ಬ್ರೇಕಿಂಗ್ ನ್ಯೂಸ್
29-07-23 12:36 pm Mangalore Correspondent ಕರಾವಳಿ
ಉಳ್ಳಾಲ, ಜು.29: ಅಪರಿಮಿತ ವೇಗದಿಂದ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚತುಷ್ಪಥ ರಸ್ತೆಯ ಡಿವೈಡರ್ನಿಂದ ನೆಗೆದಿದ್ದು ಸ್ಕೂಟರ್ ಸವಾರನೋರ್ವ ಕೂದಲೆಲೆಯ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ರಾ.ಹೆ.66 ರ ತೊಕ್ಕೊಟ್ಟಿನ ಕಾಪಿಕಾಡಿನಲ್ಲಿ ನಡೆದಿದೆ.
ಅಪರಿಮಿತ ವೇಗದಲ್ಲಿ ತೊಕ್ಕೊಟ್ಟಿನಿಂದ ತಲಪಾಡಿಯ ಕಡೆ ಧಾವಿಸುತ್ತಿದ್ದ ಕಾರು ರಾ.ಹೆ.66 ರ ಓವರ್ ಬ್ರಿಡ್ಜ್-ಕಾಪಿಕಾಡು ನಡುವಿನ ಡಿವೈಡರ್ ನಿಂದ ಇನ್ನೊಂದು ಬದಿಯ ರಸ್ತೆಗೆ ನೆಗೆದಿದೆ. ಈ ವೇಳೆ ಕೊಲ್ಯದಿಂದ ತೊಕ್ಕೊಟ್ಟು ಕಡೆ ಸಾಗುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದಿದ್ದು ಚಾಲಕ ಪವಾಡಸದೃಶವಾಗಿ ಸಣ್ಣ,ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಡಿವೈಡರ್ ನೆಗೆದು ಬಲ ಭಾಗದ ರಸ್ತೆಯ ಬದಿಯ ಮೋರಿಯಲ್ಲಿ ಕಾರು ನಿಂತಿದ್ದು ಕಾರಿನ ಚಾಲಕ ಮತ್ತು ಸಹಸವಾರ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಮುಂದೆಯೇ ಎಸ್ಕೇಪ್ ಆಗಿದ್ದಾರೆ. ಬೆಳಗ್ಗಿನ ವೇಳೆ ಕಾಪಿಕಾಡು ಹೆದ್ದಾರಿಯಲ್ಲಿ ವಾಹನ ದಟ್ಟನೆ ಹೆಚ್ಚಿರುತ್ತದೆ, ಅದೃಷ್ಟವಶಾತ್ ಅಪಘಾತದಿಂದ ಯಾವುದೇ ದುರ್ಘಟನೆ ನಡೆದಿಲ್ಲ. ಕಾರಿನಲ್ಲಿದ್ದವರು ಅಮಲು ಪದಾರ್ಥ ಸೇವಿಸಿದ್ದರೆಂದು ಘಟನಾ ಸ್ಥಳದಲ್ಲಿ ಜಮಾವಣೆಗೊಂಡಿದ್ದ ಜನರು ಪೊಲೀಸರಲ್ಲಿ ದೂರಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Mangalore Thokottu Kapikad accident, two Wheeler escapes death in an inch after creta car rams scooter
22-08-25 12:29 pm
HK News Desk
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
22-08-25 02:00 pm
HK News Desk
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm