ಬ್ರೇಕಿಂಗ್ ನ್ಯೂಸ್
13-10-23 08:11 pm Mangalore Correspondent ಕರಾವಳಿ
ಮಂಗಳೂರು, ಅ.13: ಮೀನುಗಾರರಿಗೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ ಎಂಬ ಶಾಸಕ ವೇದವ್ಯಾಸ ಕಾಮತ್ ಟೀಕೆಗೆ ಮಾಜಿ ಎಂಎಲ್ಸಿ ಐವಾನ್ ಡಿಸೋಜ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಲ್ಕು ವರ್ಷಗಳ ಆಡಳಿತದಲ್ಲಿ ಮೀನುಗಾರರಿಗೆ ಏನು ಕೊಟ್ಟಿದೆ. ವೇದವ್ಯಾಸ ಕಾಮತ್ ಏನು ಕೊಟ್ಟಿದ್ದಾರೆ, ಅದನ್ನು ಹೇಳಲಿ. ಬಿಜೆಪಿ ಆಡಳಿತದಲ್ಲಿ ಯಾವೊಂದು ಪ್ರಮುಖ ಯೋಜನೆಯನ್ನೂ ಕೊಟ್ಟಿಲ್ಲ. ಬದಲಿಗೆ, ಇದ್ದ ಸೌಲಭ್ಯವನ್ನೂ ನಿಲ್ಲಿಸಿದ್ದಾರೆ ಎಂದು ಐವಾನ್ ಡಿಸೋಜ ಟೀಕಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಕೇಳುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದು ಐದು ತಿಂಗಳಾಗಿದೆ ಅಷ್ಟೇ. ಇಷ್ಟರಲ್ಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಇದರ ಉಪಯೋಗ ರಾಜ್ಯದ ನಾಲ್ಕು ಕೋಟಿ ಜನರಿಗೆ ನೇರವಾಗಿ ಲಭಿಸಿದೆ. ಇದನ್ನು ಸಹಿಸಲಾಗದೆ ಏನೇನೋ ಹೇಳುತ್ತಿದ್ದಾರೆ. ಯಾಂತ್ರೀಕೃತ ದೋಣಿಗಳಿಗೆ ಕರ ರಹಿತ ಡೀಸೆಲನ್ನು ವಾರ್ಷಿಕ 1.50 ಲಕ್ಷ ಕಿಲೋ ಲೀಟರಿನಿಂದ ಎರಡು ಲಕ್ಷ ಕಿಲೋ ಲೀಟರ್ ಗೆ ಹೆಚ್ಚಿಸಿ ಆದೇಶ ಮಾಡಲಾಗಿದೆ. ಮೀನುಗಾರ ಮಹಿಳೆಯರಿಗೆ 50 ಸಾವಿರ ಸಹಾಯಧನ ನೀಡುವ ಯೋಜನೆಗೆ 20 ಕೋಟಿ ಬಿಡುಗಡೆ ಮಾಡಲಾಗಿದೆ. ಮಂಗಳೂರಿನ ಮೀನುಗಾರಿಕೆ ಬಂದರು ಮೂರನೇ ಹಂತದ ಕಾಮಗಾರಿಗೆ 49.50 ಕೋಟಿ ವೆಚ್ಚದ ಅಂದಾಜು ಪಟ್ಟಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ನಾವು ಮಾಡುತ್ತೇವೆ, ಅದರಲ್ಲಿ ನಾವು ಹಿಂಜರಿಯಲ್ಲ.
ಮಂಗಳೂರಿನ ಹೊಯ್ಗೆ ಬಜಾರ್ ನಲ್ಲಿ 180 ಕುಟುಂಬಗಳಿದ್ದು ಅವರಿಗೆ ಹಕ್ಕುಪತ್ರಕ್ಕಾಗಿ ಅಲೆದಾಟ ಮಾಡುತ್ತಿದ್ದಾರೆ. ಅವರಿಗೆ ಭೂಮಿಯ ಹಕ್ಕನ್ನು ನೀಡಲು ಈ ಹಿಂದೆ 2004ರಲ್ಲಿ ರಮಾನಾಥ ರೈ ಸಚಿವರಾಗಿದ್ದ ವೇಳೆ ಪ್ರಯತ್ನಿಸಿದ್ದರು. ಶಾಸಕ ಕಾಮತ್ ಕಂದಾಯ ಇಲಾಖೆಗೆ ಹೇಳಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಮಾಡಿಸಬಹುದಿತ್ತಲ್ಲ.. ಯಾಕೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯೊಳಗೆ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುತ್ತೇವೆ ಎಂದು ಐವಾನ್ ಹೇಳಿದರು.
ಬಯೋಮೆಟ್ರಿಕ್ ಬಗ್ಗೆ ಪತ್ರಿಕಾಗೋಷ್ಟಿ ಮಾಡಿ ರಿಜಿಸ್ಟ್ರೇಶನ್ ಕಚೇರಿ ಬಗ್ಗೆ ಜನರಿಗೆ ಶಂಕೆ ಬರುವಂತೆ ಮಾಡಿದ್ದೀರಿ. ಇವರು ಶಾಸಕರಾಗಿ ಸರ್ಕಾರಕ್ಕೆ ಹೇಳಿ ಸಮಸ್ಯೆ ಸರಿಪಡಿಸಲಿ. ಇವರ ಜವಾಬ್ದಾರಿ ಅಲ್ಲವೇ.. ಸುದ್ದಿಗೋಷ್ಟಿ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತಾ.. ಅಲ್ಲಿನ ಅಧಿಕಾರಿಗೆ ಕೇಳಿದರೆ, ಅದು ನೋಂದಣಿ ಕಚೇರಿಯ ಸಮಸ್ಯೆ ಅಲ್ಲ ಅಂತಾರೆ. ಈಗ ಪೊಲೀಸ್ ಕಂಪ್ಲೇಂಟ್ ಆಗಿ ತನಿಖೆ ಆಗುತ್ತಿದೆ. ಅದರ ನಡುವೆ ಸರಕಾರಿ ಕಚೇರಿ ಮೇಲೆ ಗೂಬೆ ಕೂರಿಸೋದು ಯಾಕೆ ಎಂದು ಐವಾನ್ ಪ್ರಶ್ನೆ ಮಾಡಿದರು. ಇವರು ತಾಕತ್ತಿದ್ದರೆ ಗ್ಯಾರಂಟಿ ಯೋಜನೆ ಸ್ವೀಕರಿಸಬೇಡಿ ಎಂದು ಜನರಿಗೆ ಹೇಳಲಿ. ತಮ್ಮ ಬಿಜೆಪಿ ಕಾರ್ಯಕರ್ತರಿಗೆ ಹೇಳಲಿ. ಉಚಿತ ವಿದ್ಯುತ್, ಉಚಿತ ಬಸ್ ಯೋಜನೆ ಬೇಡ ಎನ್ನಲಿ. ರಾಜ್ಯದಲ್ಲಿ 13 ಲಕ್ಷ ಮಹಿಳೆಯರು ಹೆಚ್ಚುವರಿಯಾಗಿ ಈಗ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ, ಬೆಳ್ತಂಗಡಿ, ಪುತ್ತೂರಿನಿಂದ ಬಸ್ಸಿನಲ್ಲಿ ಬರುವವರಿಗೆ ಲಾಭ ಆಗಿದೆ, ಮಾಹಿತಿ ಪ್ರಕಾರ, ಕರಾವಳಿಯ ಎರಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಗ್ಯಾರಂಟಿ ಫಲಾನುಭವಿಗಳಿದ್ದಾರೆ. ಬಿಜೆಪಿಯವರು ಇದನ್ನು ಹೇಳಲ್ಲ ಯಾಕೆ ಎಂದರು.
ಬಿಜೆಪಿ ಕಾಲದಲ್ಲಿ ಆರು ಲಕ್ಷ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದ್ದಾರೆ. ಅಷ್ಟು ಕುಟುಂಬಗಳ ಅನ್ನಭಾಗ್ಯಕ್ಕೆ ಕತ್ತರಿ ಹಾಕಿದ್ದಾರೆ. ಈಗ ಪಡಿತರ ಕಾರ್ಡ್ ಬಗ್ಗೆ ಹೇಳುತ್ತಿದ್ದಾರೆ. ಬಡವರು ಹಸಿವು ಮುಕ್ತ ಆಗಬೇಕೆಂದು ಅನ್ನಭಾಗ್ಯ ಅಕ್ಕಿ ಹೆಚ್ಚು ಮಾಡಿದ್ದೇವೆ. ಇಂದಿರಾ ಕ್ಯಾಂಟೀನ್ ಹೆಚ್ಚಿಸಿದ್ದೇವೆ, ನಮ್ಮ ಐದು ತಿಂಗಳಲ್ಲಿ ಸಾಧನೆ ಜನರಿಗೆ ಮುಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯವರದ್ದು ಹಗರಣವಷ್ಟೇ ಜನರಿಗೆ ತಲುಪಿದೆ. ಅದು ಬಿಟ್ಟರೆ ಬೇರೆ ಯಾವುದನ್ನು ಕೇಳಿದ್ದೇವೆ. ಹಾಗಾಗಿ ಎಲ್ಲರನ್ನು ಜನರೇ ಮನೆಗೆ ಕಳಿಸಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ಮಾತನಾಡಬೇಕಾದ ಪ್ರತಿಪಕ್ಷ ನಾಯಕರೇ ಇಲ್ಲ. ನಳಿನ್ ಚಲಾವಣೆಯಲ್ಲಿ ಇಲ್ಲದ ನಾಣ್ಯ, ಬೊಮ್ಮಾಯಿ ಬಗ್ಗೆ ಇವರ ಪಕ್ಷದವರಿಗೇ ನಂಬಿಕೆ ಇಲ್ಲ, ಯತ್ನಾಳ್ ಕತ್ತಿ ಚೂರಿ ಅಂತ ಏನೇನೊ ಹೇಳುತ್ತಿದ್ದಾರೆ, ಐದು ತಿಂಗಳಾದರೂ ಪ್ರತಿಪಕ್ಷ ನಾಯಕರನ್ನೇ ನೇಮಿಸಲು ಆಗಿಲ್ಲ. ರಾಜ್ಯದ ಯೋಜನೆಗಳು ಐದು ತಿಂಗಳಲ್ಲಿ ಐದು ಕೋಟಿ ಜನರಿಗೆ ತಲುಪಿದೆ, ಬಡವರ ದುಡ್ಡನ್ನು ಬಡವರಿಗೆ ಕೊಟ್ಟಿದ್ದೇವೆ ಎಂದರು.
ಮೀನುಗಾರ ಮುಖಂಡ ಚೇತನ್ ಬೆಂಗ್ರೆ ಮಾತನಾಡಿ, ಬೋಟಿಗೆ ಸಿಗುತ್ತಿದ್ದ ಸಬ್ಸಿಡಿ ಸೀಮೆಎಣ್ಣೆಯನ್ನು ನಿಲ್ಲಿಸಿದ್ದು ಬಿಜೆಪಿ ಸರ್ಕಾರ. 60ರಷ್ಟು ಮಹಿಳೆಯರು, 40 ರಷ್ಟು ಪುರುಷರಿಗೆ ಸಬ್ಸಿಡಿ ಲಾಭ ಸಿಕ್ತಿತ್ತು. ಅದನ್ನು ಇವರೇ ನಿಲ್ಲಿಸಿದ್ದಲ್ಲವೇ.. ಈಗ ಸಬ್ಸಿಡಿಯನ್ನು ಮತ್ತೆ ಹೆಚ್ಚಿಸಿದ್ದಾರೆ. ಈಗ ಮೀನುಗಾರಿಕಾ ದಕ್ಕೆಯಲ್ಲಿ ಹಲವು ವರ್ಷಗಳ ಬಳಿಕ ಡ್ರೆಜ್ಜಿಂಗ್ ಆರಂಭ ಆಗಿದೆ. ಯಾಕೆ ವೇದವ್ಯಾಸರು ತಮ್ಮ ಕಾಲದಲ್ಲಿ ಮಾಡಿಸಿಲ್ಲ ಎಂದು ಪ್ರಶ್ನೆ ಮಾಡಿದರು. ಹಲವು ಮೀನುಗಾರ ಮುಖಂಡರು ಸುದ್ದಿಗೋಷ್ಟಿಯಲ್ಲಿದ್ದರು.
What has BJP done to the fishing filed in Dakshina Kannada and Udupi slams Ivan Dsouza in Mangalore.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 02:38 pm
Mangalore Correspondent
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm