ಬ್ರೇಕಿಂಗ್ ನ್ಯೂಸ್
10-03-23 06:50 pm Mangalore Correspondent ಕರಾವಳಿ
ಉಳ್ಳಾಲ, ಮಾ.10 : ಹೆದ್ದಾರಿ ಬದಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ನಡೆದು ಮರ, ಗಿಡಗಂಟಿಗಳು ಹೊತ್ತಿ ಉರಿದಿದ್ದು ವಸತಿ ಪ್ರದೇಶಕ್ಕೆ ಬೆಂಕಿ ವ್ಯಾಪಿಸುತ್ತಿರುವುದನ್ನ ಕಂಡ ಹೆದ್ದಾರಿ ಗಸ್ತಿನಲ್ಲಿದ್ದ ಟ್ರಾಫಿಕ್ ಪೊಲೀಸ್ ಟ್ಯಾಂಕರ್ ನೀರು ತರಿಸಿ ಬೆಂಕಿಯನ್ನ ನಂದಿಸಿದ ಘಟನೆ ಕೋಟೆಕಾರು, ಬೀರಿ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೋಟೆಕಾರಿನ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯುಟ್ ಉಂಟಾಗಿ ಘಟನೆ ನಡೆದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸ್ಥಳಕ್ಕೆ ಬಂದ ಮೆಸ್ಕಾಂ ಸಿಬ್ಬಂದಿಗಳು ಟ್ರಾನ್ಸ್ ಫಾರ್ಮರ್ ನಿಂದ ಅವಘಡ ನಡೆದಿಲ್ಲ , ಯಾರೋ ಸಿಗರೇಟ್ ಎಸೆದೋ ಅಥವಾ ಬಿಸಿಲಿನ ಝಲಕ್ಕೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬೆಂಕಿಯ ಕೆನ್ನಾಲಿಗೆ ವಿಶಾಲ ಪ್ರದೇಶದ ಮರ, ಗಿಡ ಗಂಟೆಗಳನ್ನ ಸುಟ್ಟು ಸಮೀಪದಲ್ಲಿದ್ದ ಒಂಟಿ ಮನೆ ವರೆಗೂ ವ್ಯಾಪಿಸತೊಡಗಿತ್ತು. ಈ ವೇಳೆ ಹೆದ್ದಾರಿ ಗಸ್ತು ವಾಹನದಲ್ಲಿದ್ದ ಸಂಚಾರಿ ಠಾಣಾ ಎಎಸ್ಸೈ ಸಂತೋಷ್ ಅವರು ಅಗ್ನಿಶಾಮಕ ದಳಕ್ಕೆ ಎರಡು, ಮೂರು ಬಾರಿ ಫೋನಾಯಿಸಿದರೂ ಸಕರಾತ್ಮಕ ಸ್ಪಂದನೆ ದೊರಕಿಲ್ಲ. ಕೂಡಲೇ ಸ್ಥಳೀಯರಾದ ಗಣೇಶ್ ಭಟ್ ಎಂಬವರು ದೊಡ್ಡ ನೀರಿನ ಟ್ಯಾಂಕರನ್ನು ಒದಗಿಸಿದ್ದಾರೆ. ಟ್ರಾಫಿಕ್ ಕಾನ್ಸ್ಟೇಬಲ್ ನಾಗಪ್ಪ ಗಡದ ಅವರು ಭಾರದ ಫೈಪನ್ನ ಎತ್ತಿ ನೀರು ಹಾಯಿಸಿ ಬೆಂಕಿಯನ್ನ ನಂದಿಸಿದ್ದಾರೆ. ನಾಗಪ್ಪ ಅವರಿಗೆ ಮೆಸ್ಕಾಂ ಸಿಬ್ಬಂದಿಗಳು ಬೆಂಕಿ ನಂದಿಸಲು ಸಹಕಾರ ನೀಡಿದ್ದಾರೆ. ಸಕಾಲಕ್ಕೆ ಅಗ್ನಿಶಾಮಕ ತುರ್ತು ಸೇವೆ ಲಭಿಸದಿದ್ದರೂ ಟ್ರಾಫಿಕ್ ಪೊಲೀಸರೇ ಬೆಂಕಿ ನಂದಿಸಿದ್ದನ್ನ ಸ್ಥಳೀಯ ಕೌನ್ಸಿಲರ್ ರಾಘವ ಗಟ್ಟಿ ಸೇರಿದಂತೆ ನೆರೆದಿದ್ದ ಜನರು ಪ್ರಶಂಸಿಸಿದ್ದಾರೆ.
Mangalore Sudden fire from the transcender suspected, plants tree on fire at Kotekar.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm