ಬ್ರೇಕಿಂಗ್ ನ್ಯೂಸ್
05-07-23 03:14 pm Mangalore Correspondent ಕರಾವಳಿ
ಉಳ್ಳಾಲ, ಜು.5: ಭಾರೀ ಮಳೆಗೆ ಸೋಮೇಶ್ವರದ ರೈಲ್ವೇ ನಿಲ್ದಾಣದ ಬಳಿ ವಾಸವಿದ್ದ ಬಡ ವಿಧವೆಯರಿಬ್ಬರ ಮನೆ ಕುಸಿದು ಬಿದ್ದಿದೆ. ಅಪಾಯದಲ್ಲಿದ್ದ ಮನೆಯ ದುರಸ್ತಿಗಾಗಿ ಕುಟಂಬವನ್ನ ಮೊದಲೇ ಸ್ಥಳಾಂತರಿಸಿದ್ದರಿಂದ ಪ್ರಾಣಾಪಾಯ ತಪ್ಪಿದೆ.
ಸೋಮೇಶ್ವರದ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಬದಿಯ ವಿಧವೆ ಶೋಭಾ ಅವರ ಮನೆ ನಿನ್ನೆ ರಾತ್ರಿ ಸುರಿದ ಗಾಳಿ, ಮಳೆಗೆ ಉರುಳಿ ಬಿದ್ದಿದೆ. ಶೋಭಾ ಅವರ ಪತಿ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆಬಳಿಕ ಶೋಭಾ ಅವರು ತನ್ನ ಸಹೋದರ ವಸಂತ್ ಮತ್ತು ಆತನ ಪತ್ನಿ ಹೇಮಾ ಜೊತೆ ವಾಸವಿದ್ದರು. ವರ್ಷದ ಹಿಂದೆ ಮನೆಗೆ ಆಧಾರ ಸ್ತಂಭವಾಗಿದ್ದ ಶೋಭಾರ ತಮ್ಮ ವಸಂತ್ ಅವರೂ ನೀರಿಗೆ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದರು.



ಶೋಭಾ ಅವರು ತನ್ನ ತಮ್ಮನ ಪತ್ನಿ ಹೇಮಾ ಮತ್ತು ಆಕೆಯ ಏಕೈಕ ಗಂಡು ಮಗು ಜೊತೆ ಹರಕಲು, ಮುರುಕಲು ಮನೆಯಲ್ಲಿ ವಾಸವಿದ್ದರು. ಈ ಬಡ ಕುಟುಂಬದ ಬಗ್ಗೆ ಮರುಕಪಟ್ಟ ಸ್ಥಳೀಯ ರಕ್ತೇಶ್ವರಿ ಬಳಗದವರು ಮನೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವ ಸಲುವಾಗಿ ಕುಟುಂಬವನ್ನ ಹತ್ತಿರದ ಮನೆಯೊಂದಕ್ಕೆ ಸ್ಥಳಾಂತರಿಸಿದ್ದರು. ಘಟನೆ ನಡೆದ ಸಂದರ್ಭ ಕುಟುಂಬ ಸದಸ್ಯರು ಮನೆಯಲ್ಲಿರದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಡ ವಿಧವೆಯರ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಲು ರಕ್ತೇಶ್ವರಿ ಬಳಗದ ಸದಸ್ಯರು ಮುಂದಾಗಿದ್ದು ಕುಟುಂಬಕ್ಕೆ ಸರಕಾರ ಮತ್ತು ದಾನಿಗಳ ಸಹಕಾರ ಯಾಚಿಸಿದ್ದಾರೆ.
Heavy Rains in Mangalore, House of Widow collapsed due to heavys winds at Someshwar in Ullal. Schools and colleges have been delcared holiday due to heavy rains in Mangalore.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm