ಬ್ರೇಕಿಂಗ್ ನ್ಯೂಸ್
08-09-23 04:47 pm Mangalore Correspondent ಕರಾವಳಿ
ಮಂಗಳೂರು, ಸೆ.8: ಮಂಗಳೂರು ಯುನಿವರ್ಸಿಟಿಯಲ್ಲಿ ಗಣೇಶೋತ್ಸವ ಮಾಡೋದು ಅಲ್ಲಿನ ಹಾಸ್ಟೆಲ್ ಮಕ್ಕಳು ಮತ್ತು ಸಿಬಂದಿಗೆ ಬಿಟ್ಟದ್ದು. ಅದರ ಬಗ್ಗೆ ಹೊರಗಿನವರು ಮೂಗು ತೂರಿಸಿ ರಾಜಕೀಯ ಮಾಡುವ ಅಗತ್ಯವಿಲ್ಲ. ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸಿಬಂದಿಗೆ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ಕಳೆದ ವರ್ಷದ ಪದವಿ ಫಲಿತಾಂಶ ಇನ್ನೂ ಬಂದಿಲ್ಲ. ಇದರ ಬಗ್ಗೆ ಜನಪ್ರತಿನಿಧಿಗಳು ಎಂದಾದರೂ ಮಾತನಾಡಿದ್ದಾರೆಯೇ ಎಂದು ಮಂಗಳೂರು ವಿಧಾನಸಭೆ ಕ್ಷೇತ್ರದ ಶಾಸಕ, ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ಕರೆದಿದ್ದ ಸಂದರ್ಭದಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ದೊಡ್ಡ ಹಿಸ್ಟರಿ ಇದೆ, ಹಿಂದಿನಿಂದಲೂ ಎ ಗ್ರೇಡಲ್ಲಿದ್ದ ಯುನಿವರ್ಸಿಟಿ. ಆದರೆ ಈಗ ಎರಡು ವರ್ಷದಲ್ಲಿ ಬಿ ಗ್ರೇಡ್ ಆಗಿದೆ. ಯಾಕೆ ಶಿಕ್ಷಣದ ಗುಣಮಟ್ಟ ಕುಸಿತ ಆಯ್ತು ಅನ್ನೋದರ ಚಿಂತೆ ಇವರಿಗಿದೆಯೇ.. ಎಂದು ರಾಜಕೀಯ ವಿವಾದಕ್ಕೆ ಎಳೆದಿರುವ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.
ಗಣೇಶೋತ್ಸವ ಮಾಡುವುದಕ್ಕೆ ಉಪ ಕುಲಪತಿ ತಕರಾರು ಮಾಡಿಲ್ಲ. ಹಿಂದಿನಿಂದಲೂ ಹಾಸ್ಟೆಲ್ ಮಕ್ಕಳು ಗಣೇಶೋತ್ಸವ ಮಾಡ್ಕೊಂಡು ಬಂದಿದ್ದಾರೆ. ಆದರೆ ಅದಕ್ಕೆ ಅನುದಾನ ಬಳಸುವುದರಲ್ಲಿ ನಿಯಮಗಳಿವೆ. ಆಡಿಟ್ ವರದಿಯಲ್ಲಿ ಆಕ್ಷೇಪ ಬಂದಿರುವುದರಿಂದ ಹಿಂದಿನ ರೀತಿಯಲ್ಲಿ ಅನುದಾನ ಬಳಸಲು ಆಗಲ್ಲ ಎಂದಿದ್ದಾರೆ. ಆದರೆ ಯುನಿವರ್ಸಿಟಿಯಲ್ಲಿ ಬೇಕಾಬಿಟ್ಟಿ ನೇಮಕಾತಿ, ಅನುದಾನವನ್ನು ಬೇರೆಡೆಗೆ ಹಾಕಿದ್ದರಿಂದ ಅಲ್ಲೀಗ ದುಡ್ಡಿನ ಕೊರತೆ ಇದೆ. ನಿವೃತ್ತಿಯಾಗುವ ಶಿಕ್ಷಕರಿಗೆ ಪಿಂಚಣಿ ಕೊಡುವುದಕ್ಕೂ ಹಣ ಇಲ್ಲ. ಸಿಬಂದಿಗೆ ಸಂಬಳ ಆಗಿಲ್ಲ. ಜನಪ್ರತಿನಿಧಿಗಳು ಯಾವುದಕ್ಕೆ ಮಹತ್ವ ಕೊಡಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಸ್ಪಂದನೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮ ಇರಬೇಕು. ಆಡಳಿತವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಈಗ ಉಪ ಕುಲಪತಿಯವರು ನಿಮಯ ಏನಿದೆಯೋ ಅದನ್ನು ನೋಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಅಲ್ಲೇನೋ ಅನಗತ್ಯ ಬಿಲ್ಡಿಂಗ್ ಕಟ್ಟಿದ್ದು, ಈಗ ಬಂದಿರುವ ಅನುದಾನವನ್ನು ಅದರ ಕಂಟ್ರಾಕ್ಟರಿಗೆ ಕೊಟ್ಟಿದ್ದಾರೆ. ಆತ ಅರ್ಧಕ್ಕೆ ಬಿಟ್ಟು ಹೋಗಿದ್ದಾನೆ. ಇದರಿಂದ ಹಣದ ಕೊರತೆ ಆಗಿದೆ ಎಂದರು.
ಸಿಬಂದಿ ಕಡಿತಕ್ಕೆ ಹಣಕಾಸು ಇಲಾಖೆಯಿಂದ ಸೂಚನೆ ಬಂದಿದೆಯಂತೆ ಎಂದು ಕೇಳಿದ ಪ್ರಶ್ನೆಗೆ, ಯುನಿವರ್ಸಿಟಿಯಲ್ಲಿ ಬೇಕಾಬಿಟ್ಟಿ ನೇಮಕಾತಿ ಮಾಡಿಕೊಂಡಿದ್ದಾರೆ. ಹತ್ತನೇ ಕ್ಲಾಸ್ ಆದವನಿಗೆ 40 ಸಾವಿರ ಸಂಬಳ ಇದೆ, ಡಿಗ್ರಿಯಾದವರಿಗೆ 20 ಸಾವಿರ ಇದೆ. ಇದನ್ನೆಲ್ಲ ನೀವು ಕೇಳಿಕೊಂಡು ಸುದ್ದಿ ಮಾಡಬೇಕು ಎಂದು ಖಾದರ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ನಡೆಸುವ ವಿಚಾರದಲ್ಲಿ ವಿವಾದ ಉಂಟಾಗಿದ್ದು, ಸದ್ಯಕ್ಕೆ ವಿಸಿ ಜಯರಾಜ ಅಮೀನ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಾವು ಗಣೇಶೋತ್ಸವ ನಡೆಸುವುದಕ್ಕೆ ಅಡ್ಡಿ ಪಡಿಸಿಲ್ಲ. ಹಾಸ್ಟೆಲ್ ವ್ಯವಸ್ಥೆಯಲ್ಲಿ ಸಾಕು, ಸಭಾಂಗಣದಲ್ಲಿ ಮಾಡುವ ಅಗತ್ಯವಿಲ್ಲ ಎಂದಿದ್ದೆ. ಸಭಾಂಗಣವೇ ಬೇಕೆಂದಿದ್ದರೆ ಮಕ್ಕಳು ಮತ್ತು ಸಿಬಂದಿ ಸೇರಿಕೊಂಡು ಮಾಡಿಕೊಳ್ಳಲಿ. ಅನುದಾನ ಕೊಡಿಸಲು ಸಾಧ್ಯವಿಲ್ಲ. ಹಾಸ್ಟೆಲ್ ಫಂಡಿನಿಂದ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಇದರ ನಡುವೆ ಈ ಬಗ್ಗೆ ರಾಜ್ಯ ಸರಕಾರಕ್ಕೆ ವಿಸಿ ಜಯರಾಜ ಅಮೀನ್ ಪತ್ರ ಬರೆದಿದ್ದು ವಿವಾದಕ್ಕೆ ಕಾರಣವಾಗಿತ್ತು.
Speaker UT Khader Slams about Mangalore University in regards to ganeshotsav
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm