ಬ್ರೇಕಿಂಗ್ ನ್ಯೂಸ್
10-03-23 03:05 pm Mangaluru Correspondent ಕರಾವಳಿ
ಮಂಗಳೂರು, ಮಾ.10: ವಕ್ಫ್ ಇಲಾಖೆಯ ಕಾಯ್ದೆ ಏನಿದೆಯೋ ಅದನ್ನು ಉಲ್ಲಂಘಿಸಿ ಉಳ್ಳಾಲ ದರ್ಗಾಕ್ಕೆ ಹೊಸ ಆಡಳಿತ ಸಮಿತಿ ರಚನೆ ಮಾಡಲಾಗಿದೆ. ಇದು ಕಾನೂನು ಬಾಹಿರ ಎಂದು ಉಳ್ಳಾಲ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಕಾನೂನು ಬಾಹಿರವಾಗಿ ವಕ್ಫ್ ಇಲಾಖೆಯಿಂದ ಚುನಾವಣೆ ನಡೆಸಲಾಗಿದೆ. ಚುನಾವಣೆ ನಡೆಯದಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ವಿವಾದ ಇತ್ಯರ್ಥ ಆಗುವ ಮೊದಲೇ ಚುನಾವಣೆ ನಡೆಸಿರುವುದು ಅಕ್ಷಮ್ಯ. ನಾವು ಇದನ್ನು ಒಪ್ಪುವುದಿಲ್ಲ. ಕೋರ್ಟಿನಲ್ಲಿ ಈಗಾಗಲೇ ಪ್ರಶ್ನೆ ಮಾಡಿದ್ದೇವೆ. ಹೊಸ ಕಮಿಟಿ ಬರ್ಖಾಸ್ತು ಆಗಲಿದೆ ಎಂದು ಹೇಳಿದ್ದಾರೆ.
ಉಳ್ಳಾಲ ದರ್ಗಾ ಕಚೇರಿಯ ಬೀಗ ಮುರಿದು ಒಳಹೊಕ್ಕಿದ್ದಾರೆ. ಅಲ್ಲಿ ಸಭೆ ನಡೆಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಿಲ್ಲ. ಎರಡು ಗುಂಪುಗಳ ಮೇಲಾಟದಿಂದ ದರ್ಗಾದಲ್ಲಿ ಆಡಳಿತ ಹಿಡಿದುಕೊಂಡಿದ್ದಾರೆ. ನಮ್ಮ ಆಡಳಿತ ಸಮಿತಿ ಇಂತಹ ಗುಂಪು, ಸಂಘಟನೆಗಳ ಪ್ರಭಾವಕ್ಕೆ ಒಳಗಾಗದೆ ಸೌಹಾರ್ದಯುತವಾಗಿ ಆಡಳಿತ ನಡೆಸುತ್ತಾ ಬಂದಿದೆ. ಈಗಿನ ಬೆಳವಣಿಗೆಗಳಿಂದ ಸಂಘರ್ಷದ ಸ್ಥಿತಿ ಉಂಟಾಗಿದೆ. ಇದರ ಹಿಂದೆ ವಕ್ಫ್ ರಾಜ್ಯಾಧ್ಯಕ್ಷ ಶಾಫಿ ಸ ಅದಿ ಅವರ ಒತ್ತಡ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಇದೆ ಎಂದು ಹೇಳಿದರು.
ಹಿಂದಿನ ಸಮಿತಿಯಲ್ಲಿದ್ದ ಯು.ಕೆ.ಇಲ್ಯಾಸ್, ಆಸಿಫ್ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ಕೆ.ಎನ್. ಮಹಮ್ಮದ್ ಉಪಸ್ಥಿತರಿದ್ದರು.
ಉಳ್ಳಾಲ ದರ್ಗಾದಲ್ಲಿ ಏಳು ವರ್ಷಗಳ ಸರ್ವಾಧಿಕಾರ ಅಂತ್ಯ ; ನೂತನ ಅಧ್ಯಕ್ಷರಾಗಿ ಬಾವಾ ಗುಲಾಮ್ ಹನೀಫ್ ಆಯ್ಕೆ
Mangalore ullal former Dargah president Abdul Rasheed has raised concerns over the formation of a new management committee for the Ullal Dargah, claiming that it was formed in violation of the Waqf Act
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm