ಬ್ರೇಕಿಂಗ್ ನ್ಯೂಸ್
18-05-23 08:18 pm Mangalore Correspondent ಕರಾವಳಿ
ಪುತ್ತೂರು, ಮೇ 18: ಪುತ್ತೂರಿನಲ್ಲಿ ತಮ್ಮದೇ ಕಾರ್ಯಕರ್ತರಿಗೆ ಪೊಲೀಸರ ಮೂಲಕ ಥಳಿಸಿದ ಕೃತ್ಯದಿಂದ ಆಗಿರುವ ಡ್ಯಾಮೇಜನ್ನು ಕಂಟ್ರೋಲ್ ಮಾಡಲು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಕಾರ್ಯಕರ್ತರಿಗೆ ಅಮಾನುಷ ಹಲ್ಲೆ ನಡೆಸಿರುವುದು ಬಿಜೆಪಿ ಒಳಗಡೆ ತಳಮಳ ಸೃಷ್ಟಿಸಿರುವಾಗಲೇ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆ ಘಟನೆಯನ್ನು ಕಾಂಗ್ರೆಸಿಗರ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ.
ಘಟನೆ ಹಿಂದೆ ಕಾಂಗ್ರೆಸಿಗರಿದ್ದಾರೆ. ನೂರಕ್ಕೆ ನೂರು ಕಾಂಗ್ರೆಸ್ ಕಿತಾಪತಿ. ಸರಕಾರ ಬದಲಾಗುತ್ತಿದ್ದಂತೆ ಪೊಲೀಸರು ಈ ರೀತಿ ವರ್ತಿಸಬಾರದಿತ್ತು. ಕಾರ್ಯಕರ್ತರು ಅಂದ ಮೇಲೆ ಕೆಲವು ವ್ಯತ್ಯಾಸಗಳಾಗೋದು ಸಹಜ. ಹಾಗೆಂದು ದನಕ್ಕೆ ಬಡಿದ ರೀತಿ ಬಡಿಯುವುದು, ಅಮಾನುಷವಾಗಿ ನಡೆದುಕೊಂಡಿರುವುದನ್ನು ಖಂಡಿಸುತ್ತೇನೆ. ಇದರ ಹಿಂದೆ ಯಾರಿದ್ದಾರೆ, ಯಾರು ಪೊಲೀಸರಿಗೆ ಒತ್ತಡ ಹಾಕಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು. ಹಲ್ಲೆ ನಡೆಸಿರುವ ಡಿವೈಎಸ್ಪಿ ಅಧಿಕಾರಿಯನ್ನೂ ಅಮಾನತು ಮಾಡಬೇಕು. ನಾವು ಇದನ್ನು ಹಾಗೇ ಬಿಡುವುದಿಲ್ಲ ಎಂದು ಪ್ರಭಾಕರ ಭಟ್ ಹೇಳಿದ್ದಾರೆ.

ಯಾವ ಮುಖ ಇಟ್ಟುಕೊಂಡು ಬರುತ್ತಾರೆ-ಸೂಲಿಬೆಲೆ
ಇದೇ ವೇಳೆ, ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಮೋದಿ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆ, ಒಂದು ರಾಷ್ಟ್ರೀಯ ಪಕ್ಷದ ನಾಯಕರಾಗಿ ಬ್ಯಾನರ್ ಹಾಕಿದ ಮಾತ್ರಕ್ಕೆ ತಮ್ಮ ಕಾರ್ಯಕರ್ತರಿಗೆ ಪೊಲೀಸರ ಮೂಲಕ ಹೊಡೆಸಿದ್ದು ಅಕ್ಷಮ್ಯ. ತಾವೇ ಹೊಡೆಸಿ ಈಗ ಆಸ್ಪತ್ರೆಗೆ ಭೇಟಿ ಕೊಡಬೇಕು ಅಂದರೆ, ಯಾವ ಮುಖ ಇಟ್ಟುಕೊಂಡು ಬರುತ್ತಾರೆ. ಈ ರೀತಿ ಆಗಬಾರದಿತ್ತು. ಯಾರದೇ ಒತ್ತಡ ಇದ್ದರೂ, ಪೊಲೀಸರು ಹೀಗೆ ವರ್ತಿಸಬಾರದಿತ್ತು. ಹಿಂದುತ್ವ ನಂಬಿಕೊಂಡ ಯುವಕರ ಮೇಲೆ ಇಂಥ ಹಲ್ಲೆ ನಡೆದಿರುವುದನ್ನು ಕಟುವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಹೇಳಿದ್ದ ನಾಯಕರು
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಸದಾನಂದ ಗೌಡರ ಬ್ಯಾನರ್ ಹಾಕಿ, ಚಪ್ಪಲಿ ಹಾರ ಹಾಕಿರುವುದನ್ನು ವಿರೋಧಿಸಿ ಬಿಜೆಪಿ ನಾಯಕರೇ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಲ್ಲದೆ, ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪ್ರತಿಭಟನೆ ಮಾಡಿ, ಹಿಂದುತ್ವ ಕಾರ್ಯಕರ್ತರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದರು. ಇದು ಅರುಣ್ ಪುತ್ತಿಲ ಪರ ಇರುವವರು ಮಾಡಿದ ಕೃತ್ಯ ಎಂದುಕೊಂಡು ಬಿಜೆಪಿ ನಾಯಕರು ಪ್ರತಿಭಟನೆಯ ನಾಟಕ ಮಾಡಿದ್ದರು. ಆದರೆ ಇದೀಗ ಪೊಲೀಸರು ಹಲ್ಲೆ ನಡೆಸಿದ್ದು ಉಲ್ಟಾ ಆಗಿದ್ದು ಬಿಜೆಪಿ ನಾಯಕರಿಗೇ ತಿರುಗುಬಾಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷನೇ ಪೊಲೀಸರಿಗೆ ಹೇಳಿ ಥಳಿಸುವಂತೆ ಮಾಡಿದ್ದಿರಬೇಕೆಂದು ಕಾರ್ಯಕರ್ತರು ಆಕ್ರೋಶ ತೋರುತ್ತಿದ್ದಾರೆ.
Puttur Police Autrocity over BJP Banner of footwear on Nalin Kateel and Sadananda Gowda, Kalladka Bhat, Chakravarti Sulibele visit victims at hospital. Kalladka bhat says congress coming to power is the reason for such Autrocity by Police. Speaking to media person's Chakravarti Sulibele said BJP shouldn't have done this to thier own Hindu Karyakartas he slammed.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm