ಬ್ರೇಕಿಂಗ್ ನ್ಯೂಸ್
02-09-23 03:36 pm Mangalore Correspondent ಕರಾವಳಿ
ಉಳ್ಳಾಲ, ಸೆ.2: ಉಳ್ಳಾಲ ಪೊಲೀಸ್ ಠಾಣೆಯ ಹಿಂಬದಿಯ ಕ್ವಾಟ್ರಸ್ ಪರಿಸರದಲ್ಲಿ ಬೀದಿ ನಾಯಿಗಳು ಬಿಡಾರ ಹೂಡಿದ್ದು ಅದೀಗ ಪೊಲೀಸರಿಗೇ ತಲೆನೋವು ಸೃಷ್ಟಿಸಿದೆ. ಕಳೆದ ವಾರ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಮತ್ತು ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರ ಪತಿಗೆ ಹುಚ್ಚು ನಾಯಿ ಕಚ್ಚಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯ ಪಿಸಿಗಳಾದ ಸತೀಶ್, ನವೀನ್ ಮತ್ತು ಲೇಡಿ ಪಿಸಿ ಭಾಗ್ಯಶ್ರೀ ಅವರ ಪತಿ ರಂಗನಾಥ್ ಎಂಬವರಿಗೆ ಹುಚ್ಚು ನಾಯಿ ಕಡಿದಿದೆ. ಆಗಸ್ಟ್ 28 ರಂದು ಪೊಲೀಸ್ ವಸತಿ ಗೃಹದ ಆವರಣದಲ್ಲಿ ಘಟನೆ ನಡೆದಿದ್ದು ನಾಯಿ ವಿಚಿತ್ರವಾಗಿ ವರ್ತಿಸುತ್ತಿದ್ದರಿಂದ ಅನುಮಾನಗೊಂಡು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ನವರಿಗೆ ತಿಳಿಸಿದ್ದರು.

ಹುಚ್ಚು ನಾಯಿ ರೀತಿ ಇದೆ, ಇಲ್ಲಿಂದ ಕೊಂಡೊಯ್ಯುವಂತೆ ಪೊಲೀಸರು ಹೇಳಿದ್ದಕ್ಕೆ ವೀಡಿಯೋ ತೆಗೆದು ಕಳಿಸಲು ಅನಿಮಲ್ ಕೇರ್ ನವರು ತಿಳಿಸಿದ್ದರು. ಪೊಲೀಸರು ನಾಯಿಯ ವೀಡಿಯೋವನ್ನ ಕಳಿಸಿ ಕೊಟ್ಟಿದ್ದರೂ ವೀಡಿಯೋ ವೀಕ್ಷಿಸಿದ ಆನಿಮಲ್ ಕೇರ್ ನವರು ನಾಯಿಗೆ ಹುಚ್ಚು ಹಿಡಿದಿಲ್ಲವೆಂದು ವಾದಿಸಿದ್ದರಂತೆ. ಆದರೆ ನಾಯಿಯ ಉಪಟಳ ತಡೆಯಲು ಸಾಧ್ಯವಿಲ್ಲ. ಕೊಂಡು ಹೋಗಿ ಎಂದು ಪೊಲೀಸರು ಒತ್ತಾಯಿಸಿದ್ದಕ್ಕೆ ಕೊನೆಗೆ ಆನಿಮಲ್ ಕೇರ್ ನವರು ಪೊಲೀಸರನ್ನ ಕಡಿದಿದ್ದ ನಾಯಿಯನ್ನು ಕೊಂಡೊಯ್ದಿದ್ದರು. ಆದರೆ ಅದೇ ನಾಯಿ ಆನಿಮಲ್ ಕೇರ್ ಶುಶ್ರೂಷೆ ಕೇಂದ್ರದಲ್ಲಿ ಹಠಾತ್ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆ ನಾಯಿಗೆ ರೇಬೀಸ್ ರೋಗ ತಗಲಿರುವ ಶಂಕೆ ಪೊಲೀಸರಿಗಿದೆ.
ಹೀಗಾಗಿ ನಾಯಿ ಕಡಿತಕ್ಕೊಳಗಾದ ಪೊಲೀಸ್ ಸಿಬ್ಬಂದಿ ಹುಚ್ಚು ನಿರೋಧಕ ಲಸಿಕೆ ಪಡೆದು ಚಿಕಿತ್ಸೆ ಪಡೆದಿದ್ದಾರೆ. ವಸತಿಗೃಹದಲ್ಲಿರುವ ಇತರ ನಾಯಿಗಳಿಗೂ ರೋಗ ಹರಡಿರಬಹುದು ಎಂಬ ಶಂಕೆ ಉಂಟಾಗಿದ್ದು ಪೊಲೀಸರು ಎಲ್ಲ ನಾಯಿಗಳನ್ನ ಹಿಡಿದು ಒಯ್ಯುವಂತೆ ಆನಿಮಲ್ ಕೇರ್ ಸಂಸ್ಥೆಗೆ ಮನವಿ ಮಾಡಿದ್ದಾರೆ. ರೇಬೀಸ್ ರೋಗ ತಗಲಿದರೂ ಕೊನೆ ಕ್ಷಣದ ವರೆಗೂ ತಿಳಿದು ಬರುವುದಿಲ್ಲ. ಯಾವುದೇ ಪ್ರಾಣಿಗೆ ರೋಗ ತಗಲಿದರೆ ಅದಕ್ಕೆ ಔಷಧಿಯೂ ಇರಲ್ಲ. ನಾಯಿಗೆ ಹುಚ್ಚು ಹಿಡಿದ 2ರಿಂದ 4 ದಿನದಲ್ಲಿ ಸಾಯುತ್ತದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಶಂಕೆ ಇದ್ದವರು ಹುಚ್ಚು ನಿರೋಧಕ ಲಸಿಕೆ ಪಡೆಯುವುದಷ್ಟೇ ಏಕೈಕ ಔಷಧಿ. ಹುಚ್ಚು ಹಿಡಿದ ನಾಯಿಯ ಜೊಲ್ಲು, ಉಗುರು ಮನುಷ್ಯನಿಗೆ ತಾಗಿದರೂ ವೈರಸ್ ಹರಡುತ್ತದೆ. ಜೊತೆಗಿದ್ದ ನಾಯಿಗಳಿಗೆ ಕಚ್ಚಿದ್ದರೂ ಅವುಗಳಿಗೆ ಲಸಿಕೆ ಹಾಕಿಸದೇ ಇದ್ದರೆ ರೋಗ ಬರಬಹುದು.
Rabid dog bites four police staffs including SI of Ullal in Mangalore. The Police have informed Animal trust to take the dogs.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 07:34 pm
HK News Desk
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am