ಬ್ರೇಕಿಂಗ್ ನ್ಯೂಸ್
20-03-23 01:12 pm Mangalore Correspondent ಕರಾವಳಿ
ಮಂಗಳೂರು, ಮಾ.20 : ಕಳೆದ ವರ್ಷದ ರೀತಿಯಲ್ಲೇ ಯುಗಾದಿ ವೇಳೆ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡುತ್ತೇವೆ. ಹಲಾಲ್ ಇಸ್ಲಾಂ ನದ್ದು, ಹಿಂದೂಗಳಿಗೆ ಸಂಬಂಧಿಸಿರೋದು ಅಲ್ಲ. ಮುಸ್ಲಿಮರು ಹಿಂದುಗಳು ಕಟ್ ಮಾಡಿದ ಮಾಂಸ ತಿನ್ನೋದಿಲ್ಲ. ನಾವು ಯಾಕೆ ಅಲ್ಲಾನಿಗೆ ಬಲಿ ಕೊಟ್ಟ ಕುರಿಯ ಮಾಂಸವನ್ನು ತಿನ್ನಬೇಕು ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಜಮಾತೆ ಉಲೇಮಾ ಹಿಂದ್ ಎನ್ನುವ ಟ್ರಸ್ಟ್ ಹಲಾಲ್ ಹೆಸರಲ್ಲಿ ಜಗತ್ತಿನಲ್ಲಿ ಎರಡು ಲಕ್ಷ ಕೋಟಿ ಆದಾಯ ಮಾಡ್ತಿದೆ. ಈ ದುಡ್ಡು ಎಲ್ಲಿ ಖರ್ಚು ಆಗುತ್ತಿದೆ? ಹಲಾಲ್ ನ ದುಡ್ಡು ಟೆರರಿಸ್ಟ್ ಗಳಿಗೆ ಸಂದಾಯವಾಗುತ್ತದೆ. ಮಂಡ್ಯದಲ್ಲಿ ಹಿಜಾಬ್ ಪರವಾಗಿ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿಗೆ ಈ ಟ್ರಸ್ಟ್ ಐದು ಲಕ್ಷ ರೂಪಾಯಿ ನೀಡಿದೆ. ರಾಜ್ಯದಲ್ಲಿ ನಡೆದ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಗಲಭೆಯ ಹಿಂದೆ ಹಲಾಲ್ ದುಡ್ಡು ಇದೆ. ಹಲಾಲ್ ಮಾಂಸ ಸೇವಿಸಿ ಹಿಂದೂಗಳ ವಿರುದ್ಧವೇ ಷಡ್ಯಂತ್ರ ಮಾಡಲು ನಾವೇ ಕಾರಣವಾಗುತ್ತಿದ್ದೇವೆ. ಹಾಗಾಗಿ ಯುಗಾದಿ ವೇಳೆಗೆ ಹಲಾಲ್ ನಿಷೇಧಿಸಿ, ಹಿಂದುಗಳ ಜಟ್ಕಾ ಕಟ್ ಮಾಂಸ ತಿನ್ನಬೇಕೆಂದು ಆಗ್ರಹಿಸುತ್ತೇನೆ. ಜೊತೆಗೆ ಹಲಾಲ್ ಮಾರ್ಕನ್ನು ನಿಷೇಧ ಮಾಡಬೇಕು ಎಂದರು.
ಇಂಧನ ಸಚಿವ ಸುನಿಲ್ ಕುಮಾರ್ ಟಿವಿ ಸಂದರ್ಶನದಲ್ಲಿ ರಾಮ ಮಂದಿರ ಕಟ್ಟುವುದು, ಕೇಸರಿ ಶಾಲು ಹಾಕೋದೇ ಹಿಂದುತ್ವ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸುನಿಲ್ ಕುಮಾರ್ ಈ ಸ್ಥಾನಕ್ಕೇರಲು ಕೇಸರಿ ಶಾಲು, ಹಿಂದುತ್ವ ಕಾರಣ. ಹಿಂದುತ್ವ ಕಾರಣದಿಂದಾಗಿಯೇ ರಾಮ ಮಂದಿರ ಹೋರಾಟ ಆಗಿತ್ತು. ರಾಮ ಮಂದಿರ ಹೋರಾಟ ಹಿಂದುತ್ವದ ಪ್ರತೀಕ, ವಿಜಯದ ಸಂಕೇತ. ಸುನಿಲ್ ಕುಮಾರ್ ಗೆ ಮರೆತು ಹೋಗಿರಬಹುದು. ಇವರಿಗೆ ನಾಚಿಕೆ ಮಾನ ಮರ್ಯಾದೆ ಇದ್ಯಾ.. ಹಿಂದುತ್ವ ಅಂದ್ರೆ ದುಡ್ಡು ಮಾಡೋದು ಸೊಕ್ಕು ತೊರಿಸೋದು ಅಲ್ಲ. ಕೇಸರಿ ಶಾಲು ಹಾಕಿ ದತ್ತಪೀಠ ಹೋರಾಟ ಮಾಡಿರೋದು ಮರೆತು ಹೋಯ್ತಾ?
ಸುನೀಲ್ ಕುಮಾರ್ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ. ಈ ಹೇಳಿಕೆಯನ್ನು ಹಿಂಪಡೆಯಬೇಕು, ಕ್ಷಮೆ ಕೇಳಬೇಕು, ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ. ನೀವು ಹಿಂದುತ್ವ, ಹಲಾಲ್ ಹೆಸರಲ್ಲಿ ಕರಾವಳಿಯನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ, ನಾನು ಇಡೀ ರಾಜ್ಯವನ್ನು ನನ್ನದು ಎಂದ್ಕೊಂಡಿದ್ದೇನೆ. ಹಾಗಾಗಿ ಬೆಂಗಳೂರು ಹೋಗಿಲ್ಲ. ಇಲ್ಲಿಯೇ ಸುದ್ದಿಗೋಷ್ಟಿ ಮಾಡಿದ್ದೇನೆ ಎಂದರು.
ಕಾರ್ಕಳದಲ್ಲಿ ಯಾಕೆ ಚುನಾವಣೆ ಸ್ಪರ್ಧೆ ಮಾಡುತ್ತೀರಿ, ಬೇರೆ ಕಡೆಯೂ ಅಂತಹದ್ದೇ ಹಿಂದುತ್ವದ ವಿಚಾರ ಇದೆಯಲ್ಲಾ ಎಂಬ ಪ್ರಶ್ನೆಗೆ, ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಗೋಕಳ್ಳತನ ಕಾರ್ಕಳದಲ್ಲಿ ನಡೆದಿದೆ. ಹಿಂದೂ ಸಂಘಟನೆಗಳ 300 ಕ್ಕೂ ಅಧಿಕ ಕಾರ್ಯಕರ್ತರ ಮೇಲೆ ಕೇಸ್ ಗಳಿವೆ,ಇನ್ನೂ ಕೇಸ್ ಹಿಂದೆತೆಗದುಕೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ 26 ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದಾರೆ. ಹಿಂದುಗಳ ಮೇಲಿನ ಕೇಸ್ ಗಳನ್ನು ಕಾರ್ಕಳದಲ್ಲಿ ಹಿಂದೆ ತೆಗೆದುಕೊಂಡಿಲ್ಲ. ಸುನೀಲ್ ಕುಮಾರ್ ಅವರ ಬ್ರಹ್ಮಾಂಡದ ಭೃಷ್ಟಾಚಾರದ ಮೂರನೇ ಭಾಗವನ್ನು ನಾಳೆ ಉಡುಪಿಯಲ್ಲಿ ಸುದ್ದಿಗೋಷ್ಠಿ ಮಾಡುತ್ತೇನೆ ಎಂದರು.
Why must Hindus eat meat of Sheep slaughtered for Allah questions Pramod Muthalik in Mangalore. He also slammed Minister Sunil kumar for his remarks on orange shawl.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm