ಬ್ರೇಕಿಂಗ್ ನ್ಯೂಸ್
01-07-23 04:40 pm Mangalore Correspondent ಕರಾವಳಿ
ಮಂಗಳೂರು, ಜುಲೈ 1: ಶಿವಮೊಗ್ಗ ಜಿಲ್ಲೆಯ ತುಂಗಾ ನದಿ ತೀರ ಮತ್ತು ಬಂಟ್ವಾಳದ ನೇತ್ರಾವತಿ ನದಿ ತೀರದ ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಫೋಟದ ಟ್ರಯಲ್ ಮಾಡಿದ್ದ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ದೆಹಲಿ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟನ್ನು ಸಲ್ಲಿಸಿದ್ದಾರೆ. ಬಂಧಿತ ಐವರು ಇಂಜಿನಿಯರಿಂಗ್ ಪದವೀಧರರಿಗೆ ರೋಬೋಟ್ ಮತ್ತು ಡ್ರೋಣ್ ಬಳಕೆಯ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ಪರಿಣತಿ ಸಾಧಿಸುವಂತೆ ಐಸಿಸ್ ಉಗ್ರರು ಟಾರ್ಗೆಟ್ ನೀಡಿದ್ದರು ಅನ್ನುವ ಅಂಶವನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕಳೆದ 2022ರ ಸೆಪ್ಟಂಬರ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆಗಳಲ್ಲಿ ಐಇಡಿ ಬ್ಲಾಸ್ಟ್ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್ಐಎ ಅಧಿಕಾರಿಗಳು ಸರದಿಯಂತೆ ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ 9 ಮಂದಿಯನ್ನು ಬಂಧಿಸಿದ್ದರು. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಎಸಗಿದ್ದ ಮೊಹಮ್ಮದ್ ಶಾರೀಕ್(25), ಮಾಜ್ ಮುನೀರ್ ಅಹ್ಮದ್(23), ಸೈಯದ್ ಯಾಸೀನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಝೈರ್ ಫರ್ಹಾನ್ ಬೇಗ್(22), ಮಾಝಿನ್ ಅಬ್ದುಲ್ ರಹಿಮಾನ್(22), ನದೀಮ್ ಅಹ್ಮದ್ ಕೆ.ಎ(22), ಜಬೀವುಲ್ಲಾ(32) ಮತ್ತು ನದೀಮ್ ಫೈಸಲ್ (27) ಬಂಧಿತ ವ್ಯಕ್ತಿಗಳಾಗಿದ್ದು, ಇವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪೈಕಿ ಮಾಝ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸೀನ್ ವಿರುದ್ಧ ಈ ಹಿಂದೆ ಮಾರ್ಚ್ ನಲ್ಲಿ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿಯೂ ಆರೋಪಗಳ ಉಲ್ಲೇಖ ಮಾಡಲಾಗಿತ್ತು.
ಬಂಧಿತರ ಪೈಕಿ ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರೀಶಾನ್ ತಾಜುದ್ದೀನ್ ಶೇಖ್, ಮಾಝಿನ್ ಅಬ್ದುಲ್ ರಹಿಮಾನ್, ನದೀಮ್ ಅಹ್ಮದ್ ಅವರು ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರು. ಮಾಜ್ ಮುನೀರ್ ಮತ್ತು ರೀಶಾನ್ ತಾಜುದ್ದೀನ್ ಮಂಗಳೂರಿನಲ್ಲೇ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು. ಕಲಿಯುತ್ತಿರುವಾಗಲೇ ಐಸಿಸ್ ಪ್ರೇರಣೆ ಪಡೆದು ದೇಶ ವಿರೋಧಿ ಚಟುವಟಿಕೆಯತ್ತ ಮನಸ್ಸು ಮಾಡಿದ್ದರು. ವಿಶೇಷ ಅಂದ್ರೆ, ಇವರಿಗೆ ವಿದೇಶದಲ್ಲಿ ಕುಳಿತ ಐಸಿಸ್ ಹ್ಯಾಂಡ್ಲರ್ ಗಳು ಅತ್ಯಾಧುನಿಕ ರೀತಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ರೋಬೋಟಿಕ್ ತಂತ್ರಜ್ಞಾನ, ಡ್ರೋಣ್ ಬಳಕೆ ಬಗ್ಗೆ ಪರಿಣತಿ ಸಾಧಿಸುವಂತೆ ಟಾರ್ಗೆಟ್ ನೀಡಿದ್ದರು. ಅದಕ್ಕಾಗಿ ಈ ಐವರಲ್ಲಿ ರೋಬೋಟಿಕ್ ಕೋರ್ಸ್ ಪಡೆಯುವಂತೆ ಐಸಿಸ್ ಉಗ್ರರು ಸಲಹೆ ನೀಡಿದ್ದರು ಅನ್ನುವ ಅಂಶವನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ.
ಮೊಹಮ್ಮದ್ ಶಾರೀಕ್, ಮಾಝ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸೀನ್ ಅವರು ವಿಧ್ವಂಸಕ ಕೃತ್ಯಗಳಿಗೆ ಸಂಚು ನಡೆಸುವ ಹೊಣೆ ಹೊತ್ತಿದ್ದರು. ಯಾವ ರೀತಿ ಮತ್ತು ಎಲ್ಲಿ ಕೃತ್ಯ ಎಸಗಬೇಕು ಎನ್ನುವ ಬಗ್ಗೆ ಐಸಿಸ್ ಉಗ್ರರ ಸೂಚನೆಯಂತೆ ಇವರು ನಡೆದುಕೊಳ್ಳುತ್ತಿದ್ದರು. ಇದಲ್ಲದೆ, ತಮ್ಮ ಸಹವರ್ತಿಗಳನ್ನು ದೇಶದ್ರೋಹಿ ಚಟುವಟಿಕೆಯತ್ತ ಪ್ರೇರಣೆ ನೀಡುವುದು, ಅವರನ್ನು ಐಸಿಸ್ ನೆಟ್ವರ್ಕ್ ಒಳಗೆ ಸೇರಿಸುವ ಕೆಲಸವನ್ನೂ ಮಾಡುತ್ತಿದ್ದರು. ಆರೋಪಿಗಳಿಗೆ ಐಸಿಸ್ ಹ್ಯಾಂಡ್ಲರ್ ಗಳೇ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡುತ್ತಿದ್ದರು. ಬಾಂಬ್ ಟ್ರಯಲ್ ಬಗ್ಗೆ ಮೊದಲು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸೆಪ್ಟಂಬರ್ 19ರಂದು ಪ್ರಕರಣ ದಾಖಲಾಗಿತ್ತು. ಆನಂತರ, ಎನ್ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡ ಬಳಿಕ ದೆಹಲಿ ಎನ್ಐಎ ಕಚೇರಿಯಲ್ಲಿ 2022ರ ನ.15ರಂದು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿದ್ದರು.
The National Investigation Agency (NIA) on Friday filed its first supplementary chargesheet against nine people in the ISIS terror conspiracy case initially registered in Karnataka’s Shivamogga district. The NIA said the accused had been tasked by their ISIS handler based abroad to pursue robotics courses and pick up skills to carry out terrorist attacks in the future in furtherance of the Islamic State agenda for India.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
22-08-25 09:57 pm
HK News Desk
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm