ಬ್ರೇಕಿಂಗ್ ನ್ಯೂಸ್
16-11-23 04:28 pm Mangalore Correspondent ಕರಾವಳಿ
ಮಂಗಳೂರು, ನ.16: ಭಾರತೀಯರ ಸುದೀರ್ಘ ಕಾಲದ ಕನಸು ನನಸಾಗುತ್ತಿದೆ. ಹೋರಾಟದ ಬಳಿಕ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಮಕರಸಂಕ್ರಾಂತಿ ಮುಗಿಯುತ್ತಿದ್ದಂತೆ ರಾಮದೇವರ ಪ್ರಾಣ ಪ್ರತಿಷ್ಠೆಯಾಗಲಿದೆ. ಜನವರಿ 22ರ ಅಭಿಜಿತ್ ಮುಹೂರ್ತದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಲಾಗುವುದು ಎಂದು ಪೇಜಾವರ ಮಠದ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ಆ ದಿನ ಎಲ್ಲರಿಗೂ ಅಯೋಧ್ಯೆಗೆ ಬರಲು ಅವಕಾಶ ಇರೋದಿಲ್ಲ. ಹೀಗಾಗಿ ಎಲ್ಲರೂ ನಮ್ಮ ಊರಲ್ಲೇ ಬೃಹತ್ ಪರದೆಯ ಮೂಲಕ ವೀಕ್ಷಣೆ ಮಾಡಬೇಕು. ನಮ್ಮ ಊರಿನ ರಾಮನ ಮಂದಿರಗಳಲ್ಲಿ ಪೂಜೆ ಭಜನೆ ಪ್ರಸಾದ ವಿತರಣೆ ಮಾಡಬೇಕು. ಪ್ರಾಣ ಪ್ರತಿಷ್ಠೆ ಆದ ಬಳಿಕ ಮಂಡಲ ಉತ್ಸವ ನಡೆಯುತ್ತದೆ. ನಿತ್ಯ ಅಭಿಷೇಕ ಸೇರಿದಂತೆ ವಿವಿಧ ಪೂಜೆ ನಡೆಯುತ್ತದೆ. ಆ ಸಂಧರ್ಭದಲ್ಲಿ ಎಲ್ಲರೂ ಬಂದು ಪೂಜೆ ಸಲ್ಲಿಸಬಹುದು.
ರಾಮ ಮಂದಿರದಲ್ಲಿ ಸೇವಾ ರೂಪದ ಪಟ್ಟಿ ಇರೋದಿಲ್ಲ. ರಾಮಭಕ್ತಿ ಬೇರೆ ಅಲ್ಲ,ದೇಶ ಭಕ್ತಿ ಬೇರೆ ಅಲ್ಲ. ರಾಮ ಸೇವೆ ಮಾಡುವ ಇಚ್ಛೆಯವರು ದೇಶಸೇವೆ ಮಾಡೋಣ. ಜನವರಿ 23ರಿಂದ ಮಾರ್ಚ್ 10ರ ವರಗೆ ಉತ್ಸವ ನಡೆಯುತ್ತದೆ. ರಾಮನ ಸೇವೆ ಮತ್ತು ದೇಶ ಸೇವೆ ಒಂದೇ. ರಾಮನ ಸೇವೆ ಮಾಡಿದರೆ ದೇಶದ ಸೇವೆ ಮಾಡಿದಂತೆ. ದೇಶ ಸೇವೆ ಮಾಡಿದರೆ ರಾಮ ಸೇವೆ ಮಾಡಿದಂತೆ ಎಂದು ಖಾಸಗಿ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಸ್ವಾಮೀಜಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮಕದ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ, ಸರ್ಕಾರ ಇರಬೇಕಾದರೆ ಪ್ರತಿಪಕ್ಷವೂ ಪ್ರಬಲವಾಗಿರಬೇಕು. ಪ್ರತಿಪಕ್ಷ ನಾಯಕನಿಲ್ಲದೆ ಕುಂಠಿತವಾಗಿತ್ತು. ಈಗ ಸಮರ್ಥ ನಾಯಕ ಬಂದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಹಾರೈಸುತ್ತೇನೆ ಎಂದರು.
ಹಿಂದೂ ಕಾರ್ಯಕರ್ತರ ಗಡಿಪಾರು ಬಗ್ಗೆ ಕೇಳಿದ್ದಕ್ಕೆ, ಅದನ್ನು ನಾವು ಒಪ್ಪತಕ್ಕಂತ ಮಾತಲ್ಲ. ಅಂತಹ ವಿಚಾರಗಳು ನಡೆಯಬಾರದು. ಸರ್ಕಾರ ಎಲ್ಲರಿಗೂ ಸಂಬಂಧಪಟ್ಟದ್ದು. ಸರ್ಕಾರಕ್ಕೆ ಎಲ್ಲರೂ ಸಮಾನರು. ಒಂದು ಗುಂಪನ್ನು ಟಾರ್ಗೆಟ್ ಮಾಡಿದರೆ ಅದು ಶೋಭೆ ತರುವಂತಹದು ಅಲ್ಲ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
The long-cherished dream of Indians is coming true. The Ram temple is being built after the struggle. As soon as Makar Sankranti is over, the life of Lord Ram will be consecrated. Yati Vishwaprasanna Theertha Swamiji of Pejawar Mutt has said that the prana pratishtha of Lord Ram will be consecrated on January 22 at Abhijit Muhurat.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 03:02 pm
HK News Desk
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm