ಬ್ರೇಕಿಂಗ್ ನ್ಯೂಸ್
25-04-23 06:18 pm Mangalore Correspondent ಕರಾವಳಿ
ಮಂಗಳೂರು, ಎ.25: ಮೋದಿಯವರು ನಾ ಖಾನೇ ದೂಂಗಾ ಎಂದು ಸ್ಲೋಗನ್ ಹೇಳುತ್ತಾರೆ. ಆದರೆ ತಮ್ಮ ಪಕ್ಷದವರು ನುಂಗಣ್ಣ ಆದರೂ ಆ ಬಗ್ಗೆ ಮಾತೆತ್ತುವುದಿಲ್ಲ. ಗುತ್ತಿಗೆದಾರ ಸಂಘದವರು ರಾಜ್ಯ ಸರಕಾರದ 40 ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಿ ಕಚೇರಿ, ರಾಷ್ಟ್ರಪತಿ, ರಾಜ್ಯಪಾಲರು, ಲೋಕಾಯುಕ್ತಕ್ಕೆ ದೂರು ನೀಡಿದ್ದರೂ, ಸೊಲ್ಲೆತ್ತುವುದಿಲ್ಲ. ಬಿಜೆಪಿಯವರಿಗೆ ಇನ್ನೇನು ಸಾಕ್ಷಿ ಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮೋದಿಯವರು ಇಡಿ, ಸಿಬಿಐ, ಐಟಿ ಹೀಗೆ ಎಲ್ಲ ಸಾಂವಿಧಾನಿಕ ಅಸ್ತ್ರಗಳನ್ನು ಮುಂದಿಟ್ಟು ವಿರೋಧಿಗಳನ್ನು ಹಣಿಯುತ್ತಿದ್ದಾರೆ. ಬೇರೆಯವರು ಏನೇ ಮಾಡಿದರೂ, ಅದನ್ನು ಪ್ರಶ್ನೆ ಮಾಡುವ ಮೋದಿಯವರು ತಮ್ಮ ಪಕ್ಷದ ಶಾಸಕರು, ಅವರ ಸಂಬಂಧಿಗಳು ಭ್ರಷ್ಟಾಚಾರ ಮಾಡಿದರೂ ಸುಮ್ಮನಿದ್ದಾರೆ. ಕೇಂದ್ರದಲ್ಲಿ 9 ವರ್ಷ ಆಡಳಿತ ಮಾಡುತ್ತಿರುವ ಮೋದಿಯವರು ರಾಜ್ಯಕ್ಕೆ ನೀಡಿದ ಕೊಡುಗೆ ಏನು. ಪ್ರತಿ ಬಾರಿ 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ.

ಇಡೀ ದೇಶದಲ್ಲಿ ಏರ್ಪೋರ್ಟ್, ಬಂದರು, ಹೆದ್ದಾರಿ, ಇಷ್ಟೆಲ್ಲ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಹುಟ್ಟುಹಾಕಿದ್ದು ಕಾಂಗ್ರೆಸ್. ಆದರೂ ಕಾಂಗ್ರೆಸ್ ಏನೂ ಮಾಡಿಯೇ ಇಲ್ಲ ಎನ್ನುತ್ತಾರೆ. ಈಗ ಅಧಿಕಾರಕ್ಕೆ ಬಂದು 9 ವರ್ಷಗಳಾಗಿದ್ದು ಮೋದಿ ರಾಜ್ಯಕ್ಕೇನು ಕೊಡುಗೆ ಕೊಟ್ಟಿದ್ದಾರೆ. ಯಾವುದಾದ್ರೂ ಹೇಳಿಕೊಳ್ಳುವಂತಹ ಕೊಡುಗೆ ರಾಜ್ಯಕ್ಕೆ ಕೊಟ್ಟಿದ್ದಾರೆಯೇ ಎಂದು ಕೇಳಿದ ಖರ್ಗೆ, ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳೇ ಖಾಲಿಯಿವೆ. ಹೊಸ ಹುದ್ದೆ ಬೇಡ, ಅವನ್ನು ಭರ್ತಿ ಮಾಡಿದರೂ, ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗುತ್ತದೆ. ಬಿಜೆಪಿ ಸರಕಾರದಲ್ಲಿ ಹೊಸ ಉದ್ಯೋಗವೂ ಇಲ್ಲ. ದೇಶದಲ್ಲಿ ನೂರು ಕೋಟಿ ಶಿಕ್ಷಿತರು ಉದ್ಯೋಗ ಇಲ್ಲದೆ ಪರದಾಡುತ್ತಿದ್ದಾರೆ. 25 ಲಕ್ಷ ಇಂಜಿನಿಯರ್, ಡಾಕ್ಟರ್ ಗಳು ಕೆಲಸ ಸಿಗದೆ ಪರದಾಟ ನಡೆಸುತ್ತಿದ್ದಾರೆ.
ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮೋದಿ ಹೇಳುತ್ತಿದ್ದಾರೆ. ವಾರಣಾಸಿಯಲ್ಲಿ ರೈಲು ಇಂಜಿನ್ ಫ್ಯಾಕ್ಟರಿ ಇದೆ. ಇವರ ಡಬಲ್ ಇಂಜಿನ್ನಲ್ಲಿ ಒಂದು ಕೆಟ್ಟು ಹೋಗಿದೆ. ಸಿಂಗಲ್ ಇಂಜಿನ್ ನಲ್ವತ್ತು ಪರ್ಸೆಂಟ್ ಆದಲ್ಲಿ ಡಬಲ್ ಇಂಜಿನ್ ಆದಲ್ಲಿ 80 ಪರ್ಸೆಂಟ್ ಕಮಿಷನ್ ಆಗುತ್ತದೆ. ಇವರದ್ದು ಕಮಿಷನ್ ಹೊಡಿಯೋ ಡಬಲ್ ಇಂಜಿನ್ನಾ ಎಂದು ಕೇಳಬೇಕಾಗುತ್ತದೆ. ನಾನು ರೈಲ್ವೇ ಮಿನಿಸ್ಟರ್ ಆಗಿದ್ದಾಗ ಒಂದೇ ವರ್ಷದಲ್ಲಿ ವಾರಣಾಸಿ, ಲಕ್ನೋ, ಕೊಲ್ಕತ್ತಾ ಹೀಗೆ ದೇಶದಾದ್ಯಂತ 37 ಹೊಸ ರೈಲುಗಳನ್ನು ಬಿಟ್ಟಿದ್ದೆ. ಇವರೀಗ ಒಂದು ರೈಲು ಬಿಟ್ಟು ಪ್ರಚಾರ ಪಡೆಯುತ್ತಾರೆ ಎಂದು ಲೇವಡಿ ಮಾಡಿದರು. ಜನರು ಬೆಲೆಯೇರಿಕೆಯಿಂದ ತತ್ತರಿಸಿದ್ದರೆ, ಬಿಜೆಪಿ ಅದರ ಬಗ್ಗೆ ಮೌನ ತಾಳಿದೆ. ಭ್ರಷ್ಟಾಚಾರ, ನಿರುದ್ಯೋಗದ ಸಮಸ್ಯೆ ಬಗ್ಗೆಯೂ ಮೌನ ತಾಳಿದೆ.
ಸಾಂವಿಧಾನಿ ಸಂಸ್ಥೆಗಳಿಗೆ ಮತ್ತು ಮಾಧ್ಯಮ ಸಂಸ್ಥೆಗಳಿಗೂ ಕೇಂದ್ರ ಸರಕಾರ ಮೂಗುದಾರ ಹಾಕಿದ್ದು ಇದರಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕಿದೆ ಎಂದು ಹೇಳಿದ ಖರ್ಗೆಯವರಿಗೆ ಅದನ್ನು ಹೇಗೆ ನಿರೂಪಿಸುತ್ತೀರಿ ಎಂಬ ಪ್ರಶ್ನೆ ಮುಂದಿಡಲಾಯ್ತು. ನಿಮ್ಮ ಮಾಧ್ಯಮ ಸಂಸ್ಥೆಗಳನ್ನೇ ನಿಯಂತ್ರಣದಲ್ಲಿ ಇಟ್ಟುಕೊಂಡಿಲ್ಲವೇ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಇದೆಯಾ. ಹೌದೋ, ಅಲ್ಲವೋ ನೀವೇ ಹೇಳಿ ಎಂದು ಖರ್ಗೆ ಮರು ಪ್ರಶ್ನೆ ಹಾಕಿದರು.
ದೇಶದಲ್ಲಿ ಶಾಸಕರನ್ನು ಕದಿಯುವ ಕಳ್ಳರಿದ್ದಾರೆ. ಗೋವಾ, ಮಣಿಪುರ, ಕರ್ನಾಟಕ ಎಲ್ಲ ಕಡೆ ಶಾಸಕರ ಕಳ್ಳತನ ಆಗಿದ್ದು ನೋಡಿದ್ದೇವೆ. ಹೀಗಾಗಿ ನಾವು ತಕ್ಕಮಟ್ಟಿನ ಬಹುಮತ ಬಂದರೆ ಸಾಲುವುದಿಲ್ಲ ಎಂದು ಮತದಾರರಲ್ಲಿ ಕೇಳುತ್ತೇವೆ. ಬಹುಮತ ಕೊಟ್ಟರೆ 150 ಸೀಟು ಕೊಡಬೇಕು. ಹಾಗಾದರೆ ಮಾತ್ರ ಸ್ಥಿರ ಸರಕಾರ ನೀಡಲು ಸಾಧ್ಯ ಎಂದರು ಖರ್ಗೆ. ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೊ, ಮಂಜುನಾಥ ಭಂಡಾರಿ, ಯುಟಿ ಖಾದರ್, ಐವಾನ್ ಡಿಸೋಜ, ಚರಣ್ ಸಿಂಗ್ ಚೋಪ್ರಾ, ರಮಾನಾಥ ರೈ ಮತ್ತಿತರರಿದ್ದರು.
AICC president Mallikarjun Kharge said that Prime Minster Narendra Modi and union home minister Amit Shah are silent against corruption and using the government machinery like ED and CBI against the opposition leaders.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm