ಬ್ರೇಕಿಂಗ್ ನ್ಯೂಸ್
04-05-23 06:45 pm Mangalore Correspondent ಕರಾವಳಿ
ಮಂಗಳೂರು, ಮೇ 4: ಯಾರೇ ಆದ್ರೂ ಭಯದ ವಾತಾವರಣ ಮಾಡುತ್ತಿದ್ದರೆ, ಅದು ಕಾನೂನಿಗೆ ವಿರುದ್ಧವಾಗುತ್ತದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟ ಆದೇಶ ನೀಡಿದ್ದು ಅದು ದೇಶದ ಕಾನೂನು ಇದ್ದಂತೆ. ಅದರ ಪ್ರಕಾರ, ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ಕಾನೂನು ಪ್ರಕಾರ ನಡೆದುಕೊಂಡರೆ, ಇಂಥ ಸನ್ನಿವೇಶ ಬರುವುದಿಲ್ಲ. ಪಿಎಫ್ಐ ಆಗಲೀ, ಬಜರಂಗದಳ ಆಗಲೀ ಕಾನೂನು ಕೈಗೆ ತೆಗೆದುಕೊಂಡರೆ ಕ್ರಮ ಕೈಗೊಳ್ತೀವಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಜರಂಗದಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾಪವನ್ನು ಸಮರ್ಥಿಸಿದರು. ಇದೇ ವೇಳೆ, ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್, ಈ ಹಿಂದೆ ಗೋವಾದಲ್ಲಿ ಬಿಜೆಪಿ ಸರ್ಕಾರ ಶ್ರೀರಾಮ ಸೇನೆ ಸಂಘಟನೆ ನಿಷೇಧ ಮಾಡಿತ್ತು. ಅದು ಹಿಂದುಗಳ ಸಂಘಟನೆಯಲ್ವಾ? ಆಗ ರಾಮನ ಭಕ್ತರಿಗೆ ನೋವಾಗಲಿಲ್ಲವೇ ? ಅಲ್ಲಿ ಶ್ರೀರಾಮ ಸೇನೆಯನ್ನು ನಿಷೇಧಿಸಿದಾಗ ಮೋದಿ, ಅಮಿತ್ ಷಾ ಯಾಕೆ ಮಾತನಾಡಿಲ್ಲ. ಬಿಜೆಪಿ ಸರ್ಕಾರವೇ ನಿಷೇಧ ಮಾಡಿದಾಗ ಏನಾಯ್ತು, ಯಾಕೆ ನೀವು ಕೇಳಿಲ್ಲ ಎಂದು ಪ್ರಶ್ನೆ ಮಾಡಿದರು.
ಗೃಹ ಸಚಿವರಾದವರು ಕಾಂಗ್ರೆಸ್ ಆಡಳಿತಕ್ಕೆ ಬಂದರೆ ದೊಂಬಿಯಾಗತ್ತೆ ಎಂದಿದ್ದಾರೆ. ಇದರ ಅರ್ಥ ಏನು? ಇವರು ಮಾತ್ರ ಆಡಳಿತದಲ್ಲಿ ಇರಬೇಕೆಂದೇ? ಪಿಯುಡಬ್ಲ್ಯು ಎನ್ನುವ ಸಂಸ್ಥೆ ದೇಶದಲ್ಲಿ ಶಾಂತಿಯಿಂದ ಬದುಕುವ ವ್ಯವಸ್ಥೆ ಇಲ್ಲವೆಂದು ಅಧ್ಯಯನ ವರದಿಯಲ್ಲಿ ಹೇಳಿದೆ. ಜನಸಾಮಾನ್ಯರಿಗೆ ಭಯಮುಕ್ತ ಸಮಾಜದ ಸ್ಥಿತಿ ಇಲ್ಲವೆಂದು ಹೇಳಿದೆ. ಇಂತಹ ಸ್ಥಿತಿ ಬಂದಿರೋದು ಮೋದಿ ಆಡಳಿತದ ಜಮಾನಾದಲ್ಲಿ. ಮನಮೋಹನ್ ಸಿಂಗ್, ಇಂದಿರಾ ಕಾಲದಲ್ಲಿ ಆಗುತ್ತಿರುವುದಲ್ಲ. ಇದಕ್ಕೆಲ್ಲ ಉತ್ತರ ಕೊಡುವ ಅವಕಾಶ ರಾಜ್ಯದ ಜನರಿಗೆ ಬಂದಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.
ಇವರ ಕಾಲದಲ್ಲಿ ಒಂದಾದ್ರೂ ಕೈಗಾರಿಕೆ ಮಾಡಿದ್ದಿದೆಯೇ? ಉದ್ಯೋಗ ಸೃಷ್ಟಿಗೆ ಏನು ಮಾಡಿದ್ದಾರೆ ? ಎಂಆರ್ಪಿಎಲ್, ಎನ್ಎಂಪಿಟಿ, ಏರ್ಪೋರ್ಟ್ ಏನೆಲ್ಲ ಕೈಗಾರಿಕೆ, ಸರಕಾರಿ ಸಂಸ್ಥೆಗಳಿವೆ ಅವೆಲ್ಲ ಕಾಂಗ್ರೆಸ್ ಕಾಲದಲ್ಲಿ ಆಗಿರುವಂಥದ್ದು. ಇಷ್ಟೆಲ್ಲ ನೀರಾವರಿ ಯೋಜನೆ ಮಾಡಿದ್ದು ಕಾಂಗ್ರೆಸ್, ಆಲಮಟ್ಟಿ ಅಣೆಕಟ್ಟು ನೆಹರು ಕಾಲದಲ್ಲಿ ಆಗಿದ್ದು. ನಮ್ಮ ಗ್ಯಾರಂಟಿ ಸ್ಕೀಮ್ ಗೆ ಹಣ ಎಲ್ಲಿಂದ ಅಂತ ಕೇಳುತ್ತಾರೆ. ರಾಜ್ಯದ ಒಟ್ಟು ಬಜೆಟ್ಟಿನ ಭ್ರಷ್ಟಾಚಾರದ ನಲ್ವತ್ತು ಪರ್ಸೆಂಟ್ ಲೆಕ್ಕದಲ್ಲಿ 1.24 ಲಕ್ಷ ಕೋಟಿಯಾಗತ್ತೆ. ಇದನ್ನು ಉಳಿಸಿದರೆ ಗ್ಯಾರಂಟಿ ಯೋಜನೆ ಪೂರೈಸಲು ಭ್ರಷ್ಟಾಚಾರದಲ್ಲಿ ಪೋಲಾಗುವ ಹಣವೇ ಸಾಕಾಗುತ್ತದೆ. ರಾಜ್ಯದಲ್ಲಿ ಒಂದೂ ಬಜೆಟನ್ನು ಸಾಲ ಇಲ್ಲದೆ ಮಾಡಿದ್ದಾರೆಯೇ ಎಂದು ಕೇಳಿದ ಮೊಯ್ಲಿ, ಮೋದಿಯವರು ಅಚ್ಚೇ ದಿನ್ ಎನ್ನುತ್ತಲೇ 120 ಲಕ್ಷ ಕೋಟಿ ವಿದೇಶಿ ಸಾಲ ಮಾಡಿದ್ದಾರೆ. ಒಂಬತ್ತು ವರ್ಷದಲ್ಲಿ 38 ಲಕ್ಷ ಕೋಟಿ ಸೆಸ್ ತೆರಿಗೆಯನ್ನು ಪೆಟ್ರೋಲ್ ಹೆಸರಲ್ಲಿ ಸಂಗ್ರಹಿಸಿದ್ದಾರೆ. ಜಿಎಸ್ಟಿ ಸೇರಿ ಹೆಚ್ಚುವರಿ ಟ್ಯಾಕ್ಸ್ ಹಾಕಿದ್ರೂ ಇವರ ಒಟ್ಟು ಸಾಲದ ಮೊತ್ತ ಕಡಿಮೆಯಾಗಿಲ್ಲ ಅಂದರೆ ಏನರ್ಥ ಎಂದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ, ರಾಜ್ಯದ ಇಂಜಿನ್ ನಡೀತಿಲ್ಲ. ಅದಕ್ಕಾಗಿ ಡಬಲ್ ಇಂಜಿನ್ ಬೇಕೆಂದು ಹೇಳುತ್ತಿದ್ದಾರೆ. ಕೆಟ್ಟು ಹೋದ ಇಂಜಿನ್ ಚಾಲೂ ಮಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.
Veerappa Moily in Mangalore, says if Bajarang dal takes law in hands we will take terrible action if we come to power. Facing massive backlash and protest from pro-Hindu outfits over its poll promise to ban outfits, including the Bajrang Dal, Congress leader and former Karnataka Chief Minister Veerappa Moily said there is no proposal to ban the Bajrang Dal yet. “The only mission is to stop hate politics,” he said.
25-08-25 03:02 pm
Bangalore Correspondent
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 05:24 pm
Mangalore Correspondent
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
Fake Human Right, Rowdy Sheeter Madan Bugadi,...
24-08-25 10:49 pm
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
25-08-25 04:39 pm
Mangalore Correspondent
Dharmasthala Case, Pastor John Shamine and No...
25-08-25 02:29 am
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm