ಬ್ರೇಕಿಂಗ್ ನ್ಯೂಸ್
13-11-23 06:53 pm Mangalore Correspondent ಕರಾವಳಿ
ಉಡುಪಿ, ನ.13: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಒಮ್ಮಿಂದೊಮ್ಮೆಲೇ ಬೆಂಕಿ ಹತ್ತಿಕೊಂಡಿದ್ದು, ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳು ಬೆಂಕಿಗಾಹುತಿಯಾಗಿವೆ. ಧಗ ಧಗನೆ ಉರಿದ ಬೆಂಕಿಯ ಕೆನ್ನಾಲಿಗೆಗೆ ಬಾನಲ್ಲಿ ದಟ್ಟ ಹೊಗೆ, ಉರಿ ಜ್ವಾಲೆಯನ್ನು ಸೃಷ್ಟಿಸಿತ್ತು.
ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇಂದು ಬೆಳಗ್ಗೆ ಬೆಂಕಿಯದ್ದೇ ಸದ್ದು. ಒಂದೆರಡಲ್ಲ ಹತ್ತಕ್ಕೂ ಹೆಚ್ಚು ಬೋಟುಗಳಿಗೆ ಹಠಾತ್ ಬೆಂಕಿ ಹತ್ತಿಕೊಂಡಿದ್ದು, ಸಮುದ್ರ ಬದಿಯಲ್ಲಿ ಗಾಳಿಯೊಂದಿಗೆ ಬೆಂಕಿ ಸರಸವಾಡಿದಂತಿತ್ತು. ಇಷ್ಟಕ್ಕೂ ಬೆಂಕಿ ಬೀಳೋದಕ್ಕೆ ಅಲ್ಲಿಯೇ ದೀಪಾವಳಿ ಪಟಾಕಿ ಸಿಡಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಕಾರಣವಂತೆ. ಕಾರ್ಮಿಕರು ಹಾರಿಸಿದ್ದ ಪಟಾಕಿಯ ಕಿಡಿ ನೇರವಾಗಿ ಬೋಟು ಮೇಲಕ್ಕೆ ಬಿದ್ದಿದೆ. ಬೋಟನ್ನು ತೀರಕ್ಕೆ ತಂದು ಮೇಲ್ಗಡೆ ತೆಂಗಿನ ಗರಿಯನ್ನು ಮುಚ್ಚಲಾಗಿತ್ತು. ತೆಂಗಿನ ಗರಿಗಳು ಬಿಸಿಲಿಗೆ ಒಣಗಿದ್ದರಿಂದ ಪಟಾಕಿಯ ಬಾಣದ ಬಿರುಸಿಗೆ ಬೆಂಕಿಯ ಜ್ವಾಲೆ ಏಳುವಂತೆ ಮಾಡಿತ್ತು. ಗಾಳಿಯಿಂದಾಗಿ ಬೆಂಕಿ ಅಕ್ಕಪಕ್ಕದಲ್ಲಿ ಹರಡಿದ್ದು ಅಲ್ಲಿ ನಿಲ್ಲಿಸಿದ್ದ ಹನ್ನೊಂದು ಬೋಟುಗಳಿಗೂ ಹರಡಿದೆ. ಧಗ ಧಗನೆ ಹೊತ್ತಿಕೊಂಡಿದ್ದು, ಅಲ್ಲಿಯೇ ನಿಲ್ಲಿಸಿದ್ದ ಎರಡು ಬೈಕ್ ಕೂಡ ಹೊತ್ತಿ ಉರಿದು ಹೋಗಿದೆ.



ದೀಪಾವಳಿ ನಿಮಿತ್ತ ಕಾರ್ಮಿಕರು ರಜೆಯಲ್ಲಿದ್ದರೆ, ಮೀನುಗಾರರು ಬೋಟನ್ನು ನಿಲ್ಲಿಸಿ ತಮ್ಮ ಮನೆಗೆ ತೆರಳಿದ್ದರು. ಬೆಂಕಿ ಬಿದ್ದ ಕೂಡಲೇ ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಬಳಿಕ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಅನಾಹುತದಿಂದ ಸುಮಾರು 5 ಕೋಟಿಗೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.
Kundapur Eight boats go up in flames after fire breaks out in harbour. Eight boats that were anchored on the river bank, were gutted in a fire mishap on Monday November 13 at Manganese Road of Gangolli. The loss is estimated to run into crore of rupees.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm