ಬ್ರೇಕಿಂಗ್ ನ್ಯೂಸ್
15-03-23 04:41 pm Mangalore Correspondent ಕರಾವಳಿ
ಪುತ್ತೂರು, ಮಾರ್ಚ್ 15 : ಒಬ್ಬ ರೌಡಿಶೀಟರ್ ಗೆ ತಲೆಬಾಗುವ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಜನ ಬೇರೇನನ್ನು ನಿರೀಕ್ಷಿಸಲು ಸಾಧ್ಯ. ಇವರು ಪಾಕಿಸ್ತಾನ, ಚೈನಾ ಎದೆಯೊಡ್ಡಿ ನಿಲ್ಲಲು ಸಾಧ್ಯವೇ ಎಂದು ಕಾಂಗ್ರೇಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಪುತ್ತೂರಿನ ಮುರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ನೆಪದಲ್ಲಿ ಪ್ರಧಾನಿ ಮೋದಿ ವಾರಕ್ಕೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊನ್ನೆ ಬೆಂಗಳೂರುವ-ಮೈಸೂರು ಎಕ್ಸ್‌ಪ್ರೆಸ್ ಹೈ ವೇ ಉದ್ಘಾಟನೆಗೆ ಆಗಮಿಸಿದ್ದರು. ಅಲ್ಲಿ ರಸ್ತೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಮೊದಲೇ ಉದ್ಘಾಟನೆ ಮಾಡಿದ್ದಾರೆ.
ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಮಂಡ್ಯದ ರೈತರನ್ನು ಸಿದ್ಧಪಡಿಸಲು ಬಿಜೆಪಿ ಯತ್ನಿಸಿತ್ತು. ಆದರೆ ಬಿಜೆಪಿ ಪಕ್ಷಕ್ಕೆ ಯಾವುದೇ ರೈತ ವ್ಯಕ್ತಿ ಸಿಗದ ಕಾರಣ ಓರ್ವ ರೌಡಿಶೀಟರ್ ನನ್ನು ಪ್ರಧಾನಿಯ ಸ್ವಾಗತಕ್ಕೆ ನಿಯೋಜಿಸಿದೆ. ಪ್ರಧಾನಿ ಮೋದಿ ಆ ರೌಡಿಶೀಟರ್ ಮುಂದೆ ತಲೆಬಾಗಿ ನೀನೆ ನಮ್ಮನ್ನು ನೋಡ್ಕೋಬೇಕು ಎಂದು ನಮಸ್ಕರಿಸಿದ್ದಾರೆ. ಈವರೆಗೂ ದೇಶದ ಪ್ರಧಾನಿ ರೌಡಿಯೊಬ್ಬನಿಗೆ ತಲೆಬಾಗಿ ನಮಸ್ಕರಿಸಿದ್ದನ್ನು ನೋಡಿಲ್ಲ.
ಓರ್ವ ರೌಡಿಶೀಟರ್ ಮುಂದೆ ತಲೆಬಾಗುವ ಪ್ರಧಾನಿ ಮೋದಿಯಿಂದ ಚೈನಾ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಹೈವೇ ಕಾಮಗಾರಿ ಅಪೂರ್ಣಗೊಂಡಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈಗಲೇ ಟೋಲ್ ಸಂಗ್ರಹಿಸಲು ಆರಂಭಿಸಿದೆ ಎಂದ ಅವರು ಬಿಜೆಪಿ ದೇಶದಲ್ಲಿ ಮತ್ತೆ ರಾಜಪ್ರಭುತ್ವವನ್ನು ತರುವ ಪ್ರಯತ್ನದಲ್ಲಿದೆ. ಕೇವಲ ಪಟೇಲರಿಗೆ, ಶಾನುಭೋಗರಿಗೆ ಮಾತ್ರ ಬದುಕಲು ಇಲ್ಲಿ ಅವಕಾಶ ನೀಡಿ, ದೇಶದ ಜನರನ್ನೆಲ್ಲಾ ಗುಲಾಮರನ್ನಾಗಿ ಬಿಜೆಪಿ ಮಾಡಲಿದೆ. ದೇಶದಲ್ಲಿ 18 ಶೇಕಡಾ ಮಹಿಳೆಯರಿಗೆ ಸ್ಥಳೀಯಾಡಳಿತ ಸೇರಿ ಚುನಾವಣೆ ರಾಜಕೀಯದಲ್ಲಿ ಅವಕಾಶ ಕೊಟ್ಟ ಹಿರಿಮೆ ರಾಜೀವ ಗಾಂಧಿಗೆ ಸಲ್ಲುತ್ತದೆ. ಹಾಗಾಗಿ ಜನರು ಯಾರಿಗೆ ಮತ ಕೊಡಬೇಕು ಎಂಬುದನ್ನು ಚಿಂತಿಸಿ ನಿರ್ಧರಿಸಬೇಕು ಎಂದು ಬಿಕೆ ಹರಿಪ್ರಸಾದ್ ಹೇಳಿದರು.
PM Modi with rowdy sheeter surfaces in Karnataka, What more can be expected from PM slams Senior Congress leader BK Hariprasad.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm