ಬ್ರೇಕಿಂಗ್ ನ್ಯೂಸ್
13-06-23 10:29 pm Mangalore Correspondent ಕರಾವಳಿ
ಮಂಗಳೂರು, ಜೂನ್ 13: ಮಹಾನಗರ ಪಾಲಿಕೆಯ ಪರವಾನಗಿ ಇಲ್ಲದೆ ನಗರ ಭಾಗದಲ್ಲಿ ಯಾವುದೇ ಜಾಹೀರಾತು ಹೋರ್ಡಿಂಗ್ಸ್ ಹಾಕುವಂತಿಲ್ಲ. ಈ ಬಗ್ಗೆ ಆಗೊಮ್ಮೆ ಈಗೊಮ್ಮೆ ಅಧಿಕಾರಿಗಳು ಆದೇಶದ ಮೂಲಕ ಸಾರ್ವಜನಿಕರ ಗಮನ ಸೆಳೆದರೂ, ಇವೆಲ್ಲ ರಾಜಕಾರಣಿಗಳ ಕಿವಿಗಂತೂ ಬೀಳೋದಿಲ್ಲ. ರಾಜ್ಯದಲ್ಲೀಗ ಸರಕಾರ ಬದಲಾಗಿದ್ದು, ಹಿಂದೆ ಬಿಜೆಪಿ ನಾಯಕರ ಹೋರ್ಡಿಂಗ್ಸ್ ಬೀಳುತ್ತಿದ್ದ ಜಾಗದಲ್ಲಿ ಕಾಂಗ್ರೆಸಿಗರ ಶುಭಾಶಯದ ಹೋರ್ಡಿಂಗ್ಸ್ ಬಂದಿದೆ.
ನಗರದ ಕದ್ರಿ ಸರ್ಕಿಟ್ ಹೌಸ್ ಮುಂಭಾಗದ ರಸ್ತೆ ಬದಿಯಲ್ಲಿ ಪ್ರತಿ ಬಾರಿಯೂ ಅಕ್ರಮವಾಗಿಯೇ ಹೋರ್ಡಿಂಗ್ಸ್ ಹಾಕಲಾಗ್ತಿದೆ. ಇದಕ್ಕೆ ಯಾವುದೇ ಲಗಾಮು ಇಲ್ಲ ಅನ್ನುವಂತಿದೆ. ಮೊನ್ನೆ ಜೂನ್ 11ರಂದು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ದಿನೇಶ್ ಗುಂಡೂರಾವ್ ಅವರನ್ನು ಸ್ವಾಗತಿಸಿ ಕಾಂಗ್ರೆಸ್ ನಾಯಕರು ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದ್ದರು. ಸರ್ಕಿಟ್ ಹೌಸ್ ಮುಂಭಾಗದಲ್ಲಿ ಮಾಜಿ ಎಂಎಲ್ಸಿ ಐವಾನ್ ಡಿಸೋಜ ಹಾಕಿರುವ ಫ್ಲೆಕ್ಸ್ ನಲ್ಲಿ ಸಚಿವರ ಹೆಸರನ್ನು ತಪ್ಪಾಗಿ ಮುದ್ರಿಸಿ ದಿನೇಶ್ ‘’ಗಂಡೂರಾವ್’’ ಎಂದು ಮಾಡಲಾಗಿದೆ.

ಶಕ್ತಿ ಯೋಜನೆಗೆ ಚಾಲನೆ ನೀಡುವುದಕ್ಕಾಗಿ ಮಂಗಳೂರಿಗೆ ಬಂದಿದ್ದ ದಿನೇಶ್ ಗುಂಡೂರಾವ್, ಆವತ್ತೇ ಹಿಂದೆ ತೆರಳಿದ್ದರು. ಸಚಿವರು ಬಂದು ಹೋಗಿ ಎರಡು ದಿನ ಕಳೆದರೂ, ಕದ್ರಿಯಲ್ಲಿ ಹಾಕಿರುವ ಅಕ್ರಮ ಫ್ಲೆಕ್ಸ್ ಹೋರ್ಡಿಂಗ್ಸ್ ತೆರವಾಗಿಲ್ಲ. ಗಂಡೂರಾವ್ ಹೆಸರಿನ ಹೋರ್ಡಿಂಗ್ ಜನರ ನಡುವೆ ಅಣಕದಂತೆ ಕಾಣುತ್ತಿದೆ. ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಅವರಿಗೆ ಶುಭಕೋರಿ ಹಾಕಿದ್ದ ಹೋರ್ಡಿಂಗ್ಸ್ ತಿಂಗಳ ಕಾಲ ಅಲ್ಲಿದ್ದು ಕೊನೆಗೆ ಗಾಳಿಯ ಹೊಡೆತಕ್ಕೆ ಒಂದು ಕಡೆಗೆ ವಾಲಿ ನಿಂತರೂ ಅದನ್ನು ತೆರವು ಮಾಡಿರಲಿಲ್ಲ.


ಅತಿಥಿ – ಗಣ್ಯರು ಬಂದು ಹೋಗುವ ಇದೇ ಸರ್ಕಿಟ್ ಹೌಸ್ ಮುಂಭಾಗದಲ್ಲಿ ಕದ್ರಿ ಪೊಲೀಸ್ ಠಾಣೆಯಿದ್ದು ಪೊಲೀಸರೂ ಇಡೀ ದಿನ ಇಲ್ಲೇ ಠಿಕಾಣಿ ಇರುತ್ತಾರೆ. ಅಕ್ರಮ ಹೋರ್ಡಿಂಗ್ಸ್ ಮಹಾನಗರ ಪಾಲಿಕೆಯ ವ್ಯಾಪ್ತಿಯದ್ದು, ಅದೆಲ್ಲ ತಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಪೊಲೀಸರು ಅದರ ಉಸಾಬರಿಗೆ ಹೋಗಲ್ಲ. ವಿಪರ್ಯಾಸ ಅಂದ್ರೆ, ಇದೇ ಕದ್ರಿ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ. ಕಾನೂನು ಸುವ್ಯವಸ್ಥೆ, ಬೇಕು – ಬೇಡಗಳ ಬಗ್ಗೆ ಕಿವಿಯಾಗುವ ಪೊಲೀಸ್ ಠಾಣೆಯ ಮುಂದುಗಡೆಯೇ ಈ ರೀತಿ ಕಳೆದ ಮೂರು ದಿನಗಳಿಂದ ಹೋರ್ಡಿಂಗ್ಸ್ ರಾರಾಜಿಸುತ್ತಿದ್ದರೂ, ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಪೊಲೀಸರಿದ್ದಾರೆ.
ಈ ರೀತಿ ಅಣಕಿಸುವ ಹೋರ್ಡಿಂಗ್ಸ್ ಸಾಮಾನ್ಯವಾಗಿ ಖಾಸಗಿ ಜಾಗದಲ್ಲಿ ಅಥವಾ ಮದುವೆಯಾಗುವ ಹುಡುಗನ ಮನೆಯ ಮುಂದುಗಡೆ ಹಾಕುವುದನ್ನು ಕೆಲವು ಕಡೆ ನೋಡಿದ್ದೇವೆ. ಇಲ್ಲಿ ಸಾವಿರಾರು ಜನ ಹಾದು ಹೋಗುವ, ಅದರಲ್ಲೂ ಜನರು ನ್ಯಾಯ ಕೇಳಲು ಬರುವ ಪೊಲೀಸ್ ಠಾಣೆಯ ಮುಂದುಗಡೆಯೇ ಹಾಕಲಾಗಿದೆ. ಪಾಲಿಕೆಯ ಅಧಿಕಾರಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದರೆ, ಪೊಲೀಸರೂ ಹಾಗೆಯೇ ವರ್ತಿಸಿದರೆ ಜನರಿಗೆ ಭಯ ಮೂಡುವುದು ಎಲ್ಲಿ ಮತ್ತೆ..? ಇದೇ ರೀತಿಯಾದರೆ, ಸರಕಾರಿ ಕಟ್ಟಡದ ಮೇಲ್ಗಡೆಯೂ ಹೋರ್ಡಿಂಗ್ಸ್ ಬಂದರೂ ಬರಬಹುದು.
Illegal hordings in Mangalore city, Ivan Dsouza banner error with Name of Dinesh Gundu Rao, First night flex in front of Kadri Police station goes viral. The banner post by Ivan Dsouza welcoming Dinesh Gundu Rao has got kannada spelling mistake. Also a first night flex has gone viral in front of Kadri Police station.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
13-11-25 05:13 pm
HK Staffer
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
13-11-25 05:01 pm
HK Staffer
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm