ಬ್ರೇಕಿಂಗ್ ನ್ಯೂಸ್
12-03-23 05:36 pm Mangalore Correspondent ಕರಾವಳಿ
ಪುತ್ತೂರು, ಮಾ.12 : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೊಂದು ವಿವಾದ ಮೈಗೆಳೆದುಕೊಂಡಿದ್ದಾರೆ. ಅಶ್ಲೀಲ ಪದ ಬಳಸಿದ್ದಕ್ಕೆ ಒಂದು ಕ್ಷಣ ಇಡೀ ಸಭೆಯೇ ಅವಕ್ಕಾಗಿತ್ತು. ಸಿದ್ದರಾಮಯ್ಯ ಕುರಿತಾಗಿ ಅಶ್ಲೀಲ ಪದ ಬಳಸಿ ತಾವೇ ತಮ್ಮ ಸಣ್ಣತನ ತೋರಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸಂಜೆ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ನೆರೆದಿದ್ದ ಮಹಿಳೆಯರು ಸೇರಿದಂತೆ ನೆರೆದಿದ್ದ ಕಾರ್ಯಕರ್ತರ ಎದುರು ಅಶ್ಲೀಲ ಪದ ಪ್ರಯೋಗ ಮಾಡುವ ಮೂಲಕ ವಿವಾದ ಎಬ್ಬಿಸಿದ್ದಾರೆ.
ಇಂಥ ಪದ ಪ್ರಯೋಗ ಮಾಡುವ ಮೊದಲು ಪತ್ರಕರ್ತರೇ ಇದನ್ನೆಲ್ಲ ಬರೀಬೇಡಿ ಎಂದು ವಿನಂತಿಸಿದರು..! ನಾಲಗೆ ಹರಿಯ ಬಿಟ್ಟ ಮೇಲೆ, ಪತ್ರಕರ್ತರು ಬರೆದರೂ ನನಗೇಗೂ ಬೇಜಾರಿಲ್ಲ ಬಿಡಿ ಎಂದು ಹೇಳುವ ಮೂಲಕ ಅಹಂಕಾರ ತೋರಿಸಿದರು. ಭಾಷಣದುದ್ದಕ್ಕೂ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಏಕವಚನ ಪ್ರಯೋಗದಿಂದಲೇ ಕೆಣಕಿದರು. ಚಾಮುಂಡೇಶ್ವರಿಯಲ್ಲಿ ಸಿದ್ರಾಮಯ್ಯ ಸೋಲಿಸಿದ್ದು ಸ್ವ ಪಕ್ಷದವರೇ. ಹಿಂದೆ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋತಿದ್ದರು. ಅವರು ಗೆದ್ದರೆ ಎಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ನೀಡ್ತಾರೋ ಅನ್ನೋ ಭಯ ಸಿದ್ರಾಮಯ್ಯಗಿತ್ತು. ಅದಕ್ಕೆ ಕುರುಬ ಸಮಾಜದ ಕೆಲವರನ್ನು ಅಲ್ಲಿಗೆ ಕಳಿಸಿ ಪರಮೇಶ್ವರ್ ಗೆಲ್ಲದಂತೆ ನೋಡಿಕೊಂಡರು. ಅದೊಂದು ದಿನ ಪರಮೇಶ್ವರ್ ಸಿಕ್ಕಾಗ ಯಾಕಪ್ಪಾ ಸೋತಿ ಎಂದು ಕೇಳಿದೆ. ಪತ್ರಕರ್ತರು ದಯವಿಟ್ಟು ಇದನ್ನು ಬರೀಬೇಡಿ. ಆ ನನ್ ಮಗ ಸೋಲಿಸಿದ ಎಂದರು.
ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸಿದ್ರಾಮಯ್ಯ ಸೋತ ಬಳಿಕ ಅದೊಂದು ದಿನ ಎದುರು ಸಿಕ್ಕ ಸಿದ್ರಾಮಯ್ಯ ಜತೆ ಯಾಕಪ್ಪಾ ಸೋತಿ ಎಂದು ಕೇಳಿದೆ. ಆ ಸೂ... ಮಗ ಸೋಲಿಸಿದ ಎಂದು ಉತ್ತರಿಸಿದ್ದರು. ಪತ್ರಕರ್ತರು ಇದನ್ನೆಲ್ಲ ಬರೆದರೂ ನನಗೇನೂ ಬೇಜಾರಿಲ್ಲ ಎಂದರು ಈಶ್ವರಪ್ಪ. ಈಶ್ವರಪ್ಪ ಭಾಷಣದಲ್ಲಿ ಹಿಂದುತ್ವ, ರಾಷ್ಟ್ರೀಯತೆ, ಮೋದಿ ಶಬ್ದಗಳು ಬಂದಾಗಲೆಲ್ಲ ಸಭೆಯಿಂದ ಚಪ್ಪಾಳೆ ಸುರಿಮಳೆ ಕೇಳಿ ಬಂದರೆ, ಅಶ್ಲೀಲ ಪದಪ್ರಯೋಗ ಮಾಡುತ್ತಿದ್ದಂತೆ ಇದ್ದಕ್ಕಿದ್ದಂತೆ ಬಿಜೆಪಿ ಸಭೆಯಲ್ಲಿ ಮೌನ ಆವರಿಸಿತು.
Eshwarappa lashes out Siddaramaiah using Vulgar words at Puttur.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm