ಬ್ರೇಕಿಂಗ್ ನ್ಯೂಸ್
22-06-23 06:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 22: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕಿದೆ. ಆದರೆ ಮುಸ್ಲಿಂ ತುಷ್ಟೀಕರಣ ರಾಜಕೀಯದಿಂದಾಗಿ ಕಾಂಗ್ರೆಸ್ ಈ ಕಾನೂನು ಜಾರಿಗೆ ಬಿಡುತ್ತಿಲ್ಲ. ಏಕರೂಪದ ಕಾನೂನು ಬೇಡಾಂದ್ರೆ, ಇಲ್ಲಿನ ಕ್ರಿಮಿನಲ್ ಕೋಡ್ ಯಾಕಿರಬೇಕು. ಮುಸ್ಲಿಮರು ತಮ್ಮ ಷರಿಯಾ ಕಾನೂನನ್ನೇ ಇಲ್ಲಿ ಅನುಸರಿಸಲಿ. ಕಳ್ಳತನ ಮಾಡಿದರೆ ಕೈಕಟ್ ಮಾಡುವುದು, ಅತ್ಯಾಚಾರ ಮಾಡಿದರೆ ಹತ್ಯೆಯಂಥ ಷರಿಯಾ ಕಾನೂನು ಜಾರಿಗೆ ಬಂದರೆ, ಇವರಲ್ಲಿ ಎಷ್ಟು ಮಂದಿ ಉಳಿಯಬಹುದು ನೋಡೋಣ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸಿಟಿ ರವಿ ದಿಕ್ಸೂಚಿ ಭಾಷಣ ಮಾಡಿದರು. ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಟ್ಟಿದ್ದ ಕಾರ್ಯಕರ್ತರನ್ನು ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸಲು ಪ್ರೇರಣೆಯಾಗುವ ರೀತಿ ಭಾಷಣ ಮಾಡಿದರು. ರಾಜ್ಯದಲ್ಲಿ ಅಧಿಕಾರ ಕಳಕೊಳ್ಳಲು ನಮ್ಮ ಸೋಲು ಕಾರಣ. ಅದಕ್ಕಾಗಿ ನಿಮ್ಮೆಲ್ಲರಲ್ಲೂ ನಾನು ಕ್ಷಮೆ ಯಾಚಿಸುತ್ತೇನೆ. ನಾವು ಸೋತಿದ್ದೇವೆ, ಚುನಾವಣೆಯಲ್ಲಿ ಮಾತ್ರ. ಸಿದ್ಧಾಂತದಲ್ಲಿ ಸೋತಿಲ್ಲ. ಸಿದ್ಧಾಂತಕ್ಕೆ ಗೆಲುವು ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕಿಂತ ಹೆಚ್ಚು ಮತ ಸಿಕ್ಕಿದೆ. ಸೋಲಾಗಿದ್ದಕ್ಕೆ ಬೇರೆ ಕಾರಣ ಇದೆ ಎಂದರು.

ಕಾಂಗ್ರೆಸ್ ಮಾಯಾ ಯುದ್ಧದಿಂದ ಸೋಲು
ಕಾಂಗ್ರೆಸ್ ಮಾಯಾ ಯುದ್ಧದಲ್ಲಿ ತಾತ್ಕಾಲಿಕ ಗೆಲುವು ಪಡೆದಿದೆ. ಮಾಯಾ ಯುದ್ಧದಿಂದಾಗಿ ಅಧಿಕಾರ ಕಳಕೊಂಡಿದ್ದೇವೆ. 2024ರಲ್ಲಿ ಮೈಮರೆತರೆ ನಾವು ದೇಶವನ್ನೇ ಕಳೆದುಕೊಳ್ಳುತ್ತೇವೆ ಎಂದು ಹೇಳಿದ ಸಿಟಿ ರವಿ, ಇದಕ್ಕಾಗಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಮಾಯಾ ಯುದ್ಧವನ್ನ ಜನರಿಗೆ ಅರ್ಥ ಮಾಡಿಸಬೇಕಿದೆ. ನೀತಿ ಮತ್ತು ನಿಯತ್ತು ಇಲ್ಲದ ನೇತೃತ್ವ ಹಾನಿಕಾರಕ. ಕಾಂಗ್ರೆಸಿಗೆ ನೀತಿ ಮತ್ತು ನಿಯತ್ತು ಎರಡೂ ಇಲ್ಲ. ತುಕ್ಡೇ ಗ್ಯಾಂಗ್ ಕೈಯಲ್ಲಿ ಕಾಂಗ್ರೆಸ್ ಹಿಡಿತ ಇದೆ. ಹಾಗಾಗಿ, ಜನರು ಕಾಂಗ್ರೆಸ್ ನೀತಿಯನ್ನು ನಂಬಬಾರದು ಎಂದರು. ದೇಶ ಒಂದು ಎನ್ನುವ ಕಾರಣಕ್ಕೆ ಕಾಶ್ಮೀರಕ್ಕಿದ್ದ ಪ್ರತ್ಯೇಕ ಕಾನೂನನ್ನು ರದ್ದುಪಡಿಸಿದ್ದೇವೆ. ದೇಶದಲ್ಲಿ ಎಲ್ಲ ಜನರಿಗೂ ಒಂದೇ ಕಾನೂನು ಎಂಬ ಕಾರಣಕ್ಕೆ ಏಕರೂಪದ ಕಾನೂನು ತರುತ್ತೇವೆ. ಅದಕ್ಕಾಗಿ ದೇಶದ ಜನತೆಯಲ್ಲಿ ಸಲಹೆಯನ್ನು ಕೇಳಿದ್ದೇವೆ ಎಂದರು.

ಸರ್ವರ್ ಡೌನ್ ಬೌದ್ಧಿಕ ದಿವಾಳಿತನ
ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಒಂದು ತಿಂಗಳ ಕಾಂಗ್ರೆಸ್ ಸರಕಾರದ ಆಡಳಿತ ನೋಡಿದರೆ, ಯಾಕಾದ್ರೂ ಈ ಸರ್ಕಾರ ಬಂತೋ ಅನ್ನುವ ಮಾತು ಜನರ ಬಾಯಲ್ಲಿ ಕೇಳುವಂತಾಗಿದೆ. ಸರ್ಕಾರ ತಮ್ಮ ವೈಫಲ್ಯ ಮುಚ್ಚಿಟ್ಟು ಗೊಂದಲ ಸೃಷ್ಟಿಸುವ ಕೆಲಸದಲ್ಲಿದೆ. ಸರ್ವರ್ ಡೌನ್ ಆದ್ರೆ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಅನ್ನುವಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಒಬ್ಬ ಮಂತ್ರಿಯ ಬೌದ್ಧಿಕ ದಿವಾಳಿತನ ಇದು. ಇಷ್ಟೊಂದು ಅರ್ಜಿ ಸಲ್ಲಿಕೆಯಾಗುವಾಗ ಸರ್ವರ್ ಡೌನ್ ಆಗತ್ತೆ ಎಂಬ ಕಾಮನ್ ಸೆನ್ಸ್ ಇಲ್ವಾ ಎಂದು ಪ್ರಶ್ನೆ ಮಾಡಿದರು.
ಎಡಪಂಥೀಯರನ್ನು ತೃಪ್ತಿಪಡಿಸಲು ಬಿಜೆಪಿ ಕಾಲದಲ್ಲಿ ತಂದಿದ್ದ ಪಠ್ಯವನ್ನು ತೆಗೆದು ಹಾಕಲು ಮುಂದಾಗಿದ್ದಾರೆ. ಕಿತ್ತು ಹಾಕಿರುವ ಪಠ್ಯದಲ್ಲಿ ಯಾವ ದೋಷ ಇದೆಯೆಂದು ಸಿದ್ದರಾಮಯ್ಯ ಹೇಳಬೇಕು. ಚಕ್ರವರ್ತಿ ಸೂಲಿಬೆಲೆ ತಮಗೆ ಆಗೋಲ್ಲ ಎಂದು ಅವರು ಬರೆದಿದ್ದ ತಾಯಿ ಭಾರತಿಯ ಅಮರ ಪುತ್ರರು ಅನ್ನುವ ಪಠ್ಯ ತೆಗೆದಿದ್ದಾರೆ. ರಾಜ್ ಗುರು, ಭಗತ್ ಸಿಂಗ್, ಸುಖದೇವ್ ಅವರ ಬಗ್ಗೆ ಬರೆದಿದ್ದ ಆ ಪಠ್ಯದಲ್ಲಿ ಯಾವ ತಪ್ಪು ಇದೆ. ಲೇಖಕರು ತಮಗೆ ಅಪಥ್ಯ ಅನ್ನುವ ಕಾರಣಕ್ಕೆ ಪಠ್ಯವನ್ನು ತೆಗೆದಿರೋದು ಅಕ್ಷಮ್ಯ ಎಂದು ಕಾಗೇರಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮತ್ತಿತರರಿದ್ದರು.
Sharia law should be implemented, 2024 elections is very important for BJP says CT Ravi in Mangalore. Sharia law will cut of their hands if they commit crime and cut of their privates if they commit rape he added.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm