ಬ್ರೇಕಿಂಗ್ ನ್ಯೂಸ್
06-10-23 09:22 pm Mangalore Correspondent ಕರಾವಳಿ
ಮಂಗಳೂರು, ಅ.6: ಶಿವಮೊಗ್ಗದಲ್ಲಿ ಪ್ರತಿ ಬಾರಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದಕ ಕೃತ್ಯ ನಡೆದರೂ ಅದರ ಬೇರು ಶಿವಮೊಗ್ಗವನ್ನು ತೋರಿಸುತ್ತದೆ. ರಾಜ್ಯದ ಮಲೆನಾಡು ಶಿವಮೊಗ್ಗವನ್ನು ಉಗ್ರರು ಕಾರಸ್ಥಾನ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಕ್ಷಣೆಗಾಗಿ ವಿಶ್ವ ಹಿಂದು ಪರಿಷತ್ತಿನಿಂದ ಉತ್ತರ ಪ್ರದೇಶ ಮಾದರಿಯಲ್ಲಿ ಮಹಾ ಪಂಚಾಯತ್ ಸಂಘಟಿಸಲು ಯೋಜನೆ ಹಾಕಿದ್ದೇವೆ ಎಂದು ವಿಹಿಂಪ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಶರಣ್ ಪಂಪ್ವೆಲ್, ಶಿವಮೊಗ್ಗದಲ್ಲಿ ಹರ್ಷ ಎಂಬ ಕಾರ್ಯಕರ್ತನ ಕೊಲೆಯ ಬಳಿಕ ಪದೇ ಪದೇ ಉಗ್ರವಾದಿ ಕೃತ್ಯ ಕಾಣಿಸಿಕೊಳ್ಳುತ್ತಿದೆ. ಮೊನ್ನೆಯ ಗಲಭೆ ಘಟನೆಯ ಹಿಂದೆಯೂ ಪೂರ್ವಯೋಜಿತ ಸಂಚು ಇರುವುದು ಕಂಡುಬರುತ್ತದೆ. ವಿಶೇಷ ಅಂದ್ರೆ, ಇಂಥಹ ದುಷ್ಕೃತ್ಯದಲ್ಲಿ ಮುಸ್ಲಿಂ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ. ಶಿವಮೊಗ್ಗ ಘಟನೆಯ ಸಂಚಿನಲ್ಲಿ ಮುಸ್ಲಿಂ ಮಹಿಳೆಯರ ಪಾತ್ರ ಇದೆಯೆಂಬ ವಿಚಾರ ಗಂಭೀರವಾದುದು. ಈದ್ ಮೆರವಣಿಗೆ ಸಾಗುತ್ತಿದ್ದಾಗಲೇ ಕಲ್ಲು ಕಲ್ಲು ಎಂದು ಸುಮ್ಮನೆ ಘೋಷಣೆ ಕೂಗಿದ್ದಾರೆ. ಇದರಿಂದ ಉದ್ರೇಕಗೊಂಡ ಯುವಕರು ಹಿಂದುಗಳ ಮನೆಗಳತ್ತ ಕಲ್ಲು ತೂರಿದ್ದಾರೆ. ಹಿಂದುಗಳ ಮನೆಗಳೇ ಅವರ ಟಾರ್ಗೆಟ್ ಆಗಿತ್ತು. ಈ ಘಟನೆಯನ್ನು ವಿಶೇಷ ತನಿಖಾ ತಂಡದಿಂದ ತನಿಖೆಗೆ ಒಳಪಡಿಸಬೇಕು.
ಗಲಭೆ ಕೃತ್ಯದಿಂದಾಗಿ ಶಿವಮೊಗ್ಗದಲ್ಲಿ ಹಿಂದುಗಳು ಭಯದಿಂದ ಓಡಾಡುವ ಸ್ಥಿತಿ ಬಂದಿದೆ. ಹಿಂದು ಮಹಿಳೆಯರು ಕಣ್ಣೀರು ಹಾಕುತ್ತಿರುವುದನ್ನು ನೋಡಿದ್ದೇವೆ. ಇದನ್ನೆಲ್ಲ ನೋಡಿ ವಿಶ್ವ ಹಿಂದು ಪರಿಷತ್ ಸುಮ್ಮನೆ ಕೂರಲ್ಲ. ಹಿಂದು ಸಮಾಜದ ಜೊತೆಗೆ ಸಂಘಟನೆ ಇದೆ ಎನ್ನುವ ಅಭಯದ ಮಾತು ಹೇಳಬೇಕಾಗಿದೆ. ಜೊತೆಗೆ, ಹಿಂದು ಸಮಾಜದ ಜೊತೆ ನಿಲ್ಲುವುದಕ್ಕಾಗಿ ಉತ್ತರ ಪ್ರದೇಶದಲ್ಲಿ ಇರುವಂತೆ ಮಹಾ ಪಂಚಾಯತ್ ಸಂಘಟನೆ ಮಾಡುತ್ತೇವೆ. ಇದರಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು, ಎಲ್ಲ ಸಮಾಜದ ಪ್ರಮುಖರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ಯಾರು ದೇಶದ್ರೋಹಿಗಳಿದ್ದಾರೆ ಅವರನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ. ಇದರ ರೂಪುರೇಷೆ, ಪರಿಣಾಮ ಹೇಗಿರುತ್ತೆ ಅನ್ನುವ ಬಗ್ಗೆ ಶೌರ್ಯ ಜಾಗರಣ ಯಾತ್ರೆ ಮುಗಿದ ಬೆನ್ನಲ್ಲೇ ತಿಳಿಸಲಾಗುವುದು ಎಂದು ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಮಹಿಷ ದಸರಾ ನಡೆಸುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಮೈಸೂರಿನಲ್ಲಿ ಮಹಿಷ ದಸರಾ ನಡೆಸುವುದನ್ನು ವಿರೋಧಿಸುತ್ತೇವೆ. ಹಿಂದಿನಿಂದ ಏನು ನಡೆದು ಬಂದಿತ್ತೋ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದರು. ಉಡುಪಿಯಲ್ಲಿ ಮಹಿಷ ದಸರಾ ನಡೆಸುವ ಕುರಿತ ಪ್ರಶ್ನೆಗೆ, ಕರಾವಳಿಯಲ್ಲಿ ಯಾವುದೇ ಕಡೆ ಮಹಿಷ ದಸರಾ ನಡೆಸುವುದಕ್ಕೆ ನಾವು ಬಿಡಲ್ಲ. ನಮ್ಮ ಕಾರ್ಯಕರ್ತರು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
Mangalore Sharan Pumpwell slams Shivamogga stone pelting incident.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am