ಬ್ರೇಕಿಂಗ್ ನ್ಯೂಸ್
24-08-23 07:43 pm Mangalore Correspondent ಕರಾವಳಿ
ಉಳ್ಳಾಲ, ಆ.24: ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ನರ್ಮ್ ಬಸ್ಸಲ್ಲಿ ಪ್ರಯಾಣಿಸಿದ ಐವರು ಪ್ರೈಮರಿ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ಸನ್ನ ತಡೆದ ಸ್ಥಳೀಯರು ನಿರ್ವಾಹಕನನ್ನ ತರಾಟೆಗೆತ್ತಿಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ.
ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಸರಕಾರಿ ನರ್ಮ್ ಬಸ್ಸಿನ ನಿರ್ವಾಹಕ ಹುಸೇನ್ ಸಾಬ್ ಹಳ್ಳೂರ ಎಂಬಾತ ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ ಉಚಿತ ಪ್ರಯಾಣವಿಲ್ಲವೆಂದು ಹಣ ಕೇಳಿದ್ದು ಹಣ ನೀಡದ್ದಕ್ಕೆ ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿ ಅಮಾನವೀಯತೆ ಮರೆದಿದ್ದಾನೆ.
ಕುಂಪಲ ಸರಕಾರಿ ಶಾಲೆಯ ಎರಡನೇ ಮತ್ತು ಮೂರನೇ ತರಗತಿಯ ಐವರು ವಿದ್ಯಾರ್ಥಿನಿಯರು ಇಂದು ಶಾಲೆ ಮಗಿಸಿ ಸರಕಾರಿ ಬಸ್ಸು ಹತ್ತಿದ್ದಾರೆ. ಬಸ್ಸಿನ ಎಂದಿನ ನಿರ್ವಾಹಕ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಕೇಳುತ್ತಿರಲಿಲ್ಲವಂತೆ. ಹಾಗಾಗಿ ವಿದ್ಯಾರ್ಥಿನಿಯರು ಆಧಾರ್ ತಂದಿರಲಿಲ್ಲ. ಇಂದು ಖಾಯಂ ನಿರ್ವಾಹಕ ರಜೆ ಮಾಡಿದ್ದು ಹುಸೇನ್ ಸಾಬ್ ಬದಲಿ ಕರ್ತವ್ಯದಲ್ಲಿದ್ದ. ಹುಸೇನ್ ಎಳೆಯ ವಿದ್ಯಾರ್ಥಿಗಳೆಂದು ಕರುಣೆ ತೋರದೆ ಜೇಬಲ್ಲಿ ಹಣ ಇಲ್ಲದೆ ಕುಂಪಲದ ಬಗಂಬಿಲಕ್ಕೆ ತೆರಳಲಿದ್ದ ಐವರು ಮಕ್ಕಳನ್ನ ಮೂರುಕಟ್ಟೆ ಎಂಬಲ್ಲೇ ಕೆಳಗಿಳಿಸಿ ತೆರಳಿದ್ದಾನೆ.
ಈ ವಿದ್ಯಮಾನವನ್ನ ಬಸ್ಸಲ್ಲೇ ಇದ್ದ ಕುಂಪಲ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಗುಲಾಬಿ ಅವರು ಗಮನಿಸಿದ್ದಾರೆ.
ಸಂಜೆ ಸ್ಥಳೀಯರು ಕುಂಪಲ ಶಾಲೆಯ ಎದುರೇ ಬಸ್ಸನ್ನ ತಡೆದು ನಿಲ್ಲಿಸಿದ್ದು ನಿರ್ವಾಹಕನನ್ನ ತರಾಟೆಗೆತ್ತಿದ್ದಾರೆ. ಸ್ಥಳೀಯರಾದ ಯಶವಂತ್ ಅವರು ಕೆಎಸ್ ಆರ್ ಟಿಸಿ ಅಧಿಕಾರಿ ರಮ್ಯ ಅವರನ್ನ ಸಂಪರ್ಕಿಸಿ ಎಳೆಯ ಮಕ್ಕಳನ್ನ ಮಾವೀಯತೆ ತೋರಿಸದೆ ಬಸ್ಸಿನಿಂದ ಕೆಳಗಿಳಿಸಿದ ತಪ್ಪಿತಸ್ಥ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
No Aaadhar card conductor forces school student to get down from bus at Kumpala in Mangalore.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm