ಬ್ರೇಕಿಂಗ್ ನ್ಯೂಸ್
21-03-23 11:09 pm Mangalore Correspondent ಕರಾವಳಿ
ಮಂಗಳೂರು, ಮಾ.21 : ದೇಶದಲ್ಲೇ ಮೊದಲ ಪ್ರಯೋಗವಾಗಿ ರಾಜ್ಯದಲ್ಲಿ 2023ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣೆ ಆಯೋಗ ಘೋಷಿಸಿದೆ.
ಇದರಂತೆ ದ.ಕ. ಜಿಲ್ಲೆಯಲ್ಲಿ 60,862 ಮಂದಿ ಮತದಾರರು ಈ ಅರ್ಹತೆಯನ್ನು ಪಡೆಯಲಿದ್ದಾರೆ. ದ.ಕ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 38,287 ಮತದಾರರಿದ್ದಾರೆ. 90 ವರ್ಷ ಮೇಲ್ಪಟ್ಟವರು 8,100 ಹಾಗೂ 100 ವರ್ಷ ಮೇಲ್ಪಟ್ಟವರು 532 ಮತದಾರರಿದ್ದಾರೆ. ಇದರೊಂದಿಗೆ 13,943 ಅಂಗವಿಕಲರು ಮತದಾನದ ಹಕ್ಕು ಹೊಂದಿದ್ದಾರೆ. ಇವರಲ್ಲಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಸಾಧ್ಯವಾಗದವರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗುತ್ತದೆ.
ಚುನಾವಣೆ ಘೋಷಣೆ ಆದ ಬಳಿಕ ಮನೆಯಿಂದಲೇ ಮತದಾನ ಬಯಸುವವರಿಗೆ ಫಾರಂ (ನಮೂನೆ) ಭರ್ತಿಗೆ ನೀಡಲಾಗುತ್ತದೆ. ಅದರಂತೆ ಮತಗಟ್ಟೆಗೆ ಬರಲು ಸಾಧ್ಯವಾಗದವರಿಗೆ ಪರಿಶೀಲನೆ ನಡೆಸಿ ಮನೆಯಿಂದಲೇ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮತಗಟ್ಟೆಗೆ ಬಂದು ಮತದಾನ ಮಾಡುವ ಹಿರಿಯ ನಾಗರಿಕರು, ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಕಳೆದ ಚುನಾವಣೆಯ ಮತದಾನ ಗಮನಿಸಿದರೆ, ದ.ಕ. ಜಿಲ್ಲೆಯ ನಗರ ಭಾಗದಲ್ಲಿ ಮತದಾನ ಕಡಿಮೆ. ಜಿಲ್ಲೆಯಲ್ಲಿ ಒಟ್ಟು ಶೇ. 83ರಷ್ಟು ಮತದಾನವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾನ ಕೇವಲ ಶೇ. 67. ರಾಜ್ಯದ ಎರಡನೇ ಪ್ರಮುಖ ನಗರವಾಗಿರುವ ಮಂಗಳೂರು ದಕ್ಷಿಣದಲ್ಲಿ ಮತದಾನದ ಬಗ್ಗೆ ನಿರಾಸಕ್ತಿಯನ್ನು ಗಮನಿಸಿರುವ ಜಿಲ್ಲಾಡಳಿತ ಈ ಬಾರಿ ಇಂತಹ ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು ಮುಂದಾಗಿದೆ. ದ.ಕ. ಜಿ.ಪಂ. ಸಿಇಒ ಡಾ| ಕುಮಾರ್ ಅವರು ಈ ಬಾರಿ ಮತ್ತೆ ವಿನೂತನವಾಗಿ ಸ್ವೀಪ್ ಅನುಷ್ಠಾನಕ್ಕೆ ಮುಂದಾಗಿದ್ದಾರೆ.
ಅಪಾರ್ಟ್‌ಮೆಂಟ್, ಫ್ಲ್ಯಾಟ್‌ಗಳನ್ನು ಪ್ರಮುಖ ಗುರಿಯಾಗಿಸಿ ಅಲ್ಲಿನ ಅಧ್ಯಕ್ಷರನ್ನೇ ಒಳಗೊಂಡು ಸಮಿತಿ ರಚಿಸಿ, ಯುವಕರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮ ನಡೆಸುವುದಾಗಿ ಡಾ| ಕುಮಾರ್ ತಿಳಿಸಿದ್ದಾರೆ.
Chief Election Commissioner of Indid has announced that all senior citizens above 80 and people with disability will get a vote-from-home option in the Karnataka Assembly elections.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm