ಬ್ರೇಕಿಂಗ್ ನ್ಯೂಸ್
18-05-23 01:35 pm Mangalore Correspondent ಕರಾವಳಿ
ಪುತ್ತೂರು, ಮೇ 18: ಪೊಲೀಸ್ ದೌರ್ಜನ್ಯ ಘಟನೆ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಗ್ರಾಮಾಂತರ ಠಾಣೆ ಎಸ್ಐ ಶ್ರೀನಾಥ ರೆಡ್ಡಿ ಮತ್ತು ಸಿಬಂದಿ ಹರ್ಷಿತ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಹಲ್ಲೆಗೀಡಾದ ಅವಿನಾಶ್ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಡಿವೈಎಸ್ಪಿ ವೀರಯ್ಯ ಹಿರೇಮಠ, ಗ್ರಾಮಾಂತರ ಠಾಣೆ ಎಸ್ಐ ಶ್ರೀನಾಥ ರೆಡ್ಡಿ ಮತ್ತು ಸಿಬಂದಿ ಹರ್ಷಿತ್ ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನೆ ಬಗ್ಗೆ ಡಿಎಸ್ಪಿ ಧರ್ಮಪ್ಪ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಎಸ್ಪಿ ವಿಕ್ರಮ್ ಅಮಟೆ ಅವರಿಗೆ ವರದಿ ನೀಡಿದ್ದಾರೆ. ಇದರಂತೆ, ಇಬ್ಬರನ್ನು ತಕ್ಷಣದಿಂದಲೇ ಎಸ್ಪಿ ವಿಕ್ರಂ ಅಮಟೆ ಅಮಾನತುಗೊಳಿಸಿದ್ದು, ಡಿವೈಎಸ್ಪಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಪೊಲೀಸ್ ದೌರ್ಜನ್ಯ ಘಟನೆ ಸಂಬಂಧಿಸಿ ತನಿಖೆ ನಡೆಸಲು ಬಂಟ್ವಾಳ ಡಿಎಸ್ಪಿ ಧರ್ಮಪ್ಪ ಅವರಿಗೆ ವಹಿಸಲಾಗಿತ್ತು. ಇಲಾಖಾ ತನಿಖೆಯನ್ನು ಧರ್ಮಪ್ಪ ನಡೆಸುತ್ತಿದ್ದು, ಇದರ ನಡುವಲ್ಲೇ ಪ್ರಾಥಮಿಕ ವರದಿಯನ್ನು ಎಸ್ಪಿಗೆ ಸಲ್ಲಿಕೆ ಮಾಡಲಾಗಿದೆ. ಎಸ್ಪಿ ವಿಕ್ರಂ ಅಮಟೆ ಪುತ್ತೂರಿನಲ್ಲೇ ಬೀಡು ಬಿಟ್ಟಿದ್ದು, ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುವುದರಿಂದ ತುರ್ತಾಗಿ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ದೌರ್ಜನ್ಯ ಹಿನ್ನೆಲೆಯಲ್ಲಿ ಅವಿನಾಶ್ ಮತ್ತು ಗುರುಪ್ರಸಾದ್ ಎಂಬವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಮೋದಿ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಮಾನಸಿಕ ಧೈರ್ಯ ತುಂಬಿದ್ದಾರೆ.
Puttur Police Atrocity over Bjp Banner row, Sampya Police Sub Inspector Srinath Reddy, Constable suspended, Action against DYSP demanded. The puttur police had arrested seven Hindu Karyakartas and brutally assaulted them in the police station for posting banner with footwear on Nalin Kateel and Sadananada Gowda
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 02:48 pm
Mangalore Correspondent
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
24-08-25 04:48 pm
Mangalore Correspondent
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm
MLA Veerendra Puppy, ED Raid: ಬೆಟ್ಟಿಂಗ್ ದಂಧೆ...
24-08-25 12:41 pm
ಗೋಳ್ತಮಜಲು ; 2500 ಕೇಜಿ ಪಡಿತರ ಅಕ್ಕಿ ಅಕ್ರಮ ದಾಸ್ತ...
23-08-25 10:49 pm
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm