ಬ್ರೇಕಿಂಗ್ ನ್ಯೂಸ್
31-10-23 09:41 pm Mangaluru Correspondent ಕರಾವಳಿ
ಉಳ್ಳಾಲ, ಅ.31: ರಾಜ್ಯದ 68 ವೈಯಕ್ತಿಕ ಸಾಧಕರು, 10 ಸಂಘ ಸಂಸ್ಥೆಗಳಿಗೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಕ್ರಿಕೆಟ್ ಆಟದಲ್ಲಿ ಉತ್ತುಂಗಕ್ಕೇರಿ ಬಂದ ಪ್ರಶಸ್ತಿ ಮೊತ್ತದಲ್ಲೇ ಜನಸೇವೆಯಲ್ಲಿ ತೊಡಗಿಸಿದ್ದ ಉಳ್ಳಾಲದ ಮಾರುತಿ ಜನಸೇವಾ ಸಂಘಕ್ಕೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕಳೆದ ಮೂವತ್ತು ವರುಷಗಳ ಹಿಂದೆ ಉಳ್ಳಾಲದ ಮೊಗವೀರ ಪಟ್ಣದಲ್ಲಿ ಹುಟ್ಟಿಕೊಂಡ ಮಾರುತಿ ಕ್ರಿಕೆಟರ್ಸ್ ತಂಡವು ಕ್ರಿಕೆಟ್ ಆಟದಲ್ಲಿ ಉತ್ತಮ ಪ್ರದರ್ಶನಗಳನ್ನ ನೀಡಿ ಸಿಕ್ಕಿದ ಪ್ರಶಸ್ತಿಯ ಮೊತ್ತವನ್ನ ಸಮಾಜ ಸೇವೆಗೆ ವಿನಿಯೋಗಿಸುತ್ತ ಮಾರುತಿ ಜನಸೇವಾ ಸಂಘವೆಂದು ಹೆಸರುವಾಸಿಯಾಗಿದೆ.
ವಿ.ವಿ ಮಟ್ಟದ ಖ್ಯಾತ ಕ್ರಿಕೆಟ್ ಆಟಗಾರರಾದ ಸುಧೀರ್ ವಿ. ಅಮೀನ್, ಅಶ್ವಥ್ ಪುತ್ರನ್, ಉದಯ ಸಾಲ್ಯಾನ್, ದಿನೇಶ್ ಕರ್ಕೇರ, ಅನಿಲ್ ಚರಣ್ ರಂತವರಿಗೆ ಇದೇ ತಂಡ ವೇದಿಕೆ ಆಗಿತ್ತು.
ಸಂಘದ ಬೆಳ್ಳಿಹಬ್ಬದ ನೆನಪಿಗಾಗಿ ಉಳ್ಳಾಲ ಮೊಗವೀರ ಸಂಘದ ಹಿರಿಯರು ಕಟ್ಟಿಸಿದ್ದ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಗೆ ಅಂದಾಜು 1.5 ಕೋಟಿ ರೂ. ವೆಚ್ಚದಲ್ಲಿ ಒಂದು ಮಹಡಿಯ ಸುಸಜ್ಜಿತ ಕಟ್ಟಡವನ್ನ ಮರು ನಿರ್ಮಿಸಿ ಕೊಟ್ಟು ಅದರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಉಳ್ಳಾಲದಲ್ಲಿ ಪ್ರಪ್ರಥಮವಾಗಿ ಎರಡು ದಿವಸಗಳ ಬೀಚ್ ಉತ್ಸವವನ್ನು ನಡೆಸಿ ಸರ್ವ ಧರ್ಮೀಯರಿಂದ ಶಹಬಾಷ್ ಗಳಿಸಿದ ಕೀರ್ತಿ ಮಾರುತಿ ಜನಸೇವಾ ಸಂಘಕ್ಕೆ ಸಲ್ಲುತ್ತದೆ.


ಕಡಲ್ಕೊರೆತಕ್ಕೆ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸಂಘದ ವತಿಯಿಂದ ಐದು ಮನೆ ನಿರ್ಮಿಸಿ ಕೊಡಲಾಗಿದೆ. ಕನಿಷ್ಟ ಎಂದರೂ ವರ್ಷಕ್ಕೆ ಐದು ಲಕ್ಷ ರೂ. ವ್ಯಯಿಸಿ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ, ಸ್ಥಳೀಯ ದೇವಸ್ಥಾನದ ಪ್ರಧಾನ ಅರ್ಚಕರು, ಗುರಿಕಾರ ವೃಂದ ಹಾಗೂ ದೈವ ನರ್ತಕರಿಗೆ ಸಹಾಯಧನ ವಿತರಣೆ,ಕೊರೊನ ಲಾಕ್ ಡೌನ್ ಸಂದರ್ಭ 6ಲಕ್ಷ ರೂ. ವೆಚ್ಚ ಭರಿಸಿ ಆಹಾರ ಕಿಟ್ ಗಳನ್ನ ಸಂಘದ ವತಿಯಿಂದ ವಿತರಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಮೂವತ್ತು ಕುಟುಂಬಕ್ಕೆ ಸಾಮೂಹಿಕ ವಿವಾಹ ಮಾಡುವ ಭವಿಷ್ಯದ ಯೋಜನೆಯನ್ನ ಸಂಘ ಇಟ್ಟುಕೊಂಡಿದೆ. ಮಾರುತಿ ಜನ ಸೇವಾ ಸಂಘವು ಕೆಲ ವರುಷಗಳ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನ ಗಳಿಸಿದ್ದು ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.
Ullal Maruthi Jana Seva Sangha to get karnataka rajyotsava award 2023 in Mangalore by Cricket charity.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm