ಬ್ರೇಕಿಂಗ್ ನ್ಯೂಸ್
20-03-23 11:14 pm Mangalore Correspondent ಕರಾವಳಿ
ಮಂಗಳೂರು, ಮಾ.21 : ರಾಜ್ಯ ಬಿಜೆಪಿ ಸರಕಾರದ ಆಯಸ್ಸು ಇನ್ನು ಇರೋದು 35 ದಿನಗಳು ಮಾತ್ರ, ಉಳಿದಿರುವ ದಿನಗಳಲ್ಲಾದರೂ ಜನರ ಪರವಾಗಿ ಕೆಲಸ ಮಾಡಿ ತನ್ನ ಮೇಲಿನ ಕಪ್ಪು ಚುಕ್ಕೆಯನ್ನು ಕ್ಲೀನ್ ಮಾಡುವ ಬದಲು ಸರಕಾರಿ ಆಡಳಿತ ಯಂತ್ರದ ಅಂಗಡಿ ಬಂದ್ ಮಾಡಿ ಚುನಾವಣೆ ಪ್ರಚಾರದಲ್ಲಿ ನಿರತವಾಗಿದೆ ಎಂದು ಶಾಸಕ ಯು.ಟಿ. ಖಾದರ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ.ಖಾದರ್, ಪೌರ ಕಾರ್ಮಿಕರ ಸಮಸ್ಯೆ, ನೀರಿನ ಸಮಸ್ಯೆಯಿಂದ ಜನರು ಹತಾಶರಾಗಿದ್ದಾರೆ, ಆಡಳಿತ ವಹಿಸ್ಕೊಂಡವರು ಮಾತ್ರ ನಿರ್ಲಕ್ಷ್ಯ ಧೋರಣೆಯನ್ನು ಮುಂದಿವರಿಸಿದ್ದಾರೆ, ಒಂದು ವಾರದಿಂದ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಕಾರ್ಮಿಕರ ಪ್ರತಿಭಟನೆಯಿಂದಾಗಿ ನಗರದಲ್ಲಿ ಸ್ವಚ್ಛತೆ ಜತೆಗೆ ಆರೋಗ್ಯದ ಸಮಸ್ಯೆ ಆತಂಕ ಎದುರಾಗಿದೆ. ಎಲ್ಲ ವಿಭಾಗದ ನೌಕರರು ಈಗ ಪ್ರತಿಭಟನೆ ನಡೆಸುವ ಹಂತಕ್ಕೆ ಬಂದಿದ್ದಾರೆ.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಮಂಗಳೂರು ವಿವಿಯ ಪದವಿ ತರಗತಿಗಳ ಫಲಿತಾಂಶ ಬಾರದೆ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಆರ್‌ಟಿಓ ಕಚೇರಿಗೆ ಹೋದರೆ ಅಲ್ಲಿ ಆರ್‌ಸಿ ಪ್ರಿಂಟ್ ಮಾಡುವ ಕಾರ್ಡ್ ಗೂ ಗತಿಯಿಲ್ಲ. ಬಿಜೆಪಿ ಸರಕಾರ ನಡೆಸುವ ಮಂದಿ ನಲ್ವತ್ತು ಪರ್ಸೆಂಟಿನ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿರತರಾಗಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.
ಉರಿಗೌಡ ನಂಜೇಗೌಡರ ಕುರಿತ ಪ್ರಶ್ನೆಗೆ, ಅವರು ಯಾರು ಅಂತಲೇ ಗೊತ್ತಿಲ್ಲ ಎಂದರು. ಟಿಪ್ಪು ಕುರಿತ ಪಠ್ಯದಲ್ಲಿ ಆತನನ್ನು ಬ್ರಿಟಿಷರು ಕೊಂದಿದ್ದು ಅಂತ ಇದೆ. ಅದು ಬಿಟ್ಟರೆ ಬೇರೆ ಯಾವುದೇ ಇತಿಹಾಸ ಓದಿಲ್ಲ ಎಂದರು. ಕಳ್ಳಿಗೆ ತಾರನಾಥ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತಿತರರಿದ್ದರು.
Bjp will be alive for another 35 days only mocks UT Khader in Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm