ಬ್ರೇಕಿಂಗ್ ನ್ಯೂಸ್
01-08-23 01:06 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಭಾರೀ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಮರು ತನಿಖೆ ಆಗ್ರಹದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಡ್ಡಗೋಡೆ ಮೇಲೆ ದೀಪ ಇಟ್ಟ ರೀತಿ ಉತ್ತರ ನೀಡಿದ್ದಾರೆ.
ಮರು ತನಿಖೆ ಮಾಡ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಸೌಜನ್ಯಾ ಕೇಸನ್ನು ಈಗಾಗಲೇ ಸಿಬಿಐಗೆ ಕೊಡಲಾಗಿತ್ತು. ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸೌಜನ್ಯ ಹೆತ್ತವರು ಮರು ತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನಾತ್ಮಕವಾಗಿ ಏನು ಮಾಡಬೇಕು ಅಂತ ನೋಡಬೇಕಾಗತ್ತೆ. ನ್ಯಾಯಾಲಯಕ್ಕೆ ಮತ್ತೆ ಅಪೀಲು ಹಾಕಬೇಕಾಗುತ್ತೆ. ತೀರ್ಪು ಏನಿದೆ ಅಂತ ನೋಡಿದ ಮೇಲೆ ನಿರ್ಧಾರ ಮಾಡ್ತೀವಿ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ ಖಚಿತ ಎಂದು ಹೇಳಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ದ ಅಥವ ಯಾರ ವಿರುದ್ಧವೂ ಅವಹೇಳನ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಟೀಕೆ ಮಾಡಿದರೂ ಕ್ರಮ ತಗೋತೀರಾ ಎಂದು ಕೇಳಿದ್ದಕ್ಕೆ, ಟೀಕೆ ಮಾಡಿದರೆ ಕ್ರಮ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಿದರೆ ಮಾತ್ರ ಕ್ರಮ. ಟೀಕೆ ಬೇರೆ, ಸುಳ್ಳು ಸುದ್ದಿ , ವೈಯಕ್ತಿಕ ತೇಜೋವಧೆ ಮಾಡೋದು ಬೇರೆ. ಕುಟುಂಬದ ಬಗ್ಗೆ ಅವಹೇಳನ ಮಾಡಿದ್ರೆ ನೀವು ಬಿಡ್ತೀರಾ ಎಂದು ಮರು ಪ್ರಶ್ನೆ ಹಾಕಿದರು.
ಕಸ್ತೂರಿರಂಗನ್ ವರದಿ ಜಾರಿ ಮಾಡ್ತೀರಾ ಎಂಬ ಪ್ರಶ್ನೆಗೆ, ಆ ಬಗ್ಗೆ ತೀರ್ಮಾನ ಮಾಡಬೇಕಿರೋದು ಕೇಂದ್ರ ಸರ್ಕಾರ. ವರದಿ ರದ್ದು ಮಾಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ತಗೋಬೇಕು. ಹಾಗಂತ ನಾವು ಪರಿಸರ ರಕ್ಷಣೆಗೆ ಹಿಂದೆ ಬೀಳಲ್ಲ ಎಂದರು.
ಬಿಟ್ ಕಾಯಿನ್ ತನಿಖೆ ಏನಾಯ್ತು ಎಂಬ ಪ್ರಶ್ನೆಗೆ, ಈಗಾಗಲೇ ಎಸ್ಐಟಿ ಮಾಡಿದ್ದೇವೆ, ಅವರು ತನಿಖೆ ಮಾಡಲಿದ್ದಾರೆ ಎಂದರು. ತಿಂಗಳು ಕಳೆದರೂ ಆರೋಪಿಗಳಿಗೆ ನೋಟೀಸ್ ಕೊಟ್ಟಿಲ್ಲ ಯಾಕೆಂಬ ಪ್ರಶ್ನೆಗೆ, ನೋಡೋಣ ಮಾತಾಡ್ತೀನಿ. ಅದು ತನಿಖಾ ತಂಡದ ಕೆಲಸ ಎಂದು ಮುಖ್ಯಮಂತ್ರಿ ಜಾರಿಕೊಂಡರು.
Soujanya case judgement copy yet to be read says CM Siddaramaiah in Mangalore.
22-08-25 12:29 pm
HK News Desk
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
22-08-25 01:11 pm
HK News Desk
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm