಇನ್ನಿತರ ಆಸ್ತಿ ವಶಕ್ಕೆ ; ಮುಟ್ಟುಗೋಲು ಹಾಕಿದ ಇಡಿ ಅಧಿಕಾರಿಗಳು 

09-11-25 03:50 pm       Mangalore Correspondent   ಕ್ರೈಂ

ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಜೆಪ್ಪಿನಮೊಗರು ನಿವಾಸಿ ರೋಷನ್ ಸಲ್ದಾನ ಎಂಬಾತನ ಮನೆ ಮತ್ತು ಬ್ಯಾಂಕ್‌ ಖಾತೆ ಸೇರಿದಂತೆ ಒಟ್ಟು 2.85 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

ಮಂಗಳೂರು, ನ.9 : ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಜೆಪ್ಪಿನಮೊಗರು ನಿವಾಸಿ ರೋಷನ್ ಸಲ್ದಾನ ಎಂಬಾತನ ಮನೆ ಮತ್ತು ಬ್ಯಾಂಕ್‌ ಖಾತೆ ಸೇರಿದಂತೆ ಒಟ್ಟು 2.85 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ರೋಷನ್ ಸಲ್ದಾನ, ಪತ್ನಿ ಡ್ಯಾಫ್ಟಿ ನೀತು ಡಿಸೋಜ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ಪ್ರಾರಂಭಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್‌ಇ) ಅಡಿಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿಯ ಪ್ರಕಟಣೆ ತಿಳಿಸಿದೆ. 

ಪಿಎಂಎಲ್ಇ ಸೆಕ್ಷನ್ 17ರ ಅಡಿಯಲ್ಲಿ ನಡೆಸಿದ ಶೋಧ ಕಾರ್ಯ ಮತ್ತು ನಂತರ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು, 2024 ಅಕ್ಟೋಬರ್‌ನಿಂದ 2025 ಜುಲೈ ನಡುವೆ ವಂಚನೆ ನಡೆಸಿರುವುದು ಪತ್ತೆಯಾಗಿದೆ. ‌ರಾಜ್ಯ ಮತ್ತು ಹೊರ ರಾಜ್ಯದ ಹಲವು ಉದ್ಯಮಿಗಳಿಂದ ಸ್ಟ್ಯಾಂಪ್‌ ಡ್ಯೂಟಿ ನೆಪದಲ್ಲಿ ನಕಲಿ ಕಂಪನಿ ಹೆಸರಲ್ಲಿ 49 ಕೋಟಿ ರೂ. ಸಂಗ್ರಹಿಸಿದ್ದು, ಅವರಿಗೆ ಹೆಚ್ಚಿನ ಮೊತ್ತದ ಸಾಲ ಒದಗಿಸುವ ಭರವಸೆ ನೀಡಿದ್ದ. ಹೀಗೆ ಸಂಗ್ರಹಿಸಿದ ಹಣವನ್ನು ಆರೋಪಿಗಳು ತಮ್ಮ ವೈಯಕ್ತಿಕ ಉದ್ದೇಶ, ವ್ಯವಹಾರಕ್ಕೆ ಬಳಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆಗಸ್ಟ್‌ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಇಡಿ ಅಧಿಕಾರಿಗಳು, ಆರೋಪಿಗಳ ಬ್ಯಾಂಕ್ ಖಾತೆ, ಮೀನುಗಾರಿಕಾ ಬೋಟ್ ಮತ್ತು ಅವುಗಳ ಎಂಜಿನ್‌ಗಳ ರೂಪದಲ್ಲಿ ಅಂದಾಜು 9.5 ಕೋಟಿ ರೂ. ಮೊತ್ತವನ್ನು ವಶಕ್ಕೆ ಪಡೆದಿದೆ. ಇದರ ಮುಂದುವರಿದ ಭಾಗವಾಗಿ, ರೋಷನ್ ಸಲ್ಮಾನನಿಗೆ ಸೇರಿದ 2.14 ರೂ. ಕೋಟಿ ಮೌಲ್ಯದ ಆಸ್ತಿ, ಪಿ.ಎಂ. ಎಂಟರ್ಪ್ರೈಸಸ್ ಬ್ಯಾಂಕ್ ಖಾತೆಯ 70.8 ಲಕ್ಷ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

The Enforcement Directorate (ED) has seized assets worth ₹2.85 crore, including a boat and bank accounts, belonging to Roshan Saldanha, a resident of Jeppinamogaru, who is the main accused in a multi-crore fraud case.