ಬ್ರೇಕಿಂಗ್ ನ್ಯೂಸ್
17-03-23 10:21 pm Giridhar Shetty, Mangaluru Correspondent ಕರಾವಳಿ
ಮಂಗಳೂರು, ಮಾ.17: ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವಾಗಲೇ ದೆಹಲಿಯಲ್ಲಿ ಪ್ರಮುಖ ನಾಯಕರು ಸಭೆ ನಡೆಸಿದ್ದಾರೆ. ರಾಜ್ಯದಿಂದ ಫೈನಲ್ ಮಾಡಿರುವ ಪಟ್ಟಿಯನ್ನು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಮಹತ್ತರ ಬದಲಾವಣೆಗೆ ಕೇಂದ್ರ ನಾಯಕರು ಕೈಹಾಕಿದ್ದಾರೆ. ಸಾಂಪ್ರದಾಯಿಕವಾಗಿ ಕ್ರಿಸ್ತಿಯನ್ನರಿಗೆ ನೀಡುತ್ತಿದ್ದ ಈ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಮಣೆ ಹಾಕುತ್ತಿದ್ದಾರೆ.
ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಬಿಲ್ಲವ ಮುಖಂಡರಾಗಿ ಗುರುತಿಸಿರುವ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್ ರಾಮಯ್ಯ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ. ರಾಜ್ಯದ ನಾಯಕರು ಕೇಂದ್ರಕ್ಕೆ ಕಳಿಸಿಕೊಟ್ಟಿರುವ ಪಟ್ಟಿಯಲ್ಲಿ ಮಾಜಿ ಶಾಸಕ ಜೆಆರ್ ಲೋಬೊ, ಐವಾನ್ ಡಿಸೋಜ ಮತ್ತು ಪದ್ಮರಾಜ್ ರಾಮಯ್ಯ ಹೆಸರಿತ್ತು. ಹಿಂದಿನಿಂದಲೂ ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಕ್ರಿಸ್ತಿಯನ್ನರಿಗೆ ಟಿಕೆಟ್ ನೀಡುತ್ತಾ ಬರಲಾಗಿತ್ತು. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಜಾರ್ಜ್ ಪ್ರತಿನಿಧಿಸುವ ಕ್ಷೇತ್ರವನ್ನು ಕ್ರಿಸ್ತಿಯನ್ ಕೋಟಾಕ್ಕೆ ಕಾಂಗ್ರೆಸ್ ಬಿಟ್ಟುಕೊಡ್ತಾ ಬಂದಿತ್ತು.

ಆದರೆ ಈ ಬಾರಿ ಕ್ರಿಸ್ತಿಯನ್ ಕೋಟಾದಿಂದ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಶಿರಸಿ ಅಥವಾ ಕುಮಟಾದಿಂದ ಟಿಕೆಟ್ ಕೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಒಳಗಿನ ಬಿಲ್ಲವ ಮುಖಂಡರು ಮಂಗಳೂರಿನ ಕ್ಷೇತ್ರವನ್ನು ಬಿಲ್ಲವ ಕೋಟಾಕ್ಕೆ ನೀಡುವಂತೆ ಬೇಡಿಕೆ ಇರಿಸಿದ್ದರು. ಮಂಗಳೂರು ಉತ್ತರ ಅಥವಾ ದಕ್ಷಿಣದಲ್ಲಿ ಪದ್ಮರಾಜ್ ಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಮುಂದಿಡಲಾಗಿತ್ತು. ಮಂಗಳೂರು ಉತ್ತರದಲ್ಲಿ ಬಿಲ್ಲವ ಕೋಟಾದಿಂದ ಪ್ರತಿಭಾ ಕುಳಾಯಿ ಟಿಕೆಟ್ ಕೇಳಿದ್ದರು. ಅಲ್ಲದೆ, ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟು ಸೀಟು ಪಡೆಯಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪದ್ಮರಾಜ್ ಹೆಸರು ಫೈನಲ್ ಆಗಿದೆ ಎನ್ನುವ ಮಾಹಿತಿಗಳಿವೆ. ಬಿಲ್ಲವ ಕೋಟಾಕ್ಕೆ ಸೀಟು ಖಾತ್ರಿಯಾದಲ್ಲಿ 1970ರ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಮಂಗಳೂರಿನಲ್ಲಿ ಹಿಂದು ಒಬ್ಬರಿಗೆ ಟಿಕೆಟ್ ನೀಡಿದಂತಾಗುತ್ತದೆ.

ಲೋಬೊ- ಐವಾನ್ ಡಿಸೋಜ ಜಟಾಪಟಿ
ಮಂಗಳೂರು ದಕ್ಷಿಣದಲ್ಲಿ ಸೀಟು ಪಡೆಯಲು ಮಾಜಿ ಶಾಸಕ ಜೆಆರ್ ಲೋಬೊ ಮತ್ತು ಮಾಜಿ ಎಂಎಲ್ಸಿ ಐವಾನ್ ಡಿಸೋಜ ತೀವ್ರ ಲಾಬಿ ನಡೆಸಿದ್ದರು. ಮಂಗಳೂರಿನ ಕೆಥೋಲಿಕ್ ಕ್ರಿಸ್ತಿಯನ್ನರಲ್ಲಿಯೇ ಇವರಿಬ್ಬರ ಪರವಾಗಿ ಪ್ರತ್ಯೇಕ ಬಣ ಹುಟ್ಟಿಕೊಂಡಿತ್ತು. ಬಿಷಪರ ಮೂಲಕ ಒತ್ತಡವನ್ನು ಹೇರುವ ಕೆಲಸವನ್ನೂ ಮಾಡಿತ್ತು. ಆದರೆ ಬಿಷಪ್ ಈ ಬಾರಿ ಯಾರ ಪರವಾಗಿಯೂ ಒತ್ತಡ ಹೇರಿಲ್ಲ ಎನ್ನಲಾಗುತ್ತಿದೆ. ಲೋಬೊ ವಿಚಾರದಲ್ಲಿ ಕೆಥೋಲಿಕ್ ಕ್ರಿಸ್ತಿಯನ್ನರ ಒಳಗಡೆಯೇ ಕೆಲವರ ವಿರೋಧ ಇದ್ದರೆ, ಲೋಬೊ ಪರವಾಗಿದ್ದವರು ಐವಾನ್ ವಿರುದ್ಧ ಲಾಬಿ ನಡೆಸಿದ್ದರು. ಹೀಗಾಗಿ ಇವರಲ್ಲಿ ಯಾರಿಗೆ ಕೊಟ್ಟರೂ ಕಷ್ಟ ಎನ್ನುವ ಸ್ಥಿತಿ ಎದುರಾಗಿತ್ತು. ಇದೇ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಲೋಬೊ ಅಥವಾ ಐವಾನ್ ಡಿಸೋಜ ಇಬ್ಬರಿಗೂ ವಿಧಾನ ಪರಿಷತ್ ಸೀಟು ಕೊಡುವ ಬಗ್ಗೆಯೂ ರಾಜ್ಯ ನಾಯಕರು ಮನವೊಲಿಕೆ ಮಾಡಿದ್ದಾರೆ.

ಉತ್ತರದಲ್ಲಿ ಇನಾಯತ್ ಆಲಿಗೆ ಖಚಿತ
ಮಂಗಳೂರು ದಕ್ಷಿಣದಲ್ಲಿ ಪದ್ಮರಾಜ್ ಗೆ ಟಿಕೆಟ್ ಖಾತ್ರಿಯಾದಲ್ಲಿ ಉತ್ತರದಲ್ಲಿ ಇನಾಯತ್ ಆಲಿ ಕಣಕ್ಕಿಳಿಯುವುದು ಖಚಿತ. ಈಗಾಗಲೇ ಇನಾಯತ್ ಆಲಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿರುವ ಇನಾಯತ್ ಆಲಿ ಹಣಕಾಸಿನಲ್ಲಿ ಪ್ರಭಾವಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ಹಣ ಸುರಿಯುವಷ್ಟು ಪ್ರಾಬಲ್ಯ ಹೊಂದಿದ್ದಾರೆ. ಮೊಯ್ದೀನ್ ಬಾವ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿರುವುದು, ಡಿಕೆಶಿ ಜೊತೆಗೆ ಅಂತರ ಕಾಯ್ದುಕೊಂಡಿರುವುದು ಮೈನಸ್ ಆಗುತ್ತಿದೆ ಎನ್ನಲಾಗುತ್ತಿದೆ.
Mangalore South constituency ticket from Congress may go to Padmaraj from the Billava community, special report by Headline Karnataka. Ticket for Inayath Ali in north constituency is almost guaranteed. A tough fight between Ivan and J R Lobo is going on to bag the MLA tickets.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
14-11-25 11:16 am
Mangalore Correspondent
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm