ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇಕ್ ಆಳ್ವ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ 

07-11-25 02:18 pm       Mangalore Correspondent   ಕರಾವಳಿ

ಕಂಬಳ ಸಂಘಟಕ, ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ, ನೆಲ್ಯಾಡಿಯಲ್ಲಿ ತಂದೆಯ ಹೊಟೇಲ್ ಉದ್ಯಮ ನೋಡಿಕೊಂಡಿದ್ದ ಅಭಿಷೇಕ್ ಆಳ್ವ(29) ಹೆಜಮಾಡಿ ಬಳಿಯ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಬೆಳಗ್ಗೆ ನದ ಕಿನಾರೆಯಲ್ಲಿ ಶವ ಪತ್ತೆಯಾಗಿದೆ. 

ಮಂಗಳೂರು, ನ.7 : ಕಂಬಳ ಸಂಘಟಕ, ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ, ನೆಲ್ಯಾಡಿಯಲ್ಲಿ ತಂದೆಯ ಹೊಟೇಲ್ ಉದ್ಯಮ ನೋಡಿಕೊಂಡಿದ್ದ ಅಭಿಷೇಕ್ ಆಳ್ವ(29) ಹೆಜಮಾಡಿ ಬಳಿಯ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಬೆಳಗ್ಗೆ ನದ ಕಿನಾರೆಯಲ್ಲಿ ಶವ ಪತ್ತೆಯಾಗಿದೆ. 

ಬುಧವಾರ ರಾತ್ರಿ ಸ್ನೇಹಿತರೊಂದಿಗೆ ಊಟ ಮುಗಿಸಿ ತನ್ನ ಕಾರಿನಲ್ಲಿ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಗುರುವಾರ ಸಂಜೆ ಮೂಲ್ಕಿ ಬಪ್ಪನಾಡು ಸೇತುವೆ ಬಳಿ ಅವರ ಕಾರು ಪತ್ತೆಯಾಗಿತ್ತು. ಹೀಗಾಗಿ ತಂದೆ ನವೀನಚಂದ್ರ ಆಳ್ವ ಪುತ್ರ ನಾಪತ್ತೆಯಾದ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸ್ಥಳೀಯರು ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಂಭವಿ ನದಿಯಲ್ಲಿ ಹುಡುಕಾಟ ಆರಂಭಿಸಿದ್ದರು. ಶುಕ್ರವಾರ ಬೆಳಗ್ಗೆ ನದಿ ಮಧ್ಯದ ಕುದ್ರು ಬಳಿ ಶವ ಪತ್ತೆಯಾಗಿದ್ದು ಪೊಲೀಸರು ಅಲ್ಲಿಂದ ಹೊರ ತೆಗೆದು ಮಂಗಳೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. 

ಅಭಿಷೇಕ್‌ ಆಳ್ವ ನೆಲ್ಯಾಡಿಯಲ್ಲಿ ಚರಣ್ ಬಾರ್ ಅಂಡ್ ರೆಸ್ಟೋರೆಂಟ್ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಘಟನೆ ಬಗ್ಗೆ ಪಡುಬಿದ್ರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‌

Abhishek Alva (29), son of Kambala organizer and entrepreneur Naveen Chandra Alva of Thiruvailuguttu, was found dead in the Shambhavi River near Hejamadi in a suspected case of suicide. Abhishek managed his family’s hotel business, Charan Bar & Restaurant, in Nelyadi.