ಬ್ರೇಕಿಂಗ್ ನ್ಯೂಸ್
10-06-23 11:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 10: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳನ್ನು ಹಿಂಸಾತ್ಮಕವಾಗಿ ನಡೆಸಿಕೊಳ್ಳಲಾಗುತ್ತಿದೆ. ಪ್ರಾಣಿಗಳಿಗೆ ರಕ್ಷಣೆ ಇಲ್ಲದಾಗಿದೆ. ಪ್ರಾಣಿಗಳ ಹೆಸರಲ್ಲಿ ಜೈವಿಕ ಉದ್ಯಾನದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಆರೋಪಿಸಿದೆ. ಜೈವಿಕ ಉದ್ಯಾನದ ಪ್ರಾಣಿಗಳಿಗೆ ಹಿಂಸೆಯಿಂದ ಮುಕ್ತಿ ನೀಡಬೇಕು. ಇಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿ ಕರೆದು ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, 2023ರ ಮೇ 30ರಂದು ನಾವು ಪಿಲಿಕುಳ ಉದ್ಯಾನಕ್ಕೆ ಭೇಟಿ ನೀಡಿದ್ದೆವು. ಅಲ್ಲಿನ ಪ್ರಾಣಿಗಳ ವೇದನೆ ಕಂಡು ಮನಸ್ಸಿಗೆ ಬೇಸರವಾಯಿತು. ಉದ್ಯಾನದಲ್ಲಿ ಪ್ರಾಣಿಗಳು ಬದುಕುವುದಕ್ಕಾಗಿ ಕಷ್ಟ ಪಡುತ್ತಿವೆ. ಅವುಗಳಿಗೆ ಸರಿಯಾಗಿ ಊಟ ಕೊಡುತ್ತಿಲ್ಲ. ಕೊಳೆತ ಹಣ್ಣು-ತರಕಾರಿಗಳನ್ನು ನೀಡುತ್ತಿದ್ದಾರೆ. ಕೃಷ್ಣ ಮೃಗಗಳಿಗೆ ಹೂಕೋಸಿನ ಎಲೆಗಳನ್ನು ತಿನ್ನಲು ಕೊಡುತ್ತಾರೆ. ವಿಪರೀತ ಕೀಟನಾಶಕ ಬಳಸಿರುವ ಈ ಎಲೆಗಳನ್ನು ತಿನ್ನುವ ಪ್ರಾಣಿಗಳ ಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದರು.
ಕೋತಿಗಳು ಹಾಗೂ ಸಿಂಗಳೀಕಗಳಿಗೆ ಸಹಜ ಅರಣ್ಯದ ವ್ಯವಸ್ಥೆ ಮಾಡದೆ, ಅಕೇಶಿಯಾ ಮರದಲ್ಲಿ ಆಸರೆ ಪಡೆಯುವ ದುಃಸ್ಥಿತಿ ಇದೆ. ಅಲ್ಲಿ ಹಣ್ಣಿನ ಮರಗಳೇ ಇಲ್ಲ. ಕರಡಿಯನ್ನು ನಾಲ್ಕು ಗಾಳಿ ಮರಗಳ ನಡುವೆ ಬಿಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಅಲ್ಲಿ 100ಕ್ಕೂ ಹೆಚ್ಚು ಕಾಡುಕೋಳಿಗಳಿದ್ದವು. ನಾವು ಈಚೆಗೆ ಭೇಟಿ ನೀಡಿದಾಗ ನಾಲ್ಕು ಕಾಡುಕೋಳಿಗಳು ಮಾತ್ರ ಇದ್ದವು. ಉಳಿದವು ಎಲ್ಲಿ ಹೋದವು. ಅದನ್ನು ಯಾರು ಹೊತ್ತೊಯ್ದಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.
ಪ್ರಾಣಿ- ಪಕ್ಷಿಗಳ ಸ್ಥಿತಿಯಂತೂ ಕೇಳುವುದೇ ಬೇಡ ಎನ್ನುವಂತಿದೆ. ಒಂದು ಗೂಡಿನ ಒಳಗೆ 50- 60 ಪಕ್ಷಿಗಳನ್ನು ಹಾಕಿದ್ದಾರೆ. ನಾವು ಭೇಟಿ ನೀಡಿದಾಗ ಹುಲಿಗಳಿರುವ ಸ್ಥಳದ ತೊಟ್ಟಿಯಲ್ಲಿ ಹನಿ ನೀರೂ ಇರಲಿಲ್ಲ. ಲೆಕ್ಕ ಪ್ರಕಾರ, ಜಿಂಕೆ ಮತ್ತು ಕಡವೆಗಳನ್ನು ಒಟ್ಟಿಗೆ ಬಿಡಬಾರದು. ಅವುಗಳ ವರ್ಣಸಂಕರವಾಗುವ ಅಪಾಯ ಇರುತ್ತದೆ. ಇತ್ತೀಚೆಗೆ ಅಲ್ಲಿನ ಕೃಷ್ಣಮೃಗ ಕರು ಹಾಕಿತ್ತು. ಇದಾದ ಕೆಲವೇ ತಾಸುಗಳಲ್ಲಿ ಆ ಕರು ಸತ್ತಿತ್ತು. ಬೇರೆ ಪ್ರಾಣಿಗಳೊಂದಿಗೆ ಗರ್ಭಿಣಿ ಕೃಷ್ಣಮೃಗವನ್ನು ಬಿಟ್ಟಿದ್ದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ಇತ್ತೀಚೆಗೆ ಪಿಲಿಕುಳದಲ್ಲಿ ಹೆಣ್ಣು ಹುಲಿಯೊಂದು ಸತ್ತಿದ್ದು, ಇದಕ್ಕೆ ಅಲ್ಲಿನ ಆಡಳಿತ ವ್ಯವಸ್ಥೆಯ ಲೋಪವೇ ಕಾರಣ. ಅಕ್ರಮ ಬೆಳಕಿಗೆ ಬಾರದೆಂದು ಅಲ್ಲಿ ಉದ್ದೇಶ ಪೂರ್ವಕವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕಾರ್ಯ ನಿರ್ವಹಿಸದಂತೆ ಮಾಡಲಾಗಿದೆ ಎಂದೂ ದೂರಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಪ್ರಕಾರ ಉದ್ಯಾನದಲ್ಲಿ ಪಶ್ಚಿಮ ಘಟ್ಟದ ಸಹಜ ಅರಣ್ಯ, ಸಸ್ಯಗಳನ್ನು ಬೆಳೆಸಬೇಕು ಎಂದಿದೆ. ಆದರೆ, ಪಿಲಿಕುಳದಲ್ಲಿ ಶೇ. 90ಕ್ಕೂ ಹೆಚ್ಚು ಅಕೇಶಿಯಾ ಮರಗಳೇ ತುಂಬಿಕೊಂಡಿವೆ. ಎಂಆರ್‌ಪಿಎಲ್ ನೆರವಿನಿಂದ ಅಭಿವೃದ್ಧಿ ಪಡಿಸಿರುವ ಪ್ರದೇಶದಲ್ಲೂ ಅಕೇಶಿಯಾ ಮರಗಳಷ್ಟೇ ಇವೆ. ಇಲ್ಲಿ ಯಾಕೆ ಸಹಜ ಅರಣ್ಯದ ಸಸ್ಯಗಳನ್ನು ಬೆಳೆಸಿಲ್ಲ ಎಂದು ಎನ್‌ಇಸಿಎಫ್ ಸದಸ್ಯ ಬೆನೆಡಿಕ್ಟ್ ಫರ್ನಾಂಡಿಸ್ ಪ್ರಶ್ನಿಸಿದರು.
Mangalore Pilikula zoo is torturing animals alleges social activist Shashidhar Shetty, urges for enquiry.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
13-11-25 05:13 pm
HK Staffer
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
13-11-25 05:01 pm
HK Staffer
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm