ಬ್ರೇಕಿಂಗ್ ನ್ಯೂಸ್
06-05-23 05:14 pm Mangalore Correspondent ಕರಾವಳಿ
ಪುತ್ತೂರು, ಮೇ 6: ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಸ್ಪರ್ಧೆಯಿಂದಾಗಿ ಕುತೂಹಲ ಕೆರಳಿಸಿರುವ ಪುತ್ತೂರಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಬ್ಬರಿಸಿದ್ದಾರೆ. ಹೆಲಿಪ್ಯಾಡ್ ನಿಂದ ನೇರವಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಯೋಗಿ, ದೇವರಿಗೆ ಕೈಮುಗಿದು ರೋಡ್ ಶೋ ಆರಂಭಿಸಿದ್ದಾರೆ.
ಮಹಾಲಿಂಗೇಶ್ವರ ಸನ್ನಿಧಿಯಿಂದ ಕಿಲ್ಲೆ ಮೈದಾನದ ವರೆಗೆ ಒಂದು ಕಿಮೀ ಉದ್ದಕ್ಕೆ ರೋಡ್ ಶೋ ನಡೆಸಿದ್ದು ಬಿಗಿ ಕಾವಲಿನ ನಡುವೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು. ಕೊನೆಗೆ ರೋಡ್ ಶೋ ವಾಹನದಲ್ಲಿಯೇ ಯೋಗಿ ಭಾಷಣ ಮಾಡಿದ್ದಾರೆ. ಪುತ್ತೂರಿನ ಮುತ್ತಿನಂಥ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು ಅಂತ ಕನ್ನಡದಲ್ಲಿ ಭಾಷಣ ಆರಂಭಿಸಿದಾಗ, ಜನರ ಕಡೆಯಿಂದ ಕರತಾಡನ ಕೇಳಿಬಂತು.



ಪುತ್ತೂರು ಮಹಾಲಿಂಗೇಶ್ವರನ ಪುಣ್ಯ ಭೂಮಿಗೆ ಆಗಮಿಸಿ ಸಂತಸವಾಗಿದೆ. ಈ ಪಾವನ ಭೂಮಿಗೆ ನಮಿಸಿ ನಿಮಗೆಲ್ಲರಿಗೂ ಹೃದಯಾಂತರಾಳದ ನಮನ ಸಲ್ಲಿಸುತ್ತೇನೆ. ನಾನು ಶ್ರೀರಾಮನ ಪಾವನ ಭೂಮಿ ಅಯೋಧ್ಯೆಯಿಂದ ಶ್ರೀ ಹನುಮಾನ್ ಹುಟ್ಟಿದ ವೀರಭೂಮಿ ಕರ್ನಾಟಕಕ್ಕೆ ಬಂದಿದ್ದೇನೆ. ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಬಹಳ ಪ್ರಾಚೀನವಾದದ್ದು.

ಪ್ರಭು ಶ್ರೀರಾಮನ ವನವಾಸದ ಹೊತ್ತಲ್ಲಿ ಭಜರಂಗಿ ಬಲಿ ಹನುಮ ಸಿಕ್ಕಿದ್ದು ಈ ಪಾವನ ಭೂಮಿಯಲ್ಲಿ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಭಜರಂಗ ಬಲಿ ಮೆಟ್ಟಿದ ನೆಲದಲ್ಲಿ ಹನುಮನ ಭವ್ಯ ಮಂದಿರ ನಿರ್ಮಿಸುತ್ತಿದೆ. ಆದರೆ ಇದೇ ಹೊತ್ತಲ್ಲಿ ಕಾಂಗ್ರೆಸ್ ಹಿಂದೂಗಳ ನಂಬಿಕೆ ಆಸ್ಮಿತೆಯನ್ನು ಅಪಮಾನಿಸುತ್ತಿದೆ. ಇಂಥ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾ, ಬೇಡವೇ ಎಂಬ ಬಗ್ಗೆ ಜನರು ನಿರ್ಧರಿಸಬೇಕಾಗಿದೆ.
ಕಾಂಗ್ರೆಸ್ ಈ ಹಿಂದೆ ಶ್ರೀರಾಮನೇ ಮಿಥ್ಯ ಅಂತಿದೆ, ಕಾಲ್ಪನಿಕ ಕತೆ ವಾಸ್ತವ ಅಲ್ಲ ಎಂದು ಕೋರ್ಟಿಗೆ ಅಫಿಡವಿಟ್ ಕೊಟ್ಟಿತ್ತು. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭಜರಂಗದಳ ಸಂಘಟನೆಯನ್ನು ನಿಷೇಧ ಮಾಡ್ತೀವಿ ಅಂತಿದೆ. ದೇಶದ್ರೋಹಿ ಪಿಎಫ್ಐ ಜೊತೆ ಭಜರಂಗದಳವನ್ನು ಉಲ್ಲೇಖಿಸ್ತಿದೆ. ಆದರೆ ಭಜರಂಗದಳ ಸಾಮಾಜಿಕ ಕಾರ್ಯಗಳ ಮೂಲಕ ಸೇವೆ ಸಲ್ಲಿಸುವ ರಾಷ್ಟ್ರವಾದಿ ಯುವಪಡೆ. ಭಜರಂಗದಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತೀಕವಾಗಿ ನಿಂತಿದೆ. ಭಾರತ ಮಾತೆಯನ್ನ ಪೂಜಿಸುವ ಒಂದು ಸಂಘಟನೆ.

ಭಾರತ ಈಗ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸುರಕ್ಷಿತವಾಗಿದೆ. ಮೋದಿ ನೇತೃತ್ವದಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಬದಲಾಗಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದ ವಿಕಾಸ ಆಗಲಿದೆ. ಈ ಚುನಾವಣೆ ಕರ್ನಾಟಕದ ವಿಕಾಸ, ರಾಷ್ಟ್ರದ ನಿರ್ಮಾಣಕ್ಕಾಗಿ. ಟೀಂ ಇಂಡಿಯಾ ನಾಯಕ ಮೋದಿಜೀ ಕೈ ಬಲಪಡಿಸಲು ನಾವು ಜೊತೆಗೆ ನಿಲ್ಲಬೇಕಿದೆ. ಪುತ್ತೂರಿನಲ್ಲಿ ಸಾಮಾನ್ಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಆಶಾ ತಿಮ್ಮಪ್ಪರನ್ನ ಭಾರೀ ಬಹುಮತದಿಂದ ಗೆಲ್ಲಿಸಿ ಮೋದಿ ಕೈ ಬಲಪಡಿಸಿ ಎಂದು ಹೇಳಿದರು. ರೋಡ್ ಶೋ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಇದ್ದರು.
Chief Minister of Uttar Pradesh, Yogi Adityanath, on Saturday accused the Congress Party of mocking the Hindu faith after it allegedly proposed a ban on Bajrang Dal, a Hindu nationalist organisation. He delivered the speech during a public rally in Chikkamagaluru. “Banning Bajrang Dal means Congress is trying to make a mockery of the Hindu faith. Hindu community will not tolerate and accept it,” the firebrand leader of the ruling Bhartiya Janata Party said.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm