ಬ್ರೇಕಿಂಗ್ ನ್ಯೂಸ್
09-04-23 10:17 pm HK News Desk ಕರಾವಳಿ
ಮಂಗಳೂರು, ಎ.9: ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ವಿಧಿಸುವ ಪ್ರಸ್ತಾಪಕ್ಕೆ ಭಾರೀ ಪರ - ವಿರೋಧ ವ್ಯಕ್ತವಾಗಿ ವಿಷಯ ವಿವಾದಕ್ಕೆ ತಿರುಗುತ್ತಲೇ ಚುನಾವಣೆ ಹೊತ್ತಲ್ಲಿ ಸಾಮರಸ್ಯ ಕೆಡದಂತೆ ನೋಡಿಕೊಳ್ಳಲು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಕಮಿಟಿ ಕಡೆಗೂ ಕಠಿಣ ನಿರ್ಧಾರಕ್ಕೆ ಬಂದಿದೆ. ಈ ಬಾರಿ ದೇಗುಲದ ಆವರಣದ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಯಾವುದೇ ಧರ್ಮೀಯರಿಗೂ ವ್ಯಾಪಾರಕ್ಕೆ ಅವಕಾಶ ನೀಡದಂತೆ ನಿರ್ಣಯ ಕೈಗೊಂಡಿದೆ.
ಕಳೆದ ವರ್ಷ ಹಿಂದು ಸಂಘಟನೆಗಳು ಅನ್ಯಧರ್ಮೀಯರಿಗೆ ವ್ಯಾಪಾರ ಅವಕಾಶ ನೀಡುವುದಿಲ್ಲ ಎಂದು ಬ್ಯಾನರ್ ಹಾಕಿದ್ದರಿಂದ ವಿವಾದ ಉಂಟಾಗಿತ್ತು. ಧರ್ಮ ಸಾಮರಸ್ಯದ ನೆಲೆಯಾದ ಬಪ್ಪನಾಡಿನಲ್ಲಿ ಮುಸ್ಲಿಮರಿಗೆ ನಿಷೇಧ ವಿಧಿಸಿದ್ದು ಜಾತ್ಯತೀತ ವ್ಯಕ್ತಿಗಳ ವಿರೋಧಕ್ಕೆ ಕಾರಣವಾಗಿತ್ತು. ಈ ಬಾರಿಯೂ ಜಾತ್ರೆ ಸಂದರ್ಭದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬಾರದೆಂದು ಹಿಂದು ಸಂಘಟನೆಗಳು ದೇವಸ್ಥಾನ ಕಮಿಟಿಗೆ ಮನವಿ ಸಲ್ಲಿಸಿದ್ದವು. ಅದಕ್ಕೆ ಆರಂಭದಲ್ಲಿ ತಾತ್ವಿಕ ಒಪ್ಕಿಗೆಯನ್ನೂ ನೀಡಲಾಗಿತ್ತು. ಇದೀಗ ವಿರೋಧ ಕೇಳಿಬಂದಿದ್ದರಿಂದ ಎಚ್ಚೆತ್ತಿರುವ ದೇವಸ್ಥಾನದ ಆಡಳಿತ ಮಂಡಳಿ ಈ ಬಾರಿಯ ಜಾತ್ರೆಯಲ್ಲಿ ದೇವಸ್ಥಾನದ ಆವರಣದಲ್ಲಿ ಮಳಿಗೆಗಳನ್ನು ತೆರೆಯಲು ಯಾರಿಗೂ ಅವಕಾಶ ನೀಡಲ್ಲ ಎಂದು ಹೇಳಿದೆ. ಈ ಬಾರಿ ದೇವಸ್ಥಾನದ ಜಾತ್ರೆಯಲ್ಲಿ ದೇಗುಲದ ಪ್ರದೇಶದಲ್ಲಿ ಯಾವುದೇ ಧರ್ಮದ ವ್ಯಾಪಾರಿಗಳು ಅಂಗಡಿಗಳನ್ನು ಹಾಕದಂತೆ ನಿರ್ಬಂಧಿಸಲಾಗಿದೆ.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎನ್.ಎಸ್.ಮನೋಹರ ಶೆಟ್ಟಿ ಮಾಹಿತಿ ನೀಡಿದ್ದು, ಬಪ್ಪನಾಡು ದೇವಸ್ಥಾನವು ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದು, ಮುಸ್ಲಿಮರು ಸೇರಿದಂತೆ ವಿವಿಧ ಧರ್ಮದ ಸಾವಿರಾರು ಜನರು ದೇವಾಲಯಕ್ಕೆ ಬರುತ್ತಾರೆ. ಕಳೆದ ವರ್ಷದ ಬೆಳವಣಿಗೆಯಿಂದ ನಮಗೆ ನೋವಾಗಿದೆ, ಪ್ರಸ್ತುತ ದೇವಸ್ಥಾನದ ಜಾತ್ರೆಗೆ ದೇವಸ್ಥಾನದ ಪ್ರದೇಶದಲ್ಲಿ ಯಾವುದೇ ಮಳಿಗೆಗಳನ್ನು ಹಾಕದಿರಲು ಸಮಿತಿ ನಿರ್ಧರಿಸಿದೆ. ಜಾತ್ರೆಯು ಸಾಮರಸ್ಯದಿಂದ ನಡೆಯಬೇಕೆಂದು ನಾವು ಬಯಸುತ್ತೇವೆ. ಯಾವುದೇ ವಿವಾದವನ್ನು ಬಯಸುವುದಿಲ್ಲ ಎಂದಿದ್ದಾರೆ.
ದೇವಸ್ಥಾನದ ಜಮೀನಿನ ಪಕ್ಕದಲ್ಲಿರುವ ಖಾಸಗಿ ಆಸ್ತಿಯಲ್ಲಿ ಮಾಲೀಕರು ಒಪ್ಪಿಗೆ ನೀಡಿದರೆ ವ್ಯಾಪಾರಿಗಳು ಮಳಿಗೆಗಳನ್ನು ನಿರ್ಮಿಸಲು ಸ್ವತಂತ್ರರು ಎಂದು ಶೆಟ್ಟಿ ಹೇಳಿದ್ದಾರೆ. ಖಾಸಗಿ ಜಮೀನಿನಲ್ಲಿನ ಅಂಗಡಿಗಳನ್ನು ಸ್ವಯಂಸೇವಕರ ಸಮಿತಿ ನೋಡಿಕೊಳ್ಳುತ್ತಿದ್ದು, ಅಂಗಡಿಗಳ ಹಂಚಿಕೆಗಾಗಿ ಸಮಿತಿ ಸಂಗ್ರಹಿಸಿದ ಹಣದ ಒಂದು ಭಾಗವನ್ನು ದೇವಸ್ಥಾನಕ್ಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
For the second year in a row, Muslim traders will be barred from putting up stalls at the Bappanadu temple fair in Mulky in Dakshina Kannada district of Karnataka. The decision to exclude Muslim traders was taken by the temple committee after a memorandum by local residents called for the exclusion of Muslims. Now the comitte has deceided not to allow vendors of any community inside the temple premises for trade.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am