ಬ್ರೇಕಿಂಗ್ ನ್ಯೂಸ್
30-05-23 12:00 pm Mangalore Correspondent ಕರಾವಳಿ
ಮಂಗಳೂರು, ಮೇ 30: ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ಭಾನುವಾರ ವಿದೇಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್ (32) ಎಂದು ಗುರುತಿಸಲಾಗಿದೆ. ಇವರು ಕೊಲ್ಲಿ ರಾಷ್ಟ್ರದ ಓಮನ್ ದೇಶದ ಮಸ್ಕತ್ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡ ಮಸ್ಕತ್ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು.
ಆತ್ಮಹತ್ಯೆ ಮಾಡಿಕೊಂಡ ಸಂದೇಶ್ ಸಂಬಂಧಿಯಾದ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬ ಯುವಕ ಕೂಡ ಮಸ್ಕತ್ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದಾರೆ. ಬೇಗ ಕರ್ತವ್ಯ ಮುಗಿಸಿ ಬಂದ ಸಂದೇಶ್ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
8 ತಿಂಗಳ ಹಿಂದಷ್ಟೇ ಉದ್ಯೋಗಕ್ಕೆ ತೆರಳಿದ್ದರು
ಸಂತೋಷ್ ಏಳು ವರ್ಷಗಳ ಹಿಂದೆ ಮಸ್ಕತ್ಗೆ ಉದ್ಯೋಗಕ್ಕೆ ತೆರಳಿದ್ದರು. ಮೃತ ಸಂದೇಶ ಕಳೆದ ಕೆಲವು ವರ್ಷಗಳಿಂದ ಚೆನ್ನೈನ ಹೋಟೇಲ್ನಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ವಿಸಿಟಿಂಗ್ ವೀಸಾದಲ್ಲಿ ಮಸ್ಕತ್ಗೆ ತೆರಳಿದ್ದ ಸಂದೇಶ್ ಬಳಿಕ ಅಲ್ಲಿನ ಕೆಲಸದ ವೀಸಾ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಕಿರಿಕಿಯಿಲ್ಲದ ಉದ್ಯೋಗ ಇದ್ದು, ಯಾವುದೇ ಸಮಸ್ಯೆಗಳು ಇರಲಿಲ್ಲ ಎಲ್ಲವೂ ಸುಸೂತ್ರವಾಗಿಯೇ ಇತ್ತು, ಅಣ್ಣ ತಮ್ಮ ಸಂತೋಷವಾಗಿಯೇ ಇದ್ದರು , ಕೇವಲ ಒಂದು ಲೈನ್ ಸ್ವಾರಿ ಅಣ್ಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬ ಮೂಲ ತಿಳಿಸಿವೆ.
A youth of Koyila village of the taluk, who was employed overseas, killed himself by hanging on Sunday May 28. The deceased is identified as Sandesh (32), an unmarried youth, son of the late Monappa Poojary, a resident of Sunnadi in Koyila village.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 10:27 am
HK News Staffer
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm