ಬ್ರೇಕಿಂಗ್ ನ್ಯೂಸ್
24-03-23 10:40 pm Mangalore Correspondent ಕರಾವಳಿ
ಮಂಗಳೂರು, ಮಾ.24: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ಮಂಗಳೂರಿನ ಲಾಲ್ ಬಾಗ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಬಿಜೆಪಿಗೆ ಧಿಕ್ಕಾರ ಕೂಗಿದ್ದಾರೆ. ಬ್ಲ್ಯಾಕ್ ಡೇ ಎಂಬ ಸ್ಲೋಗನ್ ತೋರಿಸಿ, ನೆಲದಲ್ಲಿ ಕುಳಿತು ಕಾರ್ಯಕರ್ತರು ಧರಣಿ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ಸಭಾ ನಾಯಕ ಬಿಕೆ ಹರಿಪ್ರಸಾದ್, ರಾಹುಲ್ ಗಾಂಧಿ ಅವರ ಸದಸ್ಯತ್ವ ಅನರ್ಹ ಮಾಡಿದ್ದು ಪ್ರಜಾಪ್ರಭುತ್ವ ಬುಡಮೇಲುಗೊಳಿಸುವ ನಡೆ. ರಾಹುಲ್ ಗಾಂಧಿಯವರು 2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ನೀರವ್ ಮೋದಿ, ಲಲಿತ್ ಮೋದಿಯನ್ನು ಉಲ್ಲೇಖಿಸಿ ಮಾತನಾಡಿದ್ದರು. ಕಳ್ಳರನ್ನು ಕಳ್ಳರು ಎನ್ನದೆ ಹರಿಶ್ಚಂದ್ರರು ಎನ್ನಬೇಕೇ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಹೇಳಿದ್ದ ಮಾತನ್ನು ನಾವೆಲ್ಲ ಹೇಳಿಕೊಂಡು ಹೋಗುತ್ತೇವೆ. ಮೋದಿ ಹೆಸರಿಟ್ಟವರೇ ಹಲವಾರು ಮಂದಿ ಕಳ್ಳರಿದ್ದಾರೆ, ಅವರೆಲ್ಲ ವಿದೇಶದಲ್ಲಿ ಐಷಾರಾಮಿ ಇದ್ದಾರೆ. ದೇಶದ ದುಡ್ಡು ತಿಂದು ಅವರನ್ನು ನಾವು ಕಳ್ಳರು ಎನ್ನಬೇಕಲ್ಲದೆ ಮತ್ತೇನು ಹೇಳಬೇಕು. ಈ ಕಳ್ಳರನ್ನು ಬಿಜೆಪಿಯವರು ಹರಿಶ್ಚಂದ್ರರು ಎನ್ನುತ್ತಾರೆಯೇ. ಹಾಗೆಂದು ಕರೆದಲ್ಲಿ ನಾವು ನಮ್ಮ ಹೇಳಿಕೆ ಹಿಂಪಡೆಯುತ್ತೇವೆ. ನಾವು ಇದೇ ಮಾತನ್ನು ಹೇಳಿಕೊಂಡು ಹೋಗುತ್ತೇವೆ. ಇವರು ಜೈಲಿಗೆ ಹಾಕೋದಿದ್ದಲ್ಲಿ ನಾವು ರೆಡಿ ಇದ್ದೇವೆ ಎಂದು ಹರಿಪ್ರಸಾದ್ ಹೇಳಿದರು. ಯುಟಿ ಖಾದರ್, ಐವಾನ್ ಡಿಸೋಜ, ಅಭಯಚಂದ್ರ ಜೈನ್, ಜೆ.ಆರ್ ಲೋಬೊ, ಸಂತೋಷ್ ಶೆಟ್ಟಿ ಮತ್ತಿತರರಿದ್ದರು.
Congress leader Rahul Gandhi convicted, Congress leaders including Hariprasad protest before MCC in Mangalore.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm