ಬ್ರೇಕಿಂಗ್ ನ್ಯೂಸ್
29-04-23 06:02 pm Mangaluru Correspondent ಕರಾವಳಿ
ಪುತ್ತೂರು, ಎ.29: ದೇವದುರ್ಲಭ, ನಿಸ್ವಾರ್ಥ ಕಾರ್ಯಕರ್ತರನ್ನು ಗುಲಾಮನನ್ನಾಗಿ ಪರಿಗಣಿಸಿದರೆ, ಅದಕ್ಕೆ ಈ ಸಮಾಜ ಉತ್ತರ ಕೊಡುತ್ತದೆ ಎನ್ನುವುದನ್ನು ಪುತ್ತೂರಿನಿಂದ ದೆಹಲಿ ವರೆಗೆ ತೋರಿಸಬೇಕಾಗಿದೆ. ಯಾರೆಲ್ಲ ನನ್ನ ಮೇಲಾಗಲೀ, ಕಾರ್ಯಕರ್ತರ ಮೇಲಾಗಲೀ ಆರೋಪ ಮಾಡಿದ್ದಾರೋ ಅವರಿಗೆ ಮಹಾಲಿಂಗೇಶ್ವರನೇ ಉತ್ತರ ಕೊಡುತ್ತಾನೆ ಎಂದು ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹೇಳಿದ್ದಾರೆ.
ಪುತ್ತೂರಿನಲ್ಲಿ ನಡೆದ ಸೀತಾ ಪರಿವಾರ ಕಾರ್ಯಕ್ರಮದಲ್ಲಿ ಸೇರಿದ ನೂರಾರು ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ, ದಾರ್ಷ್ಟ್ಯದ ಮೂಲಕ ಕಾರ್ಯಕರ್ತರನ್ನು ಹತ್ತಿಕ್ಕುವ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಕಾರ್ಯಕರ್ತರು ಅಂದರೆ, ಗುಲಾಮರು ಅನ್ನುವಂತಹ ಸ್ಥಿತಿಯನ್ನು ನೋಡುತ್ತಿದ್ದೇವೆ. ಆದರೆ ನಾವು ಗುಲಾಮರು ಅಲ್ಲ ಅನ್ನುವುದನ್ನು ತೋರಿಸಬೇಕಾಗಿದೆ. ಅಧಿಕಾರಕ್ಕಾಗಿ ನಾವು ಚುನಾವಣೆಗೆ ಇಳಿದಿಲ್ಲ. ಶಾಸಕನಾಗಿ ಮೆರೆಯಬೇಕೆಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಕಾರ್ಯಕರ್ತರ ನೋವು- ನಲಿವುಗಳ ಪರವಾಗಿ ನಿಲ್ಲಬೇಕು, ಅವರ ಪ್ರತೀಕವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂಬ ಉದ್ದೇಶದಿಂದ ಚುನಾವಣೆ ಸ್ಪರ್ಧಿಸುತ್ತಿದ್ದೇನೆ.
ಬಾಳಿ ಬದುಕಬೇಕಿದ್ದ ಅಕ್ಷತಾ ಎನ್ನುವ ಹೆಣ್ಣು ಮಗಳ ಕೊಲೆಯಾದ ಸಂದರ್ಭದಲ್ಲಿ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಸೌಮ್ಯ ಭಟ್ ಕೊಲೆಯಾದಾಗ ನ್ಯಾಯ ದೊರಕಿಸಲು ಈ ಸಮಾಜದಿಂದ ಸಾಧ್ಯವಾಗಿಲ್ಲ. ಸೀತಾ ಮಾತೆಯ ಆದರ್ಶ ಇಟ್ಟುಕೊಂಡ ಮಹಿಳೆಯರು ಮನಸ್ಸು ಮಾಡಿದರೆ, ಸಮಾಜದಲ್ಲಿ ಬದಲಾವಣೆ ತರಬಹುದು. ಸಮಾಜದಲ್ಲಿ ಹೊಸ ಧ್ವನಿ ಎತ್ತಬಹುದಾಗಿದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡಬಾರದು. ಆದರೆ ಅಧಿಕಾರ ಸಿಕ್ಕ ಸಂದರ್ಭದಲ್ಲಿ ನಾವು ಹಿಂದುತ್ವ ಮರೆಯಬಾರದು ಎಂದರು ಪುತ್ತಿಲ.
ಈಗ ಸಾಮಾಜಿಕ ಜಾಲತಾಣದಲ್ಲಿ ನೂರಕ್ಕೂ ಹೆಚ್ಚು ಫೇಕ್ ಖಾತೆಗಳ ಮೂಲಕ ನಮ್ಮ ಕಾರ್ಯಕರ್ತರ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಸುದ್ದಿಗೋಷ್ಟಿ ಕರೆದು ಅಭ್ಯರ್ಥಿಯ ತೇಜೋವಧೆ ಮಾಡಿ, ಮಾನಸಿಕ ಸ್ಥಿತಿಯನ್ನು ಕುಗ್ಗಿಸುತ್ತಿದ್ದಾರೆ. ಅಧಿಕಾರ ನಮ್ಮಲ್ಲಿ ಇಲ್ಲ. ಹಣದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಸನಾತನ ಧರ್ಮ ಪರಂಪರೆ ಪುತ್ತೂರಿನಲ್ಲಿದೆ. ಸೆರಗೊಡ್ಡಿ ಕೇಳುತ್ತೇನೆ. ನಿಮ್ಮ ಒಂದು ಮತದ ಜೊತೆಗೆ ಹತ್ತು ರೂ. ಕೊಟ್ಟು ನನ್ನ ಚುನಾವಣೆಗೆ ಸಹಕರಿಸಿ. ನೀವೆಲ್ಲರೂ ಅಕ್ಕ, ತಂಗಿ, ತಾಯಿಗೆ ಸಮಾನರಿದ್ದೀರಿ. ಯಾರೆಲ್ಲ ನನ್ನ ಮೇಲೆ ಆರೋಪಗಳಿಗೆ ಮಹಾಲಿಂಗೇಶ್ವರನೇ ಉತ್ತರ ಕೊಡುತ್ತಾನೆ. ನೀವು ಕೊಡುವ ಮತ ಹಿಂದುತ್ವಕ್ಕೆ ಕೊಡುವ ಮತವಾಗುತ್ತದೆ. ಮೋದಿಯ ಆಡಳಿತಕ್ಕೆ ಕೊಡುವ ಮತವಾಗಲಿದೆ. ಯಾವುದೇ ಆರೋಪ- ಪ್ರತ್ಯಾರೋಪಗಳಿಗೆ ಹೋಗುವುದಿಲ್ಲ. ಆರೋಪಗಳೇ ನನಗೆ ಆಶೀರ್ವಾದ ಎಂದುಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದರು ಅರುಣ್ ಪುತ್ತಿಲ.
BJP members are trying to make false allegations against me on social media to discourage me, says Puttur, Arun Puthila. Hindu Karyakartas are not slaves of anyone," he added during a women's programme in Puttur in Dakshina Kannada.
25-08-25 06:07 pm
HK News Desk
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 05:24 pm
Mangalore Correspondent
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
Fake Human Right, Rowdy Sheeter Madan Bugadi,...
24-08-25 10:49 pm
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am