ಬ್ರೇಕಿಂಗ್ ನ್ಯೂಸ್
09-09-23 09:53 pm Udupi Correspondent ಕರಾವಳಿ
ಕಾರ್ಕಳ, ಸೆ.9: ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಭ್ರಷ್ಟಾಚಾರ ಎಸಗಲಾಗಿದೆ, ಪರಶುರಾಮನ ಕಂಚಿನ ಪ್ರತಿಮೆ ಎನ್ನುವ ವಿಚಾರದಲ್ಲಿ ಜನರಲ್ಲಿ ಸಂಶಯ ಇದೆ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಆಗ್ರಹಿಸಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿಯ ಭರವಸೆ ಮೇರೆಗೆ ಹಿಂಪಡೆಯಲಾಗಿದೆ.
ತನಿಖೆಗೆ ಒತ್ತಾಯಿಸಿ ಸಮಾನ ಮನಸ್ಕರ ತಂಡವು ಆಗಸ್ಟ್ 26ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಜೊತೆಗೆ ಗುರುತಿಸಿಕೊಂಡಿದ್ದ ದಿವ್ಯಾ ನಾಯಕ್, ಚಿತ್ತರಂಜನ್ ಶೆಟ್ಟಿ ಸೇರಿದಂತೆ ಕೆಲವು ಸದಸ್ಯರು ಸೇರಿ ಥೀಮ್ ಪಾರ್ಕ್ ಬಳಿಯ ಭಜನಾ ಮಂದಿರದ ಬಳಿ ಧರಣಿ ಆರಂಭಿಸಿದ್ದರು.
ಎಂಟು ದಿನಗಳ ಸತ್ಯಾಗ್ರಹದಿಂದ ದಿವ್ಯಾ ನಾಯಕ್ ಮತ್ತು ಚಿತ್ತರಂಜನ್ ಶೆಟ್ಟಿ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಈ ನಡುವೆ, ತಹಸೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಬಂದು ಅಹವಾಲು ಕೇಳಿದ್ದಲ್ಲದೆ, ಉಪವಾಸ ಕೈಬಿಡುವಂತೆ ಮನವೊಲಿಸಿದ್ದರು. ಆದರೆ ತನಿಖೆಗೆ ಆದೇಶ ಆಗದೆ ಉಪವಾಸ ಕೈಬಿಡುವುದಿಲ್ಲ ಎಂದು ಧರಣಿ ನಿರತರು ಪಟ್ಟು ಹಿಡಿದಿದ್ದರು. ಶನಿವಾರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಜೊತೆಗಿದ್ದವರೇ ಧರಣಿ ಕೈಬಿಡಲು ಮನವೊಲಿಸಿದ್ದಾರೆ. ಅಲ್ಲದೆ, ಒಂದು ವಾರದಿಂದ ಉಪವಾಸ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಲೀ, ಜಿಲ್ಲಾಧಿಕಾರಿಯಾಗಲೀ ಸ್ಥಳಕ್ಕೆ ಭೇಟಿ ನೀಡಿಲ್ಲ. ತಹಸೀಲ್ದಾರ್ ಬಂದು ಜಿಲ್ಲಾಧಿಕಾರಿಗೆ ಫೋನ್ ಕರೆ ಮಾಡಿಸಿ, ಅವರಿಂದಲೇ ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಬಳಿಕ ಧರಣಿ ನಿರತರಿಗೆ ಎಳನೀರು ಕೊಟ್ಟು ಉಪವಾಸ ಅಂತ್ಯಗೊಳಿಸಿದ್ದಾರೆ.
ಪರಶುರಾಮನ ಪ್ರತಿಮೆಯ ಪರಿಶುದ್ಧತೆ ಬಗ್ಗೆ ವದಂತಿ ಹರಡುತ್ತಿದ್ದು, ಈ ಕುರಿತು ಜನರ ಮುಂದೆಯೇ ಪರಿಶೀಲನೆ ನಡೆಸಬೇಕು. ಇದಲ್ಲದೆ, ಪರಶುರಾಮ ಥೀಮ್ ಪಾರ್ಕನ್ನು ಸಾರ್ವಜನಿಕರ ಭೇಟಿಯಿಂದ ಮುಚ್ಚಲಾಗಿದೆ. ಅಲ್ಲಿನ ಭೂಮಿ ಕಂದಾಯ ಇಲಾಖೆಗೆ ಸೇರಿದ್ದಲ್ಲ. ಗೋಮಾಳ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳಲಾಗಿದೆ. ಅಲ್ಲದೆ, ಇಲ್ಲಿಗೆ ಸಂಪರ್ಕಿಸುವ ರಸ್ತೆ ಖಾಸಗಿಯದ್ದಾಗಿದ್ದು, ಸರಕಾರದ್ದಲ್ಲ ಎಂದು ಧರಣಿ ನಿರತರು ಆರೋಪಿಸಿದ್ದಾರೆ.
ಯಾವುದೇ ತನಿಖೆಗೂ ಸಿದ್ಧ – ಸುನಿಲ್
ಉಪವಾಸ, ಧರಣಿ ಬಗ್ಗೆ ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿರುವ ಶಾಸಕ ಸುನಿಲ್ ಕುಮಾರ್, ತಾನು ಯಾವುದೇ ರೀತಿಯ ತನಿಖೆಗೆ ಸಿದ್ಧನಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪರಶುರಾಮ ಥೀಮ್ ಪಾರ್ಕ್ ಮಾಡಲಾಗಿದೆ. ಉಡುಪಿಗೆ ಬರುವ ಪ್ರವಾಸಿಗರು ಕಾರ್ಕಳಕ್ಕೆ ಭೇಟಿ ಕೊಡಬೇಕೆಂದು ಯೋಜನೆ ಮಾಡಲಾಗಿತ್ತು. ಆದರೆ ಈಗ ಕೆಲವರು ಸೇರಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಇದ್ದಾರೆ. ಆದರೆ ಸರಕಾರ ಕೈಗೊಳ್ಳುವ ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
Parashurama Theme park copper statue controversy, protesters health turns bad, sunil kumar says ready for investigation.
21-08-25 06:02 pm
Bangalore Correspondent
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm