ಬ್ರೇಕಿಂಗ್ ನ್ಯೂಸ್
08-03-23 10:49 pm Mangalore Correspondent ಕರಾವಳಿ
ಉಳ್ಳಾಲ, ಮಾ.8 : ಉಳ್ಳಾಲ ದರ್ಗಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹನೀಫ್ ಹಾಜಿ ಅವರಿಗೆ ಜಿಲ್ಲಾ ವಕ್ಫ್ ಅಧಿಕಾರಿ ಸಯ್ಯದ್ ಮೊಹಝ್ಝಂ ಪಾಶ ಅವರು ಬುಧವಾರ ಅಧಿಕಾರ ಹಸ್ತಾಂತರಿಸಿದ್ದಾರೆ. ಈ ವೇಳೆ ನಿಕಟಪೂರ್ವ ಅಧ್ಯಕ್ಷ ರಶೀದ್ ಹಾಜಿ ಅವರೇ ಗೈರಾಗಿದ್ದಾರೆ.
ಬುಧವಾರ ಸಂಜೆ ದರ್ಗಾದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಸಯ್ಯದ್ ಮೊಹಝ್ಝಂ ಪಾಶ ಉಪಸ್ಥಿತಿಯಲ್ಲಿ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧಿಕಾರ ಹಸ್ತಾಂತರ ಮಾಡುವಂತೆ ದರ್ಗಾದ ಕೋಶಾಧಿಕಾರಿ ಯು.ಕೆ. ಇಲ್ಯಾಸ್ ಸಹಿತ ಸಮಿತಿ ಸದಸ್ಯರಿಗೆ ಸೂಚಿಸಿದ್ದು ಈ ವೇಳೆ ಗೊಂದಲ ಸೃಷ್ಟಿಯಾಯಿತು. ಕೋಶಾಧಿಕಾರಿ ಯು.ಕೆ.ಇಲ್ಯಾಸ್ ಮಾತನಾಡಿ ಈಗ ಅಧಿಕಾರ ಹಸ್ತಾಂತರ ಮಾಡುವುದಿಲ್ಲ. ಲೆಕ್ಕಪತ್ರ ಹಸ್ತಾಂತರ ಮಾಡಲು ನೋಟೀಸ್ ನೀಡಿ ಒಂದು ತಿಂಗಳು ಕಾಲಾವಕಾಶ ಕೊಡುವಂತೆ ಕೋರಿದರು. ಅಲ್ಲದೆ, ವಕ್ಫ್ ಬೋರ್ಡ್ ಬೈಲಾ ನೀಡಲಿಲ್ಲವೆಂದು ಅವರು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ವಕ್ಫ್ ಅಧಿಕಾರಿ
ಕಾನೂನು 68 ರ ಪ್ರಕಾರ ಲೆಕ್ಕ ಪತ್ರ, ದಾಖಲೆ ಹಸ್ತಾಂತರ ಮಾಡಲು ಒಂದು ತಿಂಗಳು ಕಾಲಾವಕಾಶ ಇದೆ. ಚುನಾವಣೆಯಲ್ಲಿ ಗೆದ್ದು ಬಂದವರು ಇನ್ನು ಅಧಿಕಾರದಲ್ಲಿ ಇರುತ್ತಾರೆ. ಹೊಸ ಸಮಿತಿ ದರ್ಗಾದ ಹಳೇ ಲೆಕ್ಕ ಕೇಳುವುದು ಬೇಡ. ಹೊಸದಾಗಿ ಆಡಳಿತ ನಡೆಸಬೇಕು ಎಂದು ಹೇಳಿದರು. ಇಂದಿನಿಂದ ಹೊಸ ಸಮಿತಿ ಕಾರ್ಯ ಚಟುವಟಿಕೆ ನಡೆಸಲಿದೆ. ಈವರೆಗೆ ಆಡಳಿತದಲ್ಲಿದ್ದ ಸಮಿತಿಗೆ ಇನ್ನು ಅಧಿಕಾರ ಇರುವುದಿಲ್ಲ ಎಂದು ಹೇಳಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹನೀಫ್ ಹಾಜಿ ಮಾತನಾಡಿ, ಇಂದು ಐದು ಗಂಟೆಯ ಬಳಿಕ ಉಳ್ಳಾಲ ದರ್ಗಾದ ಅಧಿಕಾರ ನಮ್ಮ ಕೈಯಲ್ಲಿ ಇದೆ. ಲೆಕ್ಕಪತ್ರ ದಾಖಲೆ ಕೊಡಲು ಈವರೆಗೆ ಆಡಳಿತದಲ್ಲಿದ್ದವರಿಗೆ ಒಂದು ತಿಂಗಳ ಕಾಲಾವಕಾಶ ಇದೆ. ಅಧ್ಯಕ್ಷ ಕಚೇರಿಯ ಬೀಗ ಅವರು ನೀಡಬಹುದು. ಏನಾದರು ತೊಂದರೆ ಆದರೆ ಅಧಿಕಾರಿಗಳ ಗಮನ ಸೆಳೆಯಬೇಕು. ನಾವು ದರ್ಗಾದ ಸೇವಕರಾಗಿ ಆರಿಸಿ ಬಂದಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಅಧಿಕಾರ ಪಡೆದ ಬಳಿಕ ನೂತನ ಸಮಿತಿ ಸದಸ್ಯರು ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಧ್ಯಕ್ಷರ ಕೊಠಡಿಗೆ ಬೀಗ ಜಡಿದಿದ್ದ ಕಾರಣ ಭೋಜನ ಕೊಠಡಿಯಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಸಲಾಯಿತು. ದರ್ಗಾ ಕೋಶಾಧಿಕಾರಿ ಆಗಿದ್ದ ಯು.ಕೆ. ಇಲ್ಯಾಸ್, ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಫಾರೂಕ್ ಉಳ್ಳಾಲ್ ಮಾತ್ರ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದರ್ಗಾದ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಸಹಿತ ಉಳಿದ ಪದಾಧಿಕಾರಿಗಳು ಗೈರು ಹಾಜರಾಗಿದ್ದರು.
Mangalore Ullal Darga management handed over in mosque president’s absence, Hanif Haji new president. The management of Ullal Darga was handed over on Wednesday March 8. District Wakf officer Sayyed Mohazu Pasha and district Wakf advisory committee president Abdul Nasir Luckystar directed treasurer U K Ilyas and members to hand over the charge. However U K Ilyas requested for a month’s notice period to hand over the accounts alleging that Wakf board has not issued a notice.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm