ಬ್ರೇಕಿಂಗ್ ನ್ಯೂಸ್
17-06-23 09:15 pm Mangalore Correspondent ಕರಾವಳಿ
ಬೆಳ್ತಂಗಡಿ, ಜೂನ್ 17: ಸೌಜನ್ಯಾ ಕೊಲೆ ಪ್ರಕರಣದಲ್ಲಿ ನಡೆದ ಸಿಐಡಿ, ಸಿಬಿಐ ತನಿಖೆಗಳೆಲ್ಲ ಬೋಗಸ್. ಅಣ್ಣಪ್ಪ ಇಲ್ಲವಾದರೆ ಮಂಜುನಾಥ ಮಾತ್ರ ನಮಗೆ ನ್ಯಾಯ ಕೊಡಿಸಬೇಕು. ಆರೋಪಿ ಸಂತೋಷ್ ರಾವ್ ಅಲ್ಲ ಎನ್ನುವುದನ್ನು ನಾವು ಹತ್ತು ವರ್ಷಗಳಿಂದಲೂ ಹೇಳ್ಕಂಡು ಬಂದಿದ್ದೇವೆ, ಕೋರ್ಟ್ ಹೇಳುವುದರಲ್ಲಿ ಹೊಸತೇನಿಲ್ಲ. ಆದರೆ ಸೌಜನ್ಯಾಳನ್ನು ಅಷ್ಟೊಂದು ಕ್ರೂರವಾಗಿ ಕೊಂದವರು ಯಾರೆಂದು ಬೇಕಲ್ಲ ಎಂದು ಸೌಜನ್ಯಾ ಪರವಾಗಿ ಗಟ್ಟಿ ದನಿಯಲ್ಲಿ ಹೋರಾಟ ನಡೆಸಿದ್ದ ಹಿಂದು ಸಂಘಟನೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರೋ ಹೇಳಿದ್ರು ಅಂತ ಪೊಲೀಸರು ಆರೋಪಿಯನ್ನ ಜೈಲಿಗೆ ಹಾಕಿದ್ದರು. 10 ವರ್ಷ ಅವನು ಜೈಲಲ್ಲಿದ್ದ, ಅವನ ಯವ್ವನ ಎಲ್ಲ ಜೈಲಲ್ಲಿ ಕೊಳೆಯುವ ಸ್ಥಿತಿಯಾಯ್ತು. ಅವನಿಗೆ ಇನ್ನು ಯಾರು ದಿಕ್ಕು ಅಂತ ಕೇಳೋದು. ಧರ್ಮಸ್ಥಳದವರು ಇಂತವ್ರು ಅಂತ ಹೇಳಿದ್ರೆ ಅವರು ಆರೋಪಿ, ಆದರೆ ಹುಡುಗಿಯ ಮನೆಯವರು ಹೇಳಿದ್ರೆ ಅವರು ಆರೋಪಿಗಳಲ್ಲ, ಈ ದೇಶದ ಸಂವಿಧಾನದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮತ್ರ ದುಡ್ಡಿಲ್ಲ ನಮ್ಮತ್ರ ರಾಜಕೀಯ ಶಕ್ತಿಗಳಿಲ್ಲ. ಆದರೆ ನಮ್ಮ ಮನಸ್ಸಲ್ಲಿ ಆ ಬಡಪಾಯಿ ಹುಡುಗ ಹೊರಗಡೆ ಬರಲಿ ಅಂತ ಇತ್ತು. ಈಗ ಕೋರ್ಟ್ ಬಿಡುಗಡೆ ಮಾಡಿದೆ ಎಂದು ತಿಮರೋಡಿ ಹೇಳಿದ್ದಾರೆ.

ಸಂತೋಷ್ ರಾವ್ ಕೃತ್ಯ ನಡೆಸಿಲ್ಲ ಎಂದು ನಾವು ಮೊದಲೇ ಹೇಳಿದ್ದೇವೆ. ನಾನು ಕೈಯಾರೆ 3.5 ಲಕ್ಷ ರೂ. ಖರ್ಚು ಮಾಡಿ ಆತನಿಗೆ ಜಾಮೀನು ಸಿಗುವಂತೆ ಮಾಡಿದ್ದೆ. ಯಾಕೆಂದರೆ ಆತ ತಪ್ಪು ಮಾಡಿಲ್ಲವೆಂದು ನನಗೆ ತಿಳಿದಿತ್ತು. ಹಾಗಾದರೆ ತಪ್ಪು ಮಾಡಿದವರು ಯಾರು? ಸಂತೋಷ್ ಆರೋಪಿಯಲ್ಲ ಎಂದರೆ ನಮಗೆ ಸಂತೋಷದ ಸುದ್ದಿ. ಹಾಗಾದರೆ ಆರೋಪಿಗಳು ಯಾರೆಂದು ತಿಳಿಯಬೇಕಲ್ಲಾ ಎಂದು ಪ್ರಶ್ನಿಸಿದರು.

ಸೌಜನ್ಯಾ ಕೊಲೆ ಎಲ್ಲೋ ಕಾಡಿನ ಮಧ್ಯೆ ನಡೆದಿಲ್ಲ. ಬೇರೆಲ್ಲೋ ರೇಪ್ & ಮರ್ಡರ್ ಮಾಡಿ ತಂದು ಹಾಕಿದ್ದಾರೆ. ಕಾಣೆಯಾದ ದಿನವೇ ಸ್ಥಳೀಯರು, ಆಕೆಯ ಕುಟುಂಬದವರು ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಆಗ ಸಿಗದೇ ಇದ್ದ ಶವ ಮರುದಿನ ಅದೇ ಸ್ಥಳದಲ್ಲಿ ಸಿಕ್ಕಿದೆ. ಹಾಗಾದ್ರೆ ಎಲ್ಲಿಂದ ತಂದು ಹಾಕಿದ್ದರು.
17 ವರ್ಷದ ಬಾಲಕಿಯ ಗುಪ್ತಾಂಗಕ್ಕೆ ಮಣ್ಣು ತುರುಕಿಸಲಾಗಿತ್ತು. ದೇಹದ ಇಡೀ ಕಚ್ಚಿ ಗಾಯಗೊಳಿಸಲಾಗಿತ್ತು. ಇದನ್ನು ಯಾಕೆ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಉಲ್ಲೇಖಿಸಿಲ್ಲ ಎಂದು ತಿಮರೋಡಿ ಪ್ರಶ್ನಿಸಿದ್ದಾರೆ. ಆಕೆಯ ಒಳ ಉಡುಪು ಆ ಪ್ರದೇಶದಲ್ಲಿ ಸಿಗಲಿಲ್ಲ. ಮನೆಯವರು ಇಂಥವರೇ ಕೊಲೆ ಮಾಡಿದ್ದಾರೆ ಎಂದರೆ ಅವರನ್ನು ನಮ್ಮ ಅಧಿಕಾರಿಗಳು ತನಿಖೆ ನಡೆಸಲಿಲ್ಲ. ಇದರ ಇಂದಿನ ಪ್ರಭಾವಿ ಯಾರು ಅಂತ ನಮಗೆ ಗೊತ್ತಿದೆ. ಪ್ರತಿ ಪೊಲೀಸರಿಗೂ ಗೊತ್ತಿದೆ. ಆದರೆ ಯಾಕೆ ಅವರನ್ನು ಬಂಧಿಸಿಲ್ಲ. ಅವರು ಅಷ್ಟು ಪ್ರಭಾವಿಗಳಾ.. ಸೌಜನ್ಯಾ ಕೊಂದವರು ಅಷ್ಟೊಂದು ಪ್ರಭಾವಿಗಳು ಅಂತ ಆಯಿತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ, ಸಚಿವರು, ಸಂಸದರ ಮೇಲೆ ರೇಪ್ ಕೇಸ್ ಆಗುತ್ತದೆ. 17 ವರ್ಷದ ಬಾಲಕಿ ಮೇಲೆ ಈ ರೀತಿ ಪೈಶಾಚಿಕವಾಗಿ ಕೊಂದು ಹಾಕಿದ ಬಗ್ಗೆ ಯಾಕೆ ಪೋಕ್ಸೋ ಕೇಸು ಆಗಿಲ್ಲ. ಗೆದ್ದವರ ಬಾಲ ಹಿಡಿದ ಕಾರಣವೇ ಎಂದವರು ಪ್ರಶ್ನಿಸಿದ್ದಾರೆ.
Mahesh Shetty Timarodi slams CBI court for acquits Santhosh Rao after 10 years even after he was Innocent. If case can be regsitered against PM or chief Minister then why not on those real culprits he added.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm